ತುಮಕೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಯಾವ ಕಾರಣಕ್ಕೆ ದಾಳಿ ನಡೆಸಿದ್ದಾರೆ ಎಂಬುದನ್ನು ಸಿಬಿಐ ಅಧಿಕಾರಿಗಳೇ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.ಶಿರಾದಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ದಾಳಿ ಮಾಡಲು ಕಾರಣವೇನು ಎಂಬುದನ್ನು ತಿಳಿಸುವ ಮೂಲಕ ಜನರಲ್ಲಿರುವ ಸಂಶಯವನ್ನು ಸಿಬಿಐ ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಶಿವಕುಮಾರ್ ಅವರ ಮನೆಯ ಮೇಲೆ ಈ ಹಿಂದೆ ಐಟಿ ಮತ್ತು ಇ.ಡಿ.ಗಳು ದಾಳಿ ನಡೆಸಿದ್ದವು. ಅದರ ಮುಂದುವರಿದ ಭಾಗವೇ ಇದಾಗಿರಬಹುದು. ಆದರೆ ಉಪಾಚುನಾವಣೆಗೂ ಈ ದಾಳಿಗೂ ಸಂಬಂಧವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ನಾವು ಕಾನೂನು ಪ್ರಕಾರವಾಗಿಯೇ ಎಲ್ಲವನ್ನೂ ಮಾಡಿದ್ದಾರೆ ಸಿಬಿಐ ಸೇರಿ ಯಾವುದೇ ದಾಳಿಗೂ ಹೆದರಬೇಕಿಲ್ಲ ಎಂದು ಹೇಳಿದರು.ಇದನ್ನೂ ಓದಿ:ಶಾಲಾ-ಕಾಲೇಜು ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
ತಮ್ಮ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸಿದ್ದರಾಮಯ್ಯನವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರು ಬೆಳೆದು ಬಂದ ಸಂಸ್ಕೃತಿ ಅದು. ಸಿದ್ದರಾಮಯ್ಯನವರಿಗೆ ನೋವು ಇರುವುದು ನನ್ನ ಮೇಲೆ. ಅವರಿಗೆ ಕಾಂಗ್ರೆಸ್ ಸೇರಲು ಶಕ್ತಿ ಕೊಟ್ಟಿದ್ದು ಜೆಡಿಎಸ್​ ಪಕ್ಷ. ಜೆಡಿಎಸ್​ ಕಾರ್ಯಕರ್ತರ ದುಡಿಮೆಯ ಫಲವಾಗಿ ಕಾಂಗ್ರೆಸ್​​ನಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಯಾವ ಪಕ್ಷ ಇವರನ್ನು ಬೆಳೆಸುತ್ತದೋ ಆ ಪಕ್ಷಕ್ಕೆ ಬೆಂಕಿ ಹಾಕುತ್ತಾರೆ. ಕರ್ನಾಟಕ ರಾಜ್ಯ ಕಾಂಗ್ರೆಸ್​ಗೆ ಅಂತಿಮ ಮೊಳೆ ಹೊಡೆಯೋದೂ ಸಿದ್ದರಾಮಯ್ಯನವರೇ ಎಂದು ವ್ಯಂಗ್ಯವಾಡಿದರು.
ಭಾರತದಲ್ಲಿ ಸದ್ಯಕ್ಕಿಲ್ಲ ಗೂಗಲ್​ ಪ್ಲೇ ಸ್ಟೋರ್​ ರೂಲ್ ಜಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
