ಬೆಂಗಳೂರು:ಕಾಂಗ್ರೆಸ್​ ಶಾಸಕ ಹ್ಯಾರಿಸ್​ ಅವರು ನಿನ್ನೆ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಅವರು ಗಾಯಗೊಂಡಿದ್ದರು. ಅದೊಂದು ಪಟಾಕಿ ಎಂದು ಹೇಳಲಾಗಿತ್ತು.
ಆದರೆ ಅದು ಪಟಾಕಿ ತರಹ ಇರಲಿಲ್ಲ ಎಂದು ಶಾಸಕ ಹ್ಯಾರಿಸ್ ಹೇಳಿದ್ದಾರೆ. ಇಂದು ಸೇಂಟ್​ ಫಿಲೋಮಿನಾ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ಬಳಿಕ ಮಾತನಾಡಿ, ದೇವರು ದೊಡ್ಡವನು. ಈ ಘಟನೆಯಿಂದ ನಾನು ಪಾರಾದೆ. ಈ ಸ್ಫೋಟ ಪಟಾಕಿಯಿಂದ ಆಗಿದ್ದಲ್ಲ. ಹಾಗೆ ಸ್ಫೋಟವಾದಾಗ ನಿಜಕ್ಕೂ ನನಗೆ ಭಯವಾಗಿತ್ತು ಎಂದು ಹೇಳಿದರು.
ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ನಾನು ಗೃಹಸಚಿವರನ್ನು ಭೇಟಿ ಮಾಡುತ್ತೇನೆ. ನನ್ನ ಏಳಿಗೆ ಸಹಿಸದವರು ಈ ಕೃತ್ಯ ಎಸಗಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹ್ಯಾರಿಸ್ ಹೇಳಿದ್ದಾರೆ.ನಾನೀಗ ಪೂರ್ತಿ ಆರೋಗ್ಯವಾಗಿದ್ದೇನೆ. ಕಾರ್ಯಕರ್ತರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ಗೃಹಸಚಿವರೂ ಫೋನ್​ ಮಾಡಿ ವಿಚಾರಿಸಿದ್ದಾರೆ ಎಂದು ಹೇಳಿದರು.
ಸ್ಫೋಟಗೊಂಡಿದ್ದು ಪಟಾಕಿಯಂತಿರಲಿಲ್ಲ. ನಾವೂ ದೀಪಾವಳಿಯಲ್ಲಿ ಪಟಾಕಿಗಳನ್ನು ಹೊಡೆದಿದ್ದೇವೆ. ಇದು ಬಾಲ್​ ತರಹ ಇತ್ತು. ಅಂತಹ ಪಟಾಕಿಯನ್ನು ನಾವು ನೋಡಿರಲಿಲ್ಲ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + six =
Remember me
