ಬೆಂಗಳೂರು:ಬಿಜೆಪಿ ಶಾಸಕ ಗೋಪಾಲಯ್ಯ ಅವರಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಕ್ಕೊಳಗಾಗಿದ್ದ ಪದ್ಮಾರಾಜ್​ಗೆ 39ನೇ ಎಸಿಎಂಎಂ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಪದ್ಮರಾಜ್​ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಇದನ್ನೂ ಓದಿ:‘ಜೈ ಹನುಮಾನ್‌’ ಸೀಕ್ವೆಲ್ ರಾಕಿ ಭಾಯ್​ ಎಂಟ್ರಿ ಫಿಕ್ಸ್​​!?
ಜಾಮೀನು‌ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನು ಅಲ್ಲ. ಮಂಜುನಾಥನ ಮೇಲೆ ಅಣೆ ಮಾಡ್ತೀನಿ ನಾನು ಬೆದರಿಕೆ ಹಾಕಿಲ್ಲ ಎಂದು ಹೇಳಿದರು.
ಶಾಸಕ ಗೋಪಾಲಯ್ಯ ಅವರಿಗೆ ಗುತ್ತಿಗೆ ಕೊಡಿಸುವ ವಿಚಾರಕ್ಕೆ 15 ಲಕ್ಷ ರೂಪಾಯಿ ಹಣ ನೀಡಿದ್ದೆ. ಗುತ್ತಿಗೆ ಕೊಡಿಸಲಿಲ್ಲ ಇದರಿಂದ ಪರಸ್ಪರ ಒಂದಷ್ಟು ಮಾತನಾಡಿಕೊಂಡಿದ್ದೇವೆ.ಆದರೆ ಜೀವ ಬೆದರಿಕೆ ಹಾಕಿಲ್ಲ. ನಾನು 15 ಲಕ್ಷ ಹಣ ನೀಡಿದ್ದ ಹಣ ಕೇಳಲು ಕರೆ ಮಾಡಿದ್ದೆ. ಈ ವೇಳೆ ಕೋಪದಿಂದ ಮಾತನಾಡಿದರು. ಹೀಗಾಗಿ ನಾನು ಮಾತನಾಡಿದ್ದೇನೆ ಅಷ್ಟೇ. ನನ್ನ 15 ಲಕ್ಷ ಹಣ ಅದನ್ನು ವಾಪಸ್​ ಕೇಳಿದ್ದೇನೆ ಎಂದರು.
ಈಗಿನ ವಿರೋಧ ಪಕ್ಷ ನಾಯಕ ಆರ್​​ ಆಶೋಕ್ ಅವರಿಗೂ ಹಣ ನೀಡಿದ್ದೆ. 2010ರಲ್ಲಿ ನನ್ನನ್ನು ಮೇಯರ್ ಮಾಡುತ್ತೇನೆ ಅಂದು ಹಣ ಪಡೆದಿದ್ದರು. 2010ರಲ್ಲಿ ನಾನು 1 ಕೋಟಿ ಹಣ ನೀಡಿದ್ದೆ. ಅಂದು ಮೈಸೂರಿನ ನಾಗೇಂದ್ರ ಅವರು ಇದಕ್ಕೆಲ್ಲಾ ಮಧ್ಯಸ್ಥಿಕೆ ವಹಿಸಿದ್ದರ ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದರು. ಕಾಂಗ್ರೆಸ್‌ ಸೇರ್ಪಡೆಯಾದ ನಂತರ ಆ ಹಣವನ್ನು ವಾಪಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

‘ಜೈ ಹನುಮಾನ್‌’ ಸೀಕ್ವೆಲ್ ರಾಕಿ ಭಾಯ್​ ಎಂಟ್ರಿ ಫಿಕ್ಸ್​​!?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 4 =
Remember me
