ತುಮಕೂರು:ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿ ಯಾರು ಎಂದೂ ಇನ್ನೂ ಅಂತಿಮ ಆಗಿಲ್ಲ. ಆದರೆ ಡಿ.ಕೆ.ಶಿವಕುಮಾರ್​ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆಯುತ್ತಲೇ ಇದೆ. ಇದೀಗ ಕಾಂಗ್ರೆಸ್​ನ​ ಹಿರಿಯ ಶಾಸಕ ಡಾ.ಜಿ.ಪರಮೇಶ್ವರ ಕೂಡ ಸಿಎಂ ರೇಸ್​ನಲ್ಲಿದ್ದಾರೆ. ಎರಡು ಸಲ ಸಿಎಂ ಆಗುವ ಅವಕಾಶದಿಂದ ವಂಚಿತನಾಗಿದ್ದೇನೆ, ಅದೃಷ್ಟವಿದ್ದರೆ ಮುಂದಿನ ಬಾರಿ ಸಿಎಂ ಆಗುತ್ತೇನೆ. ಈ ವಿಶ್ವಾಸವಿದೆ ಎಂದು ಸ್ವಪಕ್ಷೀಯರಿಗೆ ಸಂದೇಶ ರವಾನಿಸಿದ್ದಾರೆ.
ತಾವು ಸಿಎಂ ಆಗುವ ಆಸೆಯನ್ನು ಪದೇಪದೆ ಪುನರುಚ್ಚರಿಸುತ್ತಿರುವ ಪರಮೇಶ್ವರ್​, ಮಧುಗಿರಿ ತಾಲೂಕು ಪುರವರ ಹೋಬಳಿ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲೂ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ಎರಡು ಸಲ ಸಿಎಂ ಆಗುವ ಅವಕಾಶದಿಂದ ವಂಚಿತನಾಗಿದ್ದೇನೆ, ಅದೃಷ್ಟವಿದ್ದರೆ ಮುಂದಿನ ಬಾರಿ ಸಿಎಂ ಆಗುತ್ತೇನೆ. ಈ ವಿಶ್ವಾಸವಿದೆ ಎಂದು ಸ್ವಪಕ್ಷೀಯರಿಗೆ ಸಂದೇಶ ರವಾನಿಸಿದ್ದಾರೆ. ಉತ್ತರ ಪ್ರದೇಶದ ಮಥುರಾ ಮಹಾಮಂಡಲೇಶ್ವರ ಕಾಷಿರ್ಣಿ ಶ್ರೀಗುರುಶರಣ ನಂದಜೀ ಅವರ ಸಮ್ಮುಖದಲ್ಲಿಯೇ ಪರಮೇಶ್ವರ ಮನದಾಳದ ಇಂಗಿತ ವ್ಯಕ್ತಪಡಿಸಿದ್ದು, ರಾಜಕೀಯ ವಲಯದಲ್ಲಿ ವಿವಿಧ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಮಥುರಾ ಮಹಾಮಂಡಲೇಶ್ವರ ಕಾಷಿರ್ಣಿ ಶ್ರೀಗುರುಶರಣನಂದಜೀ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀವಿರೇಶಾನಂದಜೀ, ತಗ್ಗಿಹಳ್ಳಿ ಆಶ್ರಮದ ಸ್ವಾಮಿ ರಮಾನಂದಜೀ ಮತ್ತಿತರರು ಇದ್ದರು.
ಫಿಫಾ ವಿಶ್ವಕಪ್: ಸೋಲಿನ ಆಘಾತದಿಂದ ಕ್ರೀಡಾಂಗಣದಲ್ಲೇ ಕುಳಿತ ಫೈನಲ್​ ಹೀರೋ ಎಂಬೆಪ್ಪೆಗೆ ಸಮಾಧಾನ ಹೇಳಿದ ಫ್ರೆಂಚ್ ಅಧ್ಯಕ್ಷ

ಕೋವಿಡ್​ಗೆ ತಾಯಿ ಬಲಿ… ಒಂದೊತ್ತಿನ ಊಟಕ್ಕೂ ಬೀದಿಬೀದಿ ಅಲೆಯುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
