ಬೆಂಗಳೂರು:ಮೋಸ ಹೋಗುವ ಜನರು ಎಲ್ಲಿಯವರೆಗೂ ಇರಿತ್ತಾರೋ ಅಲ್ಲಿಯವರೆಗೂ ವಂಚನೆ ಎಸಗುವವರು ಇದ್ದೇ ಇರುತ್ತಾರೆ ಎಂಬ ಮಾತನ್ನು ನಾವು ಹಲವು ಬಾರಿ ಕೇಳಿದ್ದೇವೆ ಹಾಗೂ ಕಣ್ಣಾರೇ ಕಂಡಿದ್ದೇವೆ. ಇದೀಗ ಈ ಮಾತಿಗೆ ಪೂರಕವೆಂಬಂತೆ ಕಾಂಗ್ರೆಸ್​ ಶಾಸಕ ಮಾಜಿ ಆಪ್ತ ಸಹಾಯಕನೋರ್ವ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಪರಶುರಾಮ್​ ಪಾಟೀಲ್​ ಎಂದು ಗುರುತಿಸಲಾಗಿದ್ದು, ಈತ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅಜಯ್​ ಸಿಂಗ್​ ಅವರ ಬಳಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಖುದ್ದು ಶಾಸಕರೇ ಈತನನ್ನು ಕೆಲಸದಿಂದ ವಜಾ ಮಾಡಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಮೈದುನನ ಮಕ್ಕಳಿಗೆ ಸ್ಕೆಚ್​ ಹಾಕಿ ಕೊಲೆಗೈದ ಹಂತಕಿ; ​ಒಂದಲ್ಲ ಎರಡಲ್ಲ ಮೂರನೇ ಕೊಲೆಗೆ ಸಿಕ್ಕಿಬಿದ್ದಳು
ಬಂಧಿತ ವ್ಯಕ್ತಿಯೂ ಗುತ್ತಿಗೆದಾರರಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಕೆಕೆಆರ್​ಡಿಬಿಯಲ್ಲಿ ಶಾಸಕರಿಗೆ ಕೆಲಸ ಕೊಡಿಸುವುದಾಗಿ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ. ಕಲಬುರಗಿ, ಬೀದರ್ ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಜನರಿಂದ 1.50 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಪರಾರಿಯಾಗಿದ್ದ. ಮೇ 13ರಂದು ಬೀದರ್​ ಮೂಲದ ಕಿರಣ್​ ಎಂಬುವವರು ಪರಶುರಾಮ್​ ಮೋಸ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಪರಶುರಾಮ್​ ಬೆಂಗಳೂರಿ​ನ ಲಾಡ್ಜ್​ ಒಂದರಲ್ಲಿ ತಂಗಿರುವ ಬಗ್ಗೆ ಮಾಹಿತಿ ಪಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ತನ್ನ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಆರೋಪಿ ಫೋನ್​ ಸ್ವಿಚ್​ಆಫ್​ ಮಾಡಿಕೊಂಡು ಕಲಬುರಗಿಯಿಂದ ಎಸ್ಕೇಪ್​ ಆಗಿ ಸೀದಾ ಬೆಂಗಳೂರಿಗೆ ಬಂದಿದ್ದಾನೆ. ಬಳಿಕ ತನ್ನ ಗುರುತು ಸಿಗಬಾರದೆಂದು ತಲೆ ಬೋಳಿಸಿಕೊಂಡು ಬೆಂಗಳೂರಿನ‌ ಲಾಡ್ಜ್ ಗಳಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ. ಇತ್ತ ಪರಶುರಾಮ್​ ಬಂಧನ ಸುದ್ದಿ ಹೊರಬರುತ್ತಿದ್ದಂತೆ ಆತನಿಂದ ಮೋಸ ಹೋಗಿರುವವರು ತಮ್ಮ ಹಣ ವಾಪಸ್​ ಕೊಡಿಸುವಂತೆ ಪೊಲೀಸರಿಗೆ ದೂರು ನೀಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
