ಬೆಂಗಳೂರು:ಲೋಕಸಭಾ ಚುನಾವಣೆಗೆ ವಿವಿಧ ಆಯಾಮಗಳಲ್ಲಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ಪ್ರತಿ ಕ್ಷೇತ್ರದ ವಸ್ತುಸ್ಥಿತಿ ಬಗ್ಗೆ ಅರಿತುಕೊಳ್ಳಲು ಮುಂದಾಗಿದೆ. ವಿಪಕ್ಷಗಳ ಸಂಘಟನೆಯನ್ನು ಬಲಗೊಳಿಸಲು ಹೊಸ ಒಕ್ಕೂಟ ರಚಿಸಿಕೊಂಡ ಕಾಂಗ್ರೆಸ್ ಕರ್ನಾ ಟಕದಲ್ಲಿ ಸಭೆ ನಡೆಸಿ ತನ್ನ ತಯಾರಿ ಬಗ್ಗೆ ರಾಜ್ಯಕ್ಕೆ ದೇಶಕ್ಕೆ ಸಂದೇಶ ಕಳಿಸುವ ಪ್ರಯತ್ನ ಮಾಡಿದೆ. ಅದರೊಟ್ಟಿಗೆ ರಾಜ್ಯದ 28 ಲೋಕಸಭೆ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.
ಚುನಾವಣೆಗೆ ಇನ್ನೊಂದು ವರ್ಷ ಇರುವಾಗ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಚಿತ್ರಣ ಹೇಗಿದೆ, ಕಳೆದ ಚುನಾವಣೆಯ ಸ್ಥಿತಿ, ವಿಧಾನಸಭೆ ಚುನಾವಣೆ ಬಳಿಕ ಆಗಿರುವ ಮತ ಬದಲಾವಣೆ, ಜನರ ಮನಸ್ಥಿತಿ, ಜನ ಪ್ರತಿನಿಧಿಗಳ ಬಲ, ಟಿಕೆಟ್ ಆಕಾಂಕ್ಷಿಗಳು, ಪ್ರತಿಪಕ್ಷಗಳ ಬಲಾಬಲ, ಚುನಾವಣೆಯಲ್ಲಿ ಸ್ಥಳೀಯವಾಗಿ ಪರಿಣಾಮ ಬೀರುವ ಸಂಗತಿ, ಹಾಲಿ ಸಂಸದರ ಬಗ್ಗೆ ಇರುವ ಜನರ ನಡುವೆ ಅಭಿಪ್ರಾಯ ಹೀಗೆ ವಿವಿಧ ಮಾಹಿತಿಯನ್ನು ಎಐಸಿಸಿ ಬಯಸಿದೆ.
ಪಕ್ಷದಲ್ಲಿ ಪಳಗಿದ ಕೆಲವು ನಾಯಕರಿಗೆ ವಸ್ತುನಿಷ್ಠ ವರದಿ ಕೊಡುವಂತೆ ದೆಹಲಿಯಿಂದ ಸೂಚನೆ ಬಂದಿದ್ದು, ಮಾಹಿತಿ ಸಂಗ್ರಹ ಕಾರ್ಯ ಇಷ್ಟಕ್ಕೆ ಶುರುವಾಗಲಿದೆ. ಈ ಕಾರ್ಯಕ್ಕೆ ನೇಮಕಗೊಂಡವರು ಜಿಲ್ಲಾವಾರು ಆಯ್ದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ಕ್ಷೇತ್ರ ಚಿತ್ರಣ ದೆಹಲಿಗೆ ಕಳಿಸಿಕೊಡುವರು.
28 ಲೋಕಸಭಾ ಕ್ಷೇತ್ರದ ಪೈಕಿ 20 ಸ್ಥಾನವನ್ನಾದರೂ ಗೆಲ್ಲಬೇಕು ಮತ್ತು ಆ ಮೂಲಕ ಬಿಜೆಪಿ ಬಲ ಕುಗ್ಗಿಸಬೇಕೆಂದು ಕಾಂಗ್ರೆಸ್ ಕರ್ನಾಟಕದತ್ತ ವಿಶೇಷ ಗಮನ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿತ್ತು. ಹಾಸನ ಹಾಗೂ ಬೆಂಗಳೂರು ಗ್ರಾಮಾಂತ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ ಗೆಲುವು ಪಡೆದುಕೊಂಡಿತ್ತು. ಮಂಡ್ಯದಲ್ಲಿ ಪರೋಕ್ಷವಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿತು. ಆದರೆ ಈ ಬಾರಿ ಕಳೆದ ಬಾರಿ ಇದ್ದ ಮೋದಿ ಅಲೆ ಇಲ್ಲವಾಗಿದ್ದು, ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ಕೈ ನಾಯಕರು ಬಯಸಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ಕೂಡ ವಿಧಾನಸಭೆ ಸೋಲಿನಿಂದ ಕುಗ್ಗಿದೆ. ಜೆಡಿಎಸ್ ಶಾಸಕ ಬಲ ಕುಗ್ಗಿರುವುದರ ಲಾಭ ನೇರವಾಗಿ ತನಗೇ ಆಗಲಿದೆ ಎಂದು ಕಾಂಗ್ರೆಸ್ ಭಾವಿಸಿದೆ. 2019ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದ ಹಾಸನದ ಮೇಲೆಯೂ ಕಾಂಗ್ರೆಸ್ ವಿಶೇಷ ಗಮನ ಹರಿಸಿದೆ ಮತ್ತು ಮಂಡ್ಯ ಕ್ಷೇತ್ರವನ್ನು ಈ ಬಾರಿ ಕೈವಶ ಮಾಡಿಕೊಳ್ಳಲೇಬೇಕೆಂದು ಹೊರಟಿದೆ.
ಪಕ್ಷದ ಸಂಘಟನೆಯನ್ನು ಸಕ್ರಿಯವಾಗಿಡುವ ಕೆಲಸ ಕೂಡ ಸದ್ದಿಲ್ಲದೇ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸುವುದು, ರಾಜ್ಯ ಸರ್ಕಾರದ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸಲು ಪ್ರಚಾರ ನಡೆಸುವುದು, ಬೂತ್ ಸಂಘಟನೆ ಸೇರಿ ವಿವಿಧ ಕೆಲಸಗಳಿಗೆ ಕಾರ್ಯಕರ್ತರನ್ನು ತೊಡಗಿಸಲು ಪಕ್ಷ ಬಯಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾದ ಕಾಂಗ್ರೆಸ್ ನಾಯಕರು ಜನ್ಮದಿನದ ಶುಭಾಶಯ ಕೋರಿದರು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಸಚಿವರಾದ ಶಿವರಾಜ್ ತಂಗಡಗಿ, ಮಾಜಿ ಸಚಿವ ಎಚ್.ವಿಶ್ವನಾಥ್, ಅಮರೇಗೌಡ ಬಯ್ಯಾಪುರ, ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಮುಖಂಡರಾದ ಬಿ.ವಿ.ಜಯರಾಮು, ಕೇಶವಮೂರ್ತಿ ಇದ್ದರು.
ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + five =
Remember me
