ಮಂಡ್ಯ:ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದು ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದ್ದು, ಇದರ ನಡುವೆಯೇ ಸದ್ದಿಲದೆ ವಿಪಕ್ಷ ಬಿಜೆಪಿ ಆಪರೇಷನ್​ ಕಮಲಕ್ಕೆ ಕೈ ಹಾಕಿದ್ಯಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ರವಿಕುಮಾರ್, ಕಾಂಗ್ರೆಸ್​ ಪಕ್ಷದ 50 ಶಾಸಕರ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಒಬ್ಬೊಬ್ಬರಿಗೆ 100 ಕೋಟಿ ರೂಪಾಯಿ ಆಫರ್​ ನೀಡಿದ್ದಾರೆ. ಬಿಜೆಪಿಯ ಬ್ರೋಕರ್‌ಗಳು ಪ್ರತಿನಿತ್ಯ ನಮ್ಮ ಶಾಸಕರನ್ನ ಸಂಪರ್ಕಿಸುತ್ತಿದ್ದಾರೆ‌. 50 ಕೋಟಿ ರೂಪಾಯಿಯಿಂದ 100 ಕೋಟಿ ರೂ.ವರೆಗೆ ಆಫರ್​ ಕೊಡುತ್ತಿದ್ದಾರೆ. ಮೊನ್ನೆಯೂ ಕೂಡ ಕರೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಡಿಜಿಟಲ್​ ಜಾಹೀರಾತು ಬೋರ್ಡ್​ನಲ್ಲಿ ಪ್ರಸಾರವಾಯ್ತು ಸೆ* ವಿಡಿಯೋ; ಮುಂದೇನಾಯ್ತು ನೀವೇ ನೋಡಿ‘
ನನಗೆ ಯಾರೋ ಒಬ್ಬ ಕರೆ ಮಾಡಿದ್ದ. 100 ಕೋಟಿ ರೂಪಾಯಿ ಆಫರ್​ ಮಾಡಿದ. ಹೇಯ್ ನೂರು ಕೋಟಿ ಇಟ್ಕೋಳಯ್ಯ, ನಿನ್ನ ಯಾರು ಇಡಿಯವರು ಹಿಡಿಯುತ್ತಿಲ್ವಾ ಅಂತಾ ಹೇಳಿದ್ದೇನೆ. ಈ ವಿಚಾರವಾಗಿ ನಾನು ಇಡಿಯವರಿಗೆ ಕರೆ ಮಾಡಬೇಕು ಅಂತಲೂ ಚಿಂತಿಸಿದ್ದೆ‌. ನಮ್ಮ ಸರ್ಕಾರ ಬೀಳಿಸಲು ದಿನನಿತ್ಯ ಪ್ರಯತ್ನ ನಡೀತಿದೆ‌.
ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಲ್ಹಾದ್​ ಜೋಶಿ ಎಲ್ಲಾ ಒಂದು ಗ್ಯಾಂಗ್ ಆಗಿದ್ದಾರೆ‌‌. ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ನಮ್ಮ ಸರ್ಕಾರವನ್ನು ಬೀಳಿಸುವುದಾಗಿ ಪ್ರಧಾನಿ ಮೋದಿಗೆ ಮಾತು ಕೊಟ್ಟಿದ್ದಾರೆ. ನಮ್ಮದು 136 ಶಾಸಕರಿರುವ ಬಂಡೆಯಂತ ಸರ್ಕಾರ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಲ್ಲ‌. ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ಫೋನ್ ಮಾಡಿ ಆಫರ್ ಮಾಡಿದವನ ಆಡಿಯೋ ಇದೆ. ಸರಿಯಾದ ಸಮಯದಲ್ಲಿ ರಿಲೀಸ್ ಮಾಡ್ತೀವಿ. ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಎವಿಡೆನ್ಸ್ ಕಲೆ ಹಾಕ್ತಿದ್ದೀವಿ.ಸಾಕ್ಷಿ ಸಮೇತ ಐಟಿ, ಇಡಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಡ್ತೀವಿ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ಹೇಳಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − 12 =
Remember me
