ಬೆಳಗಾವಿ:ದೇಶದಲ್ಲಿ ಪಿಎಫ್​ಐ ಬೆಳೆಯಲು ಕುಮ್ಮಕ್ಕು ನೀಡಿದ್ದೇ ಕಾಂಗ್ರೆಸ್ ಪಕ್ಷ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಪಿಎಫ್​ಐ ಮೇಲೆ ದಾಖಲಾಗಿದ್ದ ಕೇಸ್ ವಾಪಾಸ್ ಪಡೆದುಕೊಂಡರು. ಕಾಂಗ್ರೆಸ್​​ನ ಈ ನಿರ್ಧಾರ ಪಿಎಫ್ಐಗೆ ಬಲ ಬಂದಿತು. ದೇಶ ವಿರೋಧ ಕೆಲಸ ಮಾಡಿದ್ರು ಕಾಂಗ್ರೇಸ್ ಸರ್ಕಾರ ನಮ್ಮ ಬೆನ್ನಿಗಿದೆ ಎಂಬುವುದು ಪಿಎಫ್​​ಐಗೆ ಅರಿವಾಯಿತು ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದರು.
ಪಿಎಫ್​ಐ ದೇಶ, ಸಮಾಜ ವಿರೋಧಿ ಹಾಗೂ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ. ಇವತ್ತು ಸಿಕ್ಕ ದಾಖಲೆಗಳ ಆಧಾರ ನೋಡಿದರೆ, ಇನ್ನೊಂದೆರೆಡು ವರ್ಷದಲ್ಲಿ ಇಡೀ ದೇಶವನ್ನೆ ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ ಎಂದರು.
ಹಿಂದೆ ಪಿಎಫ್​ಐ ಪದಾಧಿಕಾರಿಗಳ ಮೇಲೆ ಕೇಸ್ ಹಾಕಿದ್ದಾಗ, ಸುಮಾರು 2000 ಕ್ಕಿಂತ ಹೆಚ್ಚು ಕೇಸ್​​ಗಳನ್ನು ಆಗಿನ ಸಿಎಂ ಸಿದ್ದರಾಮಯ್ಯ ಹಿಂತೆಗೆದುಕೊಂಡರು. ಇವತ್ತು ಕರ್ನಾಟಕದಲ್ಲಿ ಪಿಎಫ್ಐ ಇಷ್ಟು ಬೆಳೆಯಲು ಕಾರಣ ಕಾಂಗ್ರೆಸ್​ ಪಕ್ಷ ಹಾಗೂ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು.
ಎನ್​ಐಎ ಉತ್ತಮ ಕಾರ್ಯಾಚರಣೆ ಮಾಡಿ ಪಿಎಫ್​ಐಯ ದೇಶದ್ರೋಹಿ ಕೆಲಸವನ್ನು ಮಟ್ಟ ಹಾಕುತ್ತಿದೆ. ಇದರಿಂದ ನಿಶ್ಚಿತವಾಗಿ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಶಾಸಕ ಅಭಯ್ ಪಾಟೀಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
