ಬೆಂಗಳೂರು:ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ನಡೆದ “ನಾ ನಾಯಕಿ” ಕಾರ್ಯಕ್ರಮಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಜ್ಜಿ ಇಂದಿರಾ ಗಾಂಧಿ ಅವರಂತೆಯೇ ಖಡಕ್​ ಆಗಿ ಎಂಟ್ರಿ ಕೊಟ್ಟರು. ಭಾಷಣದ ಆರಂಭದಲ್ಲಿ ಪ್ರತಿ ಮನೆಯ ಗೃಹಿಣಿಗೆ ”ಗೃಹ ಲಕ್ಷ್ಮಿ” ಯೋಜನೆ ನೀಡುವುದಾಗಿ ಘೋಷಣೆ ಮಾಡಿದ ಪ್ರಿಯಾಂಕಾ ಗಾಂಧಿ, ಬೆಲೆ ಏರಿಕೆಯಿಂದ ಬಸವಳಿದು ಮನೆಯ ನಿರ್ವಹಣೆ ಮಾಡಲು ಹರಸಾಹಸ ಪಡುತ್ತಿರುವ ರಾಜ್ಯದ ಪ್ರತಿ ಕುಟುಂಬದ ಎಲ್ಲ ಗೃಹಿಣಿಯರಿಗೆ ಪ್ರತಿ ತಿಂಗಳಿಗೆ 2000 ರೂಪಾಯಿ ಸಹಾಯಧನ ನೀಡುವುದಾಗಿ ತಿಳಿಸಿದರು. ಅಜ್ಜಿ-ತಾಯಿಯನ್ನ ನೆನೆದು ದೇಶದಲ್ಲಿ ಸ್ತ್ರೀ ಶಕ್ತಿಯ ಮಹತ್ವದ ಸಾರಿದರು. ಮಹಿಳೆಯರು ಮನಸ್ಸು ಮಾಡಿದ್ರೆ ದೇಶದಲ್ಲಿ ಎಂತಹ ಬದಲಾವಣೆ ತರಬಹುದು. ಸರ್ಕಾರವನ್ನೇ ಮಾನಿಟರ್​ ಮಾಡಬಹುದು ಎಂದರು.
ಕರ್ನಾಟಕದಲ್ಲಿ ಸಾಕಷ್ಟು ಕೈಗಾರಿಕಾ ವಲಯ ಇದ್ದಾವೆ. ಐಟಿ ಕ್ಷೇತ್ರ ಸಾಕಷ್ಟು ಪ್ರಗತಿಯಲ್ಲಿದೆ. ನಿಮ್ಮನ್ನು ನೋಡಿದ್ರೆ ಹೆಮ್ಮೆ ಆಗುತ್ತೆ. ನೀವು ತಾಯಿ ಭುವನೇಶ್ವರಿ, ಚಾಮುಂಡಿ ತಾಯಿಯ ಮಕ್ಕಳು. ರಾಣಿ ಚೆನ್ನಮ್ಮ, ಬಸವಣ್ಣ ಈ ನಾಡಿನಲ್ಲಿ ಹುಟ್ಟಿದ್ದಾರೆ. ಎಲ್ಲರೂ ಕೂಡ ಸಮಾನರು ಅಂತ ಬಸವಣ್ಣ ಸಾರಿದ್ರು. ನಾನು ಸೋನಿಯಾ ಗಾಂಧಿ ಅವರನ್ನ ನೋಡಿಕೊಂಡು ಬೆಳೆದೆ. ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರನ್ನ ಮದುವೆಯಾಗಿ ಭಾರತಕ್ಕೆ ಬಂದ್ರು. ದೇಶದ ಸಂಸ್ಕೃತಿ ತಿಳಿದುಕೊಳ್ಳಲು ಸೋನಿಯಾ ಪ್ರಯತ್ನಪಟ್ರು. ಅನಿವಾರ್ಯ ಕಾರಣದಿಂದ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದರು. ಮಹಿಳೆಯರು ಜೀವನ ಸಾಗಿಸಲು ಎಷ್ಟು ಕಷ್ಟ ಪಡ್ತಾ ಇದ್ದಾರೆ. ಕರೊನಾ ಬಳಿಕ ಜೀವನ ದುಸ್ತರ ಆಗಿದೆ. ನಿಮ್ಮ ಕಷ್ಟ ನನಗೂ ಮನವರಿಕೆ ಆಗಿದೆ. ಸರ್ಕಾರ ಬದಲಿಸಲು ಸಮಯ ಬಂದಿದೆ ಎಂದು ಪ್ರಿಯಾಂಕಾ ಹೇಳಿದರು.
ನನಗೆ ಗೊತ್ತು ಇಲ್ಲಿರುವ ಪ್ರತಿಯೊಬ್ಬ ಮಹಿಳೆ ಬದುಕಿನ ಬಂಡಿದೂಡಲು ಎಷ್ಟು ಕಷ್ಟ ಪಡ್ತೀರಿ ಎಂದು. ನನ್ನ ಅಕ್ಕ-ತಂಗಿಯರೇ, ನೀವು ನಿಮ್ಮ ಮತ್ತು ಕುಟುಂಬದ ಆರೋಗ್ಯ, ಮಕ್ಕಳ ಶಿಕ್ಷಣ, ಉದ್ಯೋಗವನ್ನ ಬಯಸ್ತೀರಾ? ನಿಮ್ಮ ಶಕ್ತಿ ಏನೆಂದು ನೀವು ಅರ್ಥ ಮಾಡಿಕೊಳ್ಳಿ. ದೇಶದಲ್ಲಿ ಮಹಿಳೆಯರೇ ಬುದ್ಧಿವಂತರು, ಶಕ್ತಿಶಾಲಿಗಳು. ನೀವು ಮನಸ್ಸು ಮಾಡಿದ್ರೆ ರಾಜ್ಯದಲ್ಲಿ ಬದಲಾವಣೆ ತರಬಹುದು. ನಿಮಗೆಲ್ಲರಿಗೂ ಗೊತ್ತಿದೆ ಅಲ್ವಾ, ಪ್ರತಿ ರಾಜಕೀಯ ಪಕ್ಷಗಳು ಆಯಾ ಸಮುದಾಯವನ್ನ ಖುಷಿ ಪಡಿಸಿ ಮತಗಿಟ್ಟಿಸಿಕೊಳ್ಳಲು ತಂತ್ರ ನಡೆಸುತ್ತವೆಯೇ ಹೊರತು ಮಹಿಳೆಯರಿಗಾಗಿ ಆದ್ಯತೆ ನೀಡುತ್ತಿಲ್ಲ ಎಂದರು.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳ್ತೀನಿ. ನಾನು ವೈಯಕ್ತಿವಾಗಿ ಯಾವುದೇ ಪಕ್ಷವನ್ನು ದ್ವೇಷಿಸಲ್ಲ. ಕಳೆದ ಏಳೆಂಟು ವರ್ಷದಿಂದ ನೀವೆಲ್ಲರೂ ಖುಷಿಯಾಗಿದ್ದೀರಾ? ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೆಯಾ? ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಿದೆಯೇ? ನಿಮ್ಮ ಜೀವನದಲ್ಲಿ ಬದಲಾವಣೆಯಾಗಿದೆ? ರಾಜ್ಯದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ನಾನು ಕೇಳಿದೆ, ಪ್ರತಿ ಕೆಲಸಕ್ಕೂ 40% ಕಮಿಷನ್​ ಪಡೆಯುತ್ತಿದೆಯಂತೆ ಆಡಳಿತವರ್ಗ. ಕೋವಿಡ್​ ಸಂದರ್ಭದಲ್ಲಿ ಈ ಸರ್ಕಾರ ನಿಮ್ಮ ಸಹಾಯಕ್ಕೆ ಬರಲಿಲ್ಲ. ಬಹುತೇಕ ಮಹಿಳೆಯರು ಬೆಂಗಳೂರಲ್ಲಿ ಗಾರ್ಮೆಂಟ್ಸ್​ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಬೆಂಗಳೂರು ಮಾತ್ರವಲ್ಲ, ಸುತ್ತಮುತ್ತಲ ವಾಸವಿರುವ ಮಹಿಳೆಯರ ಬವಣೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅಡುಗೆ ಸಿಲಿಂಡರ್​ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ? ಪ್ರತಿಯೊಂದರ ಬೆಲೆ ಗಗನಕ್ಕೇರಿದೆ. ಆದರೆ ದುರ್ದೈವ ಸರ್ಕಾರವನ್ನು ಯಾರೂ ಪ್ರಶ್ನೆ ಮಾಡ್ತಿಲ್ಲ. ಇದ್ಯಾವುದರ ಬಗ್ಗೆಯೂ ಧ್ವನಿ ಎತ್ತದಂತೆ ಬಿಜೆಪಿ ಪಕ್ಷ ವಿವಾದಾತ್ಮಕ ವಿಚಾರಗಳ ಸುತ್ತ ಗಿರಕಿ ಹೊಡೆಯುತ್ತಲೇ ಇದೆ. ಬಂಡವಾಳಶಾಯಿಗಳನ್ನೇ ಬಿಜೆಪಿ ಬೆಳೆಸುತ್ತಿದೆ. ಬಡವರು ಬಡವರಾಗಿಯೇ ಇದ್ದಾರೆ. ಎಲ್ಲ ಕ್ಷೇತ್ರವನ್ನೂ ಖಾಸಗೀಕರಣ ಮಾಡಿ ಭಾರತದ ಆಸ್ತಿಯನ್ನ ಮಾರಾಟ ಮಾಡ್ತಿದ್ದಾರೆ. ಸರ್ಕಾರಿ ಉದ್ಯೋಗವನ್ನೂ ಮಾರಾಟ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿದ್ಯಾಭ್ಯಾಸ ಎಲ್ಲ ಸರಿಯಾಗಬೇಕು ಅಂದ್ರೆ ಬದಲಾವಣೆ ಆಗಬೇಕು. ದೇಶದಲ್ಲಿ ಶೇ.50 ಮಹಿಳೆಯರು ಇದ್ದೇವೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗಬೇಕು. ನೀವು ಶಕ್ತಿವಂತರಾಗಬೇಕು, ನಿಮ್ಮ ಶಕ್ತಿ ಅರಿವಾಗಬೇಕು. ನೀವು ರಾಜಕೀಯ ಅರಿತುಕೊಳ್ಳಬೇಕು. ರಾಜಕೀಯ ಪಕ್ಷಗಳಿಗೆ ಈ ವೇದಿಕೆ ಸಂದೇಶ ನೀಡಬೇಕು. ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ಯಾರಿಗೆ ‌ಮತ ಹಾಕಬೇಕು ಅಂತ ನೀವು ವಿಚಾರ ಮಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ#NaaNayakiಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಮತಿ@priyankagandhiಅವರನ್ನು ಕೆಪಿಸಿಸಿ ಅಧ್ಯಕ್ಷರಾದ@DKShivakumarಅವರು ಸ್ವಾಗತಿಸಿದ ಕ್ಷಣ..pic.twitter.com/ikZuanYCRh
— Karnataka Congress (@INCKarnataka)January 16, 2023

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.!

ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
