ಬೆಂಗಳೂರು:ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ಪತ್ನಿ ಹಾಗೂ ಕಾಂಗ್ರೆಸ್​ ಮುಖಂಡ ದಿನೇಶ್ ಗುಂಡೂರಾವ್​ ತಾಯಿ ವರಲಕ್ಷ್ಮಿ ಗುಂಡೂರಾವ್ (80) ಅವರು ವಿಧಿವಶರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬ್ರಾಹ್ಮಣ ಸಂಪ್ರದಾಯದಂತೆ ನವರತ್ನ ಅಗ್ರಹಾರ ಬಳಿಯ ತೋಟದಲ್ಲಿ ಬುಧವಾರ (ಜ.6) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕುಟುಂಬಸ್ಥರು, ಗಣ್ಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ಸಂಬಂಧಿಕರಿಗಾಗಿ ಪೆಂಡಲ್ ಮತ್ತು ಚೇರಿನ ವ್ಯವಸ್ಥೆ ಮಾಡಲಾಗಿದೆ. ಕಳೆದ ರಾತ್ರಿಯೆ ಮೃತದೇಹವನ್ನು ತೋಟಕ್ಕೆ ತರಲಾಗಿದೆ. ತೋಟವು ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರ ಬಳಿಯಿದೆ.
ವರಲಕ್ಷ್ಮಿ ಅವರ ಸಾವಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸಂತಾಪ ಸೂಚಿಸಿದ್ದಾರೆ. ವರಲಕ್ಷ್ಮೀ ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಇಂತಹ ದುಃಖದ ಸಮಯಲ್ಲಿ ಗುಂಡೂರಾವ್​ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
Deeply saddened to hear about the demise of Smt. Varalakshmi Gundu Rao, wife of Former CM Shri. Gundu Rao.
My heartfelt condolences to@dineshgraoand his family in this time of grief.pic.twitter.com/3efe9qE8LU
— DK Shivakumar (@DKShivakumar)January 5, 2021

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + twelve =
Remember me
