ಬೆಳಗಾವಿ:ಕರೊನಾ ವೈರಸ್​ನಿಂದಾಗಿ ಅದೆಷ್ಟೋ ಮಂದಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ಅಂಥವರ ಯೋಗಕ್ಷೇಮ ನೋಡಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ.
ಆದರೆ ಕಾಂಗ್ರೆಸ್​ ಶಾಸಕನೋರ್ವ ತನ್ನ ಬಳಿ ಸಹಾಯ ಕೇಳಲು ಬಂದ ಕ್ಷೇತ್ರದ ಮಹಿಳೆಯರೊಂದಿಗೆ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:ರಷ್ಯಾದ ಪ್ರೇಯಸಿ ಜತೆ ಟ್ರಕ್​ನಲ್ಲಿ ಅಡಗಿ ಪ್ರಯಾಣಿಸುತ್ತಿದ್ದ ಯುವಕ; ಊರು ಸ್ವಲ್ಪ ದೂರದಲ್ಲಿದ್ದಾಗ ಟ್ವಿಸ್ಟ್​ ಕೊಟ್ರು ಪೊಲೀಸ್​
ಬೈಲಹೊಂಗಲದ ಕಾಂಗ್ರೆಸ್ ಶಾಸಕ ಮಹಂತೇಶ ಕೌಜಲಗಿ ಹೀಗೆ ಉದ್ಧಟತನ ತೋರಿದವರು. ಲಾಕ್​ಡೌನ್​ನಿಂದ ಕಷ್ಟವಾಗುತ್ತಿದೆ, ಏನಾದರೂ ಸಹಾಯ ಮಾಡಿ ಎಂದು ಕೇಳಲು ಸ್ವಲ್ಪ ಜನ ಶಾಸಕ ಮಹಂತೇಶ್​ ಅವರ ಮನೆಯ ಬಳಿ ಹೋಗಿದ್ದರು. ಆ ವೇಳೆ ಶಾಸಕರು ವಾಕಿಂಗ್​ಗೆ ತೆರಳಿದ್ದರು. ವಾಪಸ್​ ಬಂದು ಜನರ ಸಂಕಷ್ಟವನ್ನು ಆಲಿಸುವ ಬದಲು, ರಸ್ತೆಯ ಮೇಲೆ ನಿಂತು ಅವರಿಗೆ ಬೈದಿದ್ದಾರೆ.
ಎಲ್ಲ ಅಂಗಡಿಗಳೂ ಓಪನ್​ ಆಗಿವೆ. ನೀವಿನ್ನು ಕೆಲಸಕ್ಕೆ ಹೋಗಿ. ಸುಮ್ಮನೆ ಇಲ್ಲಿ ಗುದ್ದಾಡಿಕೊಂಡು ಕುಳಿತುಕೊಳ್ಳಬೇಡಿ..ಹೋಗಿ ಹೋಗಿ ಎಂದು ಬೇಜವಾಬ್ದಾರಿಯುತವಾಗಿ ಉತ್ತರ ನೀಡಿದ ಶಾಸಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ:ಆಹಾರವೆಂದು ಸಿಡಿಮದ್ದು ತಿಂದ ಗರ್ಭಿಣಿ ಎಮ್ಮೆ ಬಾಯಿ ಛಿದ್ರ: ಮಾನವನ ಎಡವಟ್ಟಿಗೆ ಮೂಕ ಪ್ರಾಣಿಗೇಕೆ ಶಿಕ್ಷೆ?
ಶಾಸಕರ ಮಾತು ಕೇಳಿದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತ ಅಲ್ಲಿಂದ ತೆರಳಿದ್ದಾರೆ. ‘ಇವರು ಎರಡನೇ ಸಲ ಹೀಗೆ ಮಾಡ್ತಿರೋದು. ವೋಟು ಕೇಳಲು ಬಂದಾಗ ಸಾಹೇಬ್ರಿಗೆ ನಾವೂ ಹೇಳುತ್ತೇವೆ’ ಎನ್ನುತ್ತ ಹೋಗಿದ್ದು ವಿಡಿಯೋದಲ್ಲಿ ನೋಡಬಹುದು. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಕರೆಂಟ್ ಬಿಲ್ ಹೊರೆ ಗ್ರಾಹಕರ ಗಾಯಕ್ಕೆ ಬರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
