| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಸೋಲಿನ ಆತ್ಮಾವಲೋಕನದ ಆಪರೇಷನ್ ಶುರುವಾಗಿದೆ. ಕಾರಣಗಳ ಬೆನ್ನತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ಸತ್ಯಶೋಧನೆಯಲ್ಲಿ ಬಯಲಿಗೆ ಬಂದ ಅಚ್ಚರಿ ಕಂಡು ದಂಗಾಗಿದ್ದಾರೆ.ಆಡಳಿತಾರೂಢ ಕಾಂಗ್ರೆಸ್ 80ಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ಗೆಮುನ್ನಡೆ ಬಿಟ್ಟುಕೊಟ್ಟಿದೆ. ಅಂದರೆ ಕಾಂಗ್ರೆಸ್ ಶಾಸಕರಿರುವ ಕಡೆ ಮೈತ್ರಿ ಅಭ್ಯರ್ಥಿಗಳಿಗೆ ಲೀಡ್ ಸಿಕ್ಕಿದೆ. ಅದೇ ರೀತಿ ಬಿಜೆಪಿ ಶಾಸಕರಿರುವ 18 ಕಡೆ ಕಾಂಗ್ರೆಸ್​ಗೆ ಲಾಭವಾಗಿದೆ. ಜೆಡಿಎಸ್ ವಿಚಾರಕ್ಕೆ ಬಂದರೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಮುನ್ನಡೆ ಬಿಟ್ಟುಕೊಟ್ಟರೆ, ಎಂಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಕೊಡಿಸುವಲ್ಲಿ ಸಫಲವಾಗಿದೆ.
ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್​ನ 135 ಶಾಸಕರಿರುವ ಕ್ಷೇತ್ರಗಳ ಪೈಕಿ 74 ಕಡೆ ಕಾಂಗ್ರೆಸ್ ಲೀಡ್ ಕಳೆದುಕೊಂಡಿದೆ. ಅಂದರೆ ಶಾಸಕರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಿಡಿತ ಸಾಧಿಸದೇಇರುವುದು ಸ್ಪಷ್ಟವಾಗಿ ಗೋಚರಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಜನರ ಆಯ್ಕೆ ಬೇರೆಯದೇ ಆಗಿರುತ್ತದೆ ಎಂಬುದು ಸಹ ಸ್ಪಷ್ಟ. ಅಲ್ಲದೆ ಲೋಕಸಭೆ ಚುನಾವಣೆ ತಯಾರಿ ವೇಳೆ ಕಾಂಗ್ರೆಸ್ ತನ್ನ ಶಾಸಕರಿಗೆ ಲೀಡ್ ಕೊಡಿಸುವ ಗುರಿ ನೀಡಿತ್ತು. ಪಕ್ಷದಲ್ಲಿ ಜವಾಬ್ದಾರಿ ನೀಡುವಾಗ, ನೇಮಕ ಸಂದರ್ಭಗಳಲ್ಲಿ ಇದನ್ನು ಪರಿಗಣಿಸಲಾಗುತ್ತದೆ ಎಂಬ ಸ್ಪಷ್ಟ ಸೂಚನೆ ರವಾನಿಸಿತ್ತು.
ಲೀಡ್ ಬಿಟ್ಟುಕೊಟ್ಟ ಸಚಿವರು:ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಚಿವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಿತ್ತು. ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದೇ ಇದ್ದರೆ ತಲೆ ತಂಡ ನಿಶ್ಚಿತ ಎಂದು ಎಚ್ಚರಿಸಿತ್ತು. ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣಕ್ಕೆ ಸ್ವತಃ ಕಣಕ್ಕಿಳಿಯಿರಿ ಅಥವಾ ಕುಟುಂಬದವರನ್ನೇ ನಿಲ್ಲಿಸಿ ಎಂದು ಸೂಚಿಸಿತ್ತು. ಈ ನಡುವೆ 14 ಸಚಿವರು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿರುವ ಸಚಿವರೆಂದರೆ ಸಂತೋಷ್ ಲಾಡ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ, ಜಿ.ಪರಮೇಶ್ವರ್, ಡಿ. ಸುಧಾಕರ್, ಕೃಷ್ಣಬೈರೇಗೌಡ, ರಾಜಣ್ಣ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಚಲುವರಾಯಸ್ವಾಮಿ ಮತ್ತು ಎಂ.ಸಿ.ಸುಧಾಕರ್.
ದಳ-ಕಮಲ ಮೈತ್ರಿ ಭಾಗಶಃ ಸಕ್ಸಸ್:ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದ್ದವು. ಅಚ್ಚರಿ ಎಂಬಂತೆ ಈ ಮೈತ್ರಿ ಭಾಗಶಃ ಯಶಕಂಡಿದೆ . ಪ್ರಜ್ವಲ್ ರೇವಣ್ಣ ಪೆನ್​ಡ್ರೖೆವ್ ಪ್ರಕರಣ ಮುನ್ನೆಲೆಗೆ ಬಾರದೇ ಹೋಗಿದ್ದಲ್ಲಿ ರಾಜ್ಯದಲ್ಲಿ ನಡೆದ ಎರಡನೇ ಚರಣದ ಮತದಾನದ ವೇಳೆಯೂ ಬಿಜೆಪಿ ಅಭ್ಯರ್ಥಿಗಳಿಗೆ ಇನ್ನೊಂದಿಷ್ಟು ಅನುಕೂಲಕರವಾಗುತ್ತಿತ್ತು ಎಂಬ ಮಾತೂ ಕೇಳಿಬರುತ್ತಿದೆ. ಮೈತ್ರಿ ಲೆಕ್ಕಾಚಾರವನ್ನು ಪರಿಗಣಿಸಿದರೆ 142 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಲೀಡ್ ಸಿಕ್ಕಿದೆ. 87 ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್​ಗೆ ಲೀಡ್ ಸಿಕ್ಕಿದೆ.
.ಕಾಂಗ್ರೆಸ್ ಶಾಸಕರು 60 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗೆ ಲೀಡ್ ಉಳಿಸಿಕೊಂಡಿದ್ದಾರೆ
.ಕಾಂಗ್ರೆಸ್ ಶಾಸಕರಿರುವ 70 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ
.ಕಾಂಗ್ರೆಸ್ ಶಾಸಕರಿರುವ 11 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಲೀಡ್ ಪಡೆದಿದ್ದಾರೆ
.42 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸಿದ್ದಾರೆ
.ಬಿಜೆಪಿ ಶಾಸಕರಿರುವ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೀಡ್ ಪಡೆದುಕೊಂಡಿದೆ
.ಎರಡು ಕಡೆ ಬಿಜೆಪಿ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಲೀಡ್ ಕೊಟ್ಟಿದ್ದಾರೆ
.7 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಕೊಡಿಸಿದ್ದಾರೆ
.7 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೂ ಕಾಂಗ್ರೆಸ್ ಲೀಡ್ ಪಡೆದಿದೆ
ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ನಾಗೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 7 =
Remember me
