
ಬೆಂಗಳೂರು:ರಾಜ್ಯದ ಜನರು ಯಡಿಯೂರಪ್ಪನವರ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಪೂರಕವಾಗಿ ಹೈಕೋರ್ಟ್ ತೀರ್ಪು ಬಂದಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕೇಸು ದಾಖಲಿಸಿದ ಬಳಿಕ ಯಡಿಯೂರಪ್ಪನವರು ವಿಚಾರಣೆ ಎದುರಿಸಿದ್ದರು. ಹೇಳಿಕೆ, ಧ್ವನಿ ಸ್ಯಾಂಪಲ್ ಕೊಟ್ಟಿದ್ದರು. ದೆಹಲಿಗೆ ಹೋಗಿರುವ ಕಾರಣ 17ರಂದು ವಿಚಾರಣೆ ಹಾಜರಾಗುವುದಾಗಿ ಪತ್ರದ ಮೂಲಕ ಸಿಐಡಿಗೆ ತಿಳಿಸಿದ್ದರೂ ಕೂಡ ಅವರನ್ನು ಬಂಧಿಸಬೇಕೆಂಬ ದುರುದ್ದೇಶ ಸರಕಾರಕ್ಕೆ ಇತ್ತು. ಆ ದುರುದ್ದೇಶ ವಿಫಲವಾಗಿದೆ. ಕಾಂಗ್ರೆಸ್ ನಾಯಕರ ಷಡ್ಯಂತ್ರಕ್ಕೆ ಹೈಕೋರ್ಟ್ ಪೂರ್ಣವಿರಾಮ (ಫುಲ್ ಸ್ಟಾಪ್) ಹಾಕಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ದುರುದ್ದೇಶದಿಂದ ಹಾಕಿದ ಪ್ರಕರಣದಲ್ಲಿ ಪೋಕ್ಸೊ ಸೆಕ್ಷನ್‌ಗಳನ್ನು ಸೇರಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡಿ, ಷಡ್ಯಂತ್ರದ ಕೇಸು ದಾಖಲಿಸಿದ್ದರು. ಈ ಕೇಸಿಗೆ ಸಂಬಂಧಿಸಿ ಹೈಕೋರ್ಟ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಇದನ್ನು ಬಿಜೆಪಿ ಸ್ವಾಗತ ಮಾಡುತ್ತದೆ ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 18 =
Remember me
