ಬೆಂಗಳೂರು:ರಾಜ್ಯದಲ್ಲಿನ ಕಾಂಗ್ರೆಸ್​ ನಾಯಕರನ್ನು ಬಿಜೆಪಿ ಒಂದೊಂದಾಗಿ ಕಾಣೆಯಾಗಿಸುತ್ತಿದೆ. ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಣೆಯಾಗಿಸಿದ್ದ ಬಿಜೆಪಿ, ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ನಾಪತ್ತೆ ಆಗಿಸಿದೆ.
‘ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್​ ಖರ್ಗೆ ಕಾಣೆಯಾಗಿದ್ದಾರೆ. ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತ ಗ್ರಾಮ ವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿ ಕೊಡಿ!’ ಎಂದು ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಕಾಣೆಯಾದವರ ಪ್ರಕಟಣೆ ಮಾದರಿಯಲ್ಲಿನ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ
ಅಂದಹಾಗೆ ಕಳೆದ ವರ್ಷವೂ ಪ್ರಿಯಾಂಕ್ ಖರ್ಗೆ ವಿಚಾರವಾಗಿ ಇಂಥದ್ದೇ ಪ್ರಕಟಣೆ ಹೊರಡಿಸಲಾಗಿತ್ತು. ‘ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ’ ಎಂದು ಬಿಜೆಪಿ ಯುವ ಮುಖಂಡ ಅರವಿಂದ್ ಚೌಹಾಣ್​ ಎಂಬವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದ ಹಲವೆಡೆ ಪೋಸ್ಟರ್ ಅಂಟಿಸಿದ್ದರು.
ಇದನ್ನೂ ಓದಿ:ಗಾಂಧಿನಗರ ಶಾಸಕ ದಿನೇಶ್‌ ಗುಂಡೂರಾವ್‌ ಕಾಣೆಯಾಗಿದ್ದಾರೆ: ಎಎಪಿ
ಕೆಲವು ದಿನಗಳ ಹಿಂದೆ, ‘ಡಿ.ಕೆ.ಶಿವಕುಮಾರ್​ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಂಡಿ’ ಎಂದು ಕಾಣೆಯಾದವರ ಜಾಹೀರಾತು ಮಾದರಿಯಲ್ಲಿ ಪೋಸ್ಟರ್​ ರಚಿಸಿ ರಾಜ್ಯ ಬಿಜೆಪಿಯ ಅಧಿಕೃತ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಇದನ್ನೂ ಓದಿ:‘ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ’: ಪೋಸ್ಟರ್ ಹರಿಬಿಟ್ಟ ಬಿಜೆಪಿ
ಬಿಜೆಪಿಯ ಈ ಕಾಣೆಯಾಗಿದ್ದಾರೆ ಪ್ರಕಟಣೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಜನರಿಂದ ತಿರಸ್ಕಾರಕ್ಕೆ ಒಳಗಾಗಿ, ದೆಹಲಿಯಲ್ಲಿ ಮರ್ಯಾದೆ ಸಿಗದೆ, ರಾಜ್ಯದಲ್ಲಿ ಅಧಿಕಾರದ ಕುರ್ಚಿ ಸಿಗದೆ ಬಿಜೆಪಿಗರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:‘ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ…’ ಚಿತ್ತಾಪುರ ನಗರದಲ್ಲಿ ಪೋಸ್ಟರ್​
ಅಲ್ಲದೆ, ರಾಜ್ಯದಲ್ಲಿ ಕಾಣೆಯಾಗಿರೋದು ಕಾಂಗ್ರೆಸ್ ನಾಯಕರಲ್ಲ.. ಕಾಣೆಯಾಗಿರುವುದು ಬಿಜೆಪಿಗರ ಬೆನ್ನು ಮೂಳೆ, ಕಾಣೆಯಾಗಿರುವುದು ಬಿಜೆಪಿಯ ನಾಯಕತ್ವ, ಕಾಣೆಯಾಗಿರುವುದು ಬಿಜೆಪಿಗರ ಸ್ವಾಭಿಮಾನ, ಕಾಣೆಯಾಗಿರುವುದು ಬಿಜೆಪಿಯ ಅಸ್ತಿತ್ವ ಎಂದಿರುವ ಪ್ರಿಯಾಂಕ್​, ಬಿಜೆಪಿಯಲ್ಲಿ ನಾಯಕತ್ವವೇ ಕಾಣೆಯಾಗಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಜನರಿಂದ ತಿರಸ್ಕಾರಕ್ಕೆ ಒಳಗಾಗಿ, ದೆಹಲಿಯಲ್ಲಿ ಮರ್ಯಾದೆ ಸಿಗದೆ, ರಾಜ್ಯದಲ್ಲಿ ಅಧಿಕಾರದ ಕುರ್ಚಿ ಸಿಗದೆ ಬಿಜೆಪಿಗರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ!
ರಾಜ್ಯದಲ್ಲಿ ಕಾಣೆಯಾಗಿರೋದು ಕಾಂಗ್ರೆಸ್ ನಾಯಕರಲ್ಲ.
●ಕಾಣೆಯಾಗಿರುವುದು ಬಿಜೆಪಿಗರ ಬೆನ್ನು ಮೂಳೆ!
– ರಾಜ್ಯಕ್ಕೆ ಕೇಂದ್ರದಿಂದ 540 ಕೋಟಿ ನರೇಗಾ…https://t.co/eLTlgutH7W
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge)October 18, 2023

ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + sixteen =
Remember me
