ಮೈಸೂರು:ಕಟ್ಟಬೇಕಾದ ಬಾಡಿಗೆ ಕಟ್ಟದಿದ್ದರೆ ಮಾಲಕರು ಬಂದು ವಿಚಾರಿಸುತ್ತಾರೆ. ಜಾಗದ ಮಾಲಕರು ಬಂದಾಗ ಬಾಡಿಗೆಗಿರುವ ವ್ಯಕ್ತಿ ತಗ್ಗಿ ಬಗ್ಗಿ ನಡೆಯುವುದು ಸಹಜ. ಆದರೆ ಇಲ್ಲಿ ‘ನೀವು ‘ಬಾಡಿಗೆ ಕಟ್ಟಿಲ್ಲ. ಆದಷ್ಟು ಬೇಗನೆ ಕಟ್ಟಿ ಬಿಡಿ’ ಎಂದು ನೋಟೀಸ್​ ನೀಡಿದ್ದ ಅಧಿಕಾರಿಗಳ ಮೇಲೆ ಈ ವ್ಯಕ್ತಿಯ ಪತ್ನಿ ಮಚ್ಚು ಎತ್ತಿದ್ದಾಳೆ!
ಈತ ಕಾಂಗ್ರೆಸ್​ ನಾಯಕ. ಮೈಸೂರಿನಲ್ಲಿ ಶಫಿ ಎನ್ನುವ ಈ ಕಾಂಗ್ರೆಸ್​ ನಾಯಕ ಕಾಲೇಜು ನಡೆಸಲು ಕಟ್ಟಡ ಬಾಡಿಗೆಗೆ ಪಡೆದಿದ್ದ. ಆದರೆ ಈ ಭೂಪ ಅನೇಕ ಸಮಯದಿಂದ ಬಾಡಿಗೆ ಕಟ್ಟಿರಲಿಲ್ಲ. ಇದರಿಂದಾಗಿ ಪಾವತಿಸಬೇಕಾದ ಒಟ್ಟು ಬಾಕಿ ಮೊತ್ತ 1 ಕೋಟಿ 80 ಲಕ್ಷವನ್ನೂ ಮೀರಿತ್ತು.
ಬಾಕಿ ಹಣವನ್ನು ಇನ್ನಾದರೂ ವಾಪಸ್​ ಕೊಡಲಿ ಎಂದು ಡಿಪೊ ಅಧಿಕಾರಿಗಳು ಶಫಿಗೆ ಸ್ಥಳಕ್ಕೆ ಬಂದು ನೋಟೀಸ್​ ನೀಡಿದ್ದಾರೆ. ಇಷ್ಟಕ್ಕೇ ಸಿಟ್ಟುಗೊಂಡ ದಂಪತಿ, ಡಿಪೋಗೆ ತೆರಳಿ ರಂಪಾಟ ಮಾಡಿದ್ದಾರೆ. ಈ ಸಂದರ್ಭ ರೊಚ್ಚಿಗೆದ್ದ ಶಫಿ ಪತ್ನಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಮಚ್ಚು ಎತ್ತಿದ್ದಾಳೆ. ಇದಿಷ್ಟೇ ಸಾಲಲ್ಲ ಎಂದು ಅಧಿಕಾರಿಗಳನ್ನು ಅಆಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆರ ಮಾಡಿದ್ದಾರೆ.
ಈ ದಂಪತಿಯ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ. ಹಿಡಿದಿದ್ದಾರೆ. ಈಗ ದಂಪತಿ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ದಂಪತಿ ತಲೆ ಮರೆಸಿಕೊಂಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 13 =
Remember me
