ಮಂಡ್ಯ:ಬರಗಾಲದಲ್ಲಿಯೂ ರಾಜ್ಯದ ಜನರು ನೆಮ್ಮದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ, ರಾಹುಲ್ ಗಾಂಧಿ ನಿರ್ದೇಶನ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವವರಿಗೆ ಹುಚ್ಚು ಹಿಡಿದಿದೆ. ಅಧಿಕಾರವಿಲ್ಲದೆ ತಡೆದುಕೊಳ್ಳಲು ಆಗುತ್ತಿಲ್ಲ. 136 ಶಾಸಕರನ್ನು ತಲೆಕೆಟ್ಟಿ ಜನರು ಗೆಲ್ಲಿಸಿಲ್ಲ. ಈ ರಾಜ್ಯಕ್ಕೆ ಏನು ಬೇಕು, ಏನು ಆಗಬೇಕೆಂದು ಅರ್ಥ ಮಾಡಿಕೊಂಡೆ ಬಹುಮತ ಕೊಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ಇಬ್ಬರು ಸೇರಿದರೂ 90 ಜನ ಇಲ್ಲ. ಅವರು ಏನು ಮಾತಾಡೋದು?. ನಾವು ಗಟ್ಟಿಯಾಗಿದ್ದೇವೆ. 100ಕ್ಕೆ 100 ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಈ ರಾಜ್ಯವನ್ನ ಉದ್ದಾರ ಮಾಡುತ್ತೇವೆ. ಸರ್ಕಾರ ಬೀಳುತ್ತದೆ ಎನ್ನುವವರನ್ನು ನಿಮಾನ್ಸ್‌ಗೆ ಸೇರಿಸುತ್ತೇವೆ. ಸಧ್ಯಕ್ಕೆ ಬೆಡ್ ಖಾಲಿ ಇಲ್ಲವೆಂದು ವ್ಯಂಗ್ಯವಾಡಿದರು.ಸ್ವಪಕ್ಷದ ವಿರುದ್ದವೇ ಶಾಮನೂರು ಶಿವಶಂಕರಪ್ಪ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೊಂದು ಸಲ ತಪ್ಪು ಕಲ್ಪನೆಗಳಿಂದ ಕೆಲವು ಮಾತು ಬರುತ್ತದೆ. ಅದೇನು ದೊಡ್ಡ ವಿಚಾರ ಅಲ್ಲ. ಪಕ್ಷ ಅಥವಾ ಸರ್ಕಾರದ ಸಭೆಯಲ್ಲಿ ಅದು ಚರ್ಚೆಯಾಗಿಲ್ಲ. ಸಮುದಾಯದ ಸಭೆಯಲ್ಲಿ ಆಂತರಿಕ ಚರ್ಚೆ ವೇಳೆ ಮಾತು ಬಂದಿದೆ. ಅದನ್ನು ಹೆಚ್ಚಿಗೆ ಬಿಂಬಿಸುವುದು ಏನೂ ಬೇಡ. ನಾವೆಲ್ಲ ಒಟ್ಟಾಗಿದ್ದು, ಜಾತಿ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಇಲ್ಲ. ಅಂದು ಶಿವಶಂಕರಪ್ಪ ಹೇಳಿದ ಮಾತನ್ನು ತಿರುಚಿ ಬೇರೆ ರೀತಿ ಬಿಂಬಿಸಲಾಗಿದೆ. ಯಾರೋ ಒಬ್ಬ ಅಧಿಕಾರಿ ಅವರಿಗೆ ಕೊಟ್ಟ ದೂರಿನ ವಿಚಾರದ್ದಾಗಿದೆ. ಇಡೀ ರಾಜ್ಯದ ವಿಚಾರವಲ್ಲ. ಅಂಕಿ ಅಂಶ ತೆಗೆದು ನೋಡಿದರೆ ಎಲ್ಲ ವರ್ಗದ ಪರವಿದ್ದೇವೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − one =
Remember me
