ದೆಹಲಿ:ಭಾರತ್​ ಜೋಡೋ ಯಾತ್ರೆ ನಡುವೆಯೂ ದೆಹಲಿಯ ಇಡಿ(ಜಾರಿ ನಿರ್ದೇಶನಾಲಯ) ಕಚೇರಿಯಲ್ಲಿ ಶುಕ್ರವಾರ ಸತತ ಐದೂವರೆ ತಾಸು ವಿಚಾರಣೆ ಎದುರಿಸಿ ಹೊರಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ನಮಗೂ ರಾಜಕೀಯ ಮಾಡೋಕೆ ಬರುತ್ತೆ ಎನ್ನುತ್ತಾ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಡಿಕೆ ಸಹೋದರರು ಯಂಗ್ ಇಂಡಿಯಾ ಟ್ರಸ್ಟ್​ಗೆ ದೇಣಿಗೆ ನೀಡಿದ್ದ ಹಿನ್ನೆಲೆಯಲ್ಲಿ ಅ.7 ರಂದು ವಿಚಾರಣೆಗೆ ಬರುವಂತೆ ಸೆ.23ರಂದೇ ಇವರಿಬ್ಬರಿಗೂ ಇಡಿ ಸಮನ್ಸ್​ ಜಾರಿ ಮಾಡಿತ್ತು. ಅದರಂತೆ ಸಹೋದರರಿಬ್ಬರೂ ವಿಚಾರಣೆಗೆ ಹಾಜಾಗಿದ್ದರು. ಇಬ್ಬರನ್ನೂ ಇಡಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಎದುರಿಸಿ ಇಡಿ ಕಚೇರಿಯಿಂದ ಹೊರ ಬಂದ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ಬಗೆಗಿನ ದಾಖಲೆ ಕೇಳಿದ್ದಾರೆ. ಈ ಹಿಂದೆಯೇ ಮಾಹಿತಿ ನೀಡಿದ್ದೆ. ಮತ್ತೆ ಕೇಳಿದ್ದಾರೆ. ಎಲ್ಲವನ್ನೂ ಸಲ್ಲಿಸುತ್ತೇವೆ. ರಾಜಕೀಯವನ್ನು ರಾಜಕೀಯ ಅಖಾಡದಲ್ಲಿ ಮಾಡಬೇಕು. ತನಿಖಾ ಸಂಸ್ಥೆ ಕಚೇರಿಗಳಲ್ಲಿ ಅಲ್ಲ. ನಾವೂ ರಾಜಕೀಯ ಮಾಡೋಕೆ ಸಿದ್ಧರಿದ್ದೇವೆ ಎಂದರು.
ಡಿ.ಕೆ.ಸುರೇಶ್​ ಮಾತನಾಡಿ, ಯಂಗ್ ಇಂಡಿಯಾ ಟ್ರಸ್ಟ್​ಗೆ ಎಪ್ರಿಲ್ ತಿಂಗಳಲ್ಲಿ 25 ಲಕ್ಷ ರೂ. ದೇಣಿಗೆ ನೀಡಿದ್ದೆವು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ತೆರಿಗೆ ನೀಡುವುದು ಬಾಕಿ ಇದ್ದರೆ ನೀಡಲು ನಾವು ಸಿದ್ದ. ಕಳೆದ 10 ವರ್ಷದ ಹಣಕಾಸು ವ್ಯವಹಾರದ ಬಗ್ಗೆಯೂ ಮಾಹಿತಿ ಕೇಳಿದ್ದಾರೆ. ಅದನ್ನ ಆನ್​ಲೈನ್ ಮೂಲಕ ಸಲ್ಲಿಸುತ್ತೇವೆ. ಯಾವಾಗ ಕರೆಯುತ್ತೇವೋ ಅವಾಗ ಬರಬೇಕು ಅಂದಿದ್ದಾರೆ. ಮುಂದೆ ವಿಚಾರಣೆಗೆ ಕರೆದರೆ ಬರುತ್ತೇವೆ ಎಂದರು.
Delhi | The questioning for today is over. I have agreed to submit the documents that have been sought from me: Congress leader DK Shivakumar on his ED questioning in connection with a probe related to their financial contribution to Young India Private Limited.pic.twitter.com/8fop1Zhz3V
— ANI (@ANI)October 7, 2022

ಕನ್ನಡ ರಾಜ್ಯೋತ್ಸವ: ಅ.28ರಂದು ಕೋಟಿ ಕಂಠ ಗಾಯನ, ನಾಡಗೀತೆ ಸೇರಿ 5 ಜನಪ್ರಿಯ ಗೀತೆಗಳ ಪ್ರಸ್ತುತಿ

ಲವ್​ ಜಿಹಾದ್​ ಬಲೆಗೆ ಕನ್ನಡದ ನಟಿ? ಕಣ್ಣೀರಿಟ್ಟು ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಿವ್ಯಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 7 =
Remember me
