ಬೆಂಗಳೂರು:ಬಿಜೆಪಿಯು ದೇಶದ ಹಿತರಕ್ಷಣೆಗೆ ಆದ್ಯತೆ ಕೊಟ್ಟಿದೆ. ಅಧಿಕಾರ ಗಳಿಕೆ ಮುಖ್ಯವಲ್ಲ. ಇದನ್ನು ಅರಿತುಕೊಂಡರೆ ಎಲ್ಲವೂ ಸರಿಹೋಗಲಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಅದರಲ್ಲೂ ವಿಶೇóಷವಾಗಿ ಮುಸಲ್ಮಾನ ಬಂಧುಗಳನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ನಾವು ಮುಸಲ್ಮಾನರ ಪರ ಎನ್ನುವ ಕಾಂಗ್ರೆಸ್ ಪಕ್ಷ ಎಷ್ಟು ಮುಸಲ್ಮಾನ ಮುಖ್ಯಮಂತ್ರಿಗಳನ್ನು ಮಾಡಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಮುಸಲ್ಮಾನರನ್ನಾದರೂ ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ಅವರ ಪರಿಸ್ಥಿತಿ ಗಮನಿಸಿದ್ದಾರಾ? ಅವರ ಕಾಲೊನಿಗಳಿಗೆ ಹೋಗಿದ್ದಾರಾ? ಎಂದು ಕೇಳಿದರು. ಜೋಕರ್‍ಗಳ ಥರ ಇಬ್ಬರನ್ನು ಮುಂದೆ ಇಟ್ಟು ಬಿಡುತ್ತಾರೆ. ಅವರಿಗೆ ಅಧಿಕಾರ ಕೊಡುತ್ತಾರೆ. ಅವರು ಇಡೀ ಸಮುದಾಯವನ್ನು ಗುತ್ತಿಗೆ ಪಡೆದವರಂತೆ ಆಡುತ್ತಿರುತ್ತಾರೆ. ದಲಿತರದೂ ಅದೇ ಥರದ ಪರಿಸ್ಥಿತಿ ಎಂದು ಛಲವಾದಿ ಹೇಳಿದರು.
ಬಿಜೆಪಿ ಯಾರ ವಿರೋಧಿಯೂ ಅಲ್ಲ. ದೇಶ ಸುಭದ್ರವಾಗಿರಬೇಕು. ಜನರ ಸುರಕ್ಷತೆ ಮುಖ್ಯ ಎಂಬುದು ನಮ್ಮ ಉದ್ದೇಶ ಎಂದರು. ಬೇರೆಯವರು ಮೂಗು ತೂರಿಸುವುದನ್ನು ತಡೆಯಲು 370ನೇ ವಿಧಿಯನ್ನು ಜಮ್ಮು- ಕಾಶ್ಮೀರದಲ್ಲಿ ರದ್ದು ಪಡಿಸಲಾಗಿದೆ ಎಂದರು.
ಬಿಜೆಪಿಯಲ್ಲಿ ಮುಸಲ್ಮಾನರಿಗೆ ವಿಶ್ವಾಸ ಕಡಿಮೆ. ತಪ್ಪು ಅವರದಲ್ಲ. ಬಿಜೆಪಿಯದೂ ತಪ್ಪಲ್ಲ. ನಮಗೆ ವಿಷ ಹಾಕುವವರು ಯಾರು? ಯಾಕೆ ಎಂಬುದು ಅರಿವಾದರೆ ನಮ್ಮಲ್ಲಿ ಜಗಳ ಬರುವುದಿಲ್ಲ ಎಂದರಲ್ಲದೆ, ಅದು ಅರಿವಾಗದೆ ಇದ್ದರೆ ಜಗಳ ಅನಿವಾರ್ಯ ಎಂದು ತಿಳಿಸಿದರು.
ಬಿಜೆಪಿ ಎಂದರೆ ಅಲ್ಪಸಂಖ್ಯಾತರ ವಿರೋಧಿ; ಬಿಜೆಪಿ ಬಂದರೆ, ನಿಮ್ಮನ್ನು ಪಾಕಿಸ್ತಾನಕ್ಕೆ ಕಳಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಅಪಘಾನಿಸ್ತಾನಕ್ಕೆ ಕಳಿಸ್ತಾರೆ ಎನ್ನುತ್ತಾರೆ. ಇವೆಲ್ಲ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇದು 11ನೇ ವರ್ಷ. ನಿಮ್ಮನ್ನು ಯಾಕೆ ಬಿಜೆಪಿ ಪಾಕಿಸ್ತಾನಕ್ಕೆ ಕಳುಹಿಸಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರನ್ನು ಯಾರೂ ಕಳಿಸಲು ಅಸಾಧ್ಯವೆಂದರು.
ಎಲ್ಲಿ ವಿದ್ಯೆ ಕಡಿಮೆ ಇದೆಯೋ ಅಲ್ಲಿ ಅರಿವು ಕೂಡ ಕಡಿಮೆ ಇರುತ್ತದೆ. ಅವರು ಹಾಕಿದ ವಿಷಜಂತುಗಳು ನಮ್ಮ ತಲೆಯಲ್ಲಿ ಕೆಲಸ ಮಾಡುತ್ತಿವೆ. ಈ ದೇಶದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಜಾತ್ಯತೀತವಾಗಿ, ಧರ್ಮಾತೀತವಾಗಿ ಅವಕಾಶಗಳನ್ನು ಕೊಟ್ಟಿದ್ದಾರೆ. ಸರ್ವರನ್ನು ಒಳಗೊಂಡು ಭಾರತ ನಿರ್ಮಾಣ ಮಾಡುವ ಚಿಂತನೆ ಅವರದು ಎಂದರು.
ಪ್ರತಿ ಬೂತ್‍ನಲ್ಲಿ 300ರಿಂದ 400 ಸದಸ್ಯರನ್ನು ನೋಂದಣಿ ಮಾಡೋಣ. 55 ಸಾವಿರ ಬೂತ್‍ಗಳಿದ್ದು, 2 ಕೋಟಿ ಸದಸ್ಯರಾಗಲಿದ್ದಾರೆ. ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ; ಕೇವಲ ಕ್ರಿಶ್ಚಿಯನ್ನರು, ಜೈನರು, ಬೌದ್ಧರಲ್ಲ. ಎಲ್ಲರನ್ನೂ ಸೇರಿಸಿ ಅಲ್ಪಸಂಖ್ಯಾತರು ಎನ್ನುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಅನಿಲ್ ಥಾಮಸ್ ಅವರು ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಂಚಾಲಕ ಅಲ್ಲಾ ಬಕ್ಷ್ ತಿಮ್ಮಾಪುರ್ ಅವರು ಮಾತನಾಡಿ,ಸದಸ್ಯತ್ವ ನೋಂದಣಿ ಒಂದು ಪ್ರಜಾಸತ್ತಾತ್ಮಕ ಕ್ರಮ. ನಮ್ಮದು ಜೀವಂತ ಪಕ್ಷ. ಬೇರೆ ಪಕ್ಷದಲ್ಲಿ ಸದಸ್ಯತ್ವ ನೋಂದಣಿಯ ಕ್ರಮ ಇಲ್ಲ ಎಂದು ತಿಳಿಸಿದರು. ನಮ್ಮ ಮೋರ್ಚಾಕ್ಕೆ 5 ಲಕ್ಷದ ಗುರಿ ಕೊಡಲಾಗಿದೆ ಎಂದರು.
ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಂ ಅವರು ಮಾತನಾಡಿ, ಬಿಜೆಪಿ ಬಗ್ಗೆ ಇತರ ಪಕ್ಷಗಳ ಮುಖಂಡರಲ್ಲಿ ಸಿಟ್ಟು, ದ್ವೇಷ ಭಾವನೆ ಇದೆ ಎಂದು ವಿವರಿಸಿದರು. ಭಾರತ್ ಮಾತಾಕೀ ಜೈ ಎಂದು ಹೇಳಿದ್ದನ್ನು ಆಕ್ಷೇಪಿಸಿದ್ದರು. ನಾನು ಆಗ ದೇಶವೆಂದರೆ ತಾಯಿ ಸಮಾನ ಎಂದು ಉತ್ತರ ಕೊಟ್ಟಿದ್ದೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಇದೆಲ್ಲ ಅರ್ಥ ಆಗುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.
ಬಿಜೆಪಿ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ ಎಂದು ತಿಳಿಸಿದರು. 50 ಲಕ್ಷ ಅಲ್ಪಸಂಖ್ಯಾತರನ್ನು ನಾವು ಸದಸ್ಯರನ್ನಾಗಿ ಮಾಡೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ, ರಾಷ್ಟ್ರೀಯ ಸಂಚಾಲಕ ಜೋಜೋ ಜೋಸೆಫ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ, ಮೋರ್ಚಾದ ಮಾಜಿ ಅಧ್ಯಕ್ಷ ಸೈಯದ್ ಸಲಾಂ, ಸಯ್ಯದ್ ಇಲ್ಯಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಜೈನ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೋರ್ಚಾದ ರಾಜ್ಯ ಕಾರ್ಯದರ್ಶಿ ಜೆಸೆಲ್ ಡಿಸೋಜ ಸ್ವಾಗತಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
