ಬೆಂಗಳೂರು: ಬಿಜೆಪಿ ಜತೆಗಿನ ಜೆಡಿಎಸ್ ಮೈತ್ರಿಯನ್ನು ಕುಟುಕಿರುವ ಕಾಂಗ್ರೆಸ್, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಲೇವಡಿ ಮಾಡಿದೆ.
ಈ ಹಿಂದೆ ದೇವೇಗೌಡರು ಆಡಿದ್ದ ಮಾತುಗಳ ವಿಡಿಯೋವನ್ನು ತನ್ನ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಹಿಂದೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಕುಮಾರಸ್ವಾಮಿಯವರು ಹಾಗೂ ದೇವೇಗೌಡರು ಪಶ್ಚಾತ್ತಾಪದ ಮಾತುಗಳನ್ನಾಡಿದ್ದರು. ಮತ್ತೊಮ್ಮೆ ಜೆಡಿಎಸ್ ಬಿಜೆಪಿಯೊಂದಿಗೆ ಹೋದರೆ ಕುಮಾರಸ್ವಾಮಿಯವರನ್ನು ತಮ್ಮ ಕುಟುಂಬದಿಂದ ಬಹಿಷ್ಕರಿಸುತ್ತೇವೆ ಎಂದಿದ್ದರು. ಈಗ ಬಹಿಷ್ಕರಿಸುವರೇ? ಎಂದು ಪ್ರಶ್ನಿಸಿದೆ.
ಹಿಂದೆ ಕುಮಾರಸ್ವಾಮಿಯವರು ದೇವೇಗೌಡರ ಅಭಿಪ್ರಾಯದ ವಿರುದ್ಧ ಹೋಗಿದ್ದರು, ಈಗ ತಮ್ಮ ಶಾಸಕರ ಅಭಿಪ್ರಾಯದ ವಿರುದ್ಧ, ತಮ್ಮ ಕಾರ್ಯಕರ್ತರ ವಿರುದ್ಧ, ಮುಖಂಡರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಹೋಗಿದ್ದಾರೆ. ಈಗ ದೇವೇಗೌಡರು ಬಾಯ್ಕಟ್ ಮಾಡದಿರಬಹುದು, ಜೆಡಿಎಸ್ ಪಕ್ಷವನ್ನು ರಾಜ್ಯದ ಜನತೆ ಬಾಯ್ಕಟ್ ಮಾಡಲಿದ್ದಾರೆ ಎಂದು ಹೇಳಿದೆ.
ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬಯಸುತ್ತೇನೆ ಎಂದಿದ್ದರು ದೇವೇಗೌಡರು, ಕೆಲವೇ ತಿಂಗಳ ಹಿಂದೆ ಮೊಮ್ಮಗನೂ ದೇವೇಗೌಡರ ಅದೇ ಆಸೆಯನ್ನು ಬಹಿರಂಗಪಡಿಸಿದ್ದರು.
ಆದರೆ ಈಗ ಅಲ್ಪಸಂಖ್ಯಾತರ ಅಭಿಪ್ರಾಯವನ್ನು ಧಿಕ್ಕರಿಸಿ ಕೂಡಿಕೆ ಮಾಡಿಕೊಂಡಿದ್ದಾರೆ, ಇದು ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುವ ನಡೆ ಅಲ್ಲವೇ? ಹಿಂದೆ ಯಡಿಯೂರಪ್ಪನವರು ಜೆಡಿಎಸ್ ನವರು ವಚನ ಭ್ರಷ್ಟರು ಎಂದಿದ್ದು ನಿಜವಲ್ಲವೇ? ಕೇವಲ ವಚನಭ್ರಷ್ಟರು ಮಾತ್ರವಲ್ಲ, ಸಿದ್ಧಾಂತ ಭ್ರಷ್ಟರು ಕೂಡ ಎಂದು ಹೇಳಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 1 =
Remember me
