ಬೆಂಗಳೂರು:ಸರ್ಕಾರದ ವಿರುದ್ಧ ಯಡಿಯೂರಪ್ಪನವರ ಕೈಯಲ್ಲಿ ಪತ್ರಿಕಾಗೋಷ್ಠಿ ಮಾಡಿಸಿದ ರಾಜ್ಯ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಗತಿ ಇಲ್ಲದೆ ಹೋಗಿದ್ದು ಶೋಚನೀಯ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬೇಡವಾಗಿದ್ದ ಬಿಎಸ್‌ವೈ ಈಗ ಪತ್ರಿಕಾಗೋಷ್ಠಿ ನಡೆಸಲು ಬೇಕಾಯಿತು. ಅಂದು ಅವರ ಕಣ್ಣೀರಿಗೆ ಬೆಲೆ ಕೊಡದ ಬಿಜೆಪಿಗೆ ಈಗ ಅವರ ಆಶ್ರಯ ಬೇಕಾಯ್ತೆ? ಈ ಆಶ್ರಯ ಕೇವಲ ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವೇ? ಎಂದು ಪ್ರಶ್ನೆ ಮಾಡಿದೆ.ಹೈಕಮಾಂಡ್ ನಾಯಕರು ಬಿಎಸ್‌ವೈರನ್ನು ಅವಮಾನಿಸಿದಾಗ ತುಟಿ ಬಿಚ್ಚದ ಬಿಜೆಪಿ ಈಗ ಸರ್ಕಾರದ ವಿರುದ್ಧ ಮಾತನಾಡಿಸಲು ಮಾತ್ರ ಅಗತ್ಯ ಬಿದ್ದರೆ? ಎಂದು ಕುಟುಕಿದೆ. ಹಾಗೆಯೇ, ನಮ್ಮ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲು ಬಿಜೆಪಿಗೆ ನಾಯಕರಿಲ್ಲದೆ ಪದಚ್ಯುತ ನಾಯಕ ಬಿಎಸ್‌ವೈ ಅವರನ್ನು ಕರೆಸಿ ಕೂರಿಸಿದೆ ಎಂದಿದೆ.ಇದೇ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಕೆಲವೇ ದಿನಗಳ ಹಿಂದೆ ಕರೆಸಿ ಅವಮಾನಿಸಿತ್ತು, ನಿರ್ಗಮಿತ ನಾಯಕನಿಗೆ ನಯಾಪೈಸೆ ಬೆಲೆ ಕೊಡದ ಬಿಜೆಪಿ ಈಗ ಹಳೆ ಮಾಲೀಕನ ಪಾದವೇ ಗತಿ ಎನ್ನುವಂತೆ ಯಡಿಯೂರಪ್ಪನವರ ಮೊರೆ ಹೋಗಿದೆ. ಇನ್ನು ಜೆಡಿಎಸ್ ಬಿಜೆಪಿಯ ಆಶ್ರಯದಲ್ಲಿದೆಯೋ, ಬಿಜೆಪಿ ಜೆಡಿಎಸ್ ಸೇರಿಗಿನ ಆಶ್ರಯ ಪಡೆದಿದೆಯೋ ಎಂಬ ಅನುಮಾನ ಬಿಜೆಪಿಗರಿಗೇ ಶುರುವಾಗಿದೆ ಎಂದು ಹಾಸ್ಯ ಮಾಡಿದೆ.ವಿರೋಧ ಪಕ್ಷದ ನಾಯಕನಿಲ್ಲದೆ ಸದನದ ಒಳಗೂ ಹೊರಗೂ ಬಿಜೆಪಿ ಅಬ್ಬೇಪಾರಿಯಂತಾಗಿದೆ, ಈ ಬಗ್ಗೆ ಬಿಜೆಪಿ ಶಾಸಕರ ಗೋಳು ಮುಗಿಲು ಮುಟ್ಟಿದೆ. ಯಡಿಯೂರಪ್ಪರನ್ನೇ ದೆಹಲಿಯಲ್ಲಿ ಭೇಟಿಯಾಗದೆ ಅವಮಾನಿಸಿ ಕಳಿಸಿದೆ ಹೈಕಮಾಂಡ್, ಮೂಲೆಗುಂಪಾದ ಯಡಿಯೂರಪ್ಪರಲ್ಲಿ ಗೋಳು ಹೇಳಿಕೊಂಡರೆ ಉಪಯೋಗವಿದೆಯೇ? ಒಟ್ಟಿನಲ್ಲಿ ರಾಜ್ಯ ಬಿಜೆಪಿ ಈಗ ಮುಳುಗಿ ತಳ ಸೇರಿದ ಹಡಗು ಎಂದು ಕಾಲೆಳೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + thirteen =
Remember me
