ಬೆಂಗಳೂರು:ರಾಜಕೀಯದಲ್ಲಿ ಚಿತ್ರವಿಚಿತ್ರ ಪ್ರತಿಭಟನೆಗಳಿರುತ್ತವೆ. ಅಂಥದ್ದೇ ಒಂದು ರೀತಿಯ ಪ್ರತಿಭಟನೆಯನ್ನು ಕಾಂಗ್ರೆಸ್​ನ ಕೆಲವರು ಮಾಡಿದ್ದಾರೆ. ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಗುರಿಯಾಗಿಸಿ ಅವರು ಈ ಪ್ರತಿಭಟನೆ ನಡೆಸಿದ್ದಾರೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ರೀತಿಯಲ್ಲಿ ಹಣದ ವಿಚಾರವಾದ ಈ ಪ್ರತಿಭಟನೆಗೆ ಇವರು ಹಣವನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷದ ಅಚ್ಛೇ ದಿನ್ ಸರ್ಕಾರದಲ್ಲಿ ಯಾರ ಖಾತೆಗೂ 15 ಲಕ್ಷ ರೂ. ಹಾಕಲಿಲ್ಲ ಹಾಗೂ ಬರಲೇ ಇಲ್ಲ ಎನ್ನುವ ಕಾರಣಕ್ಕೆ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಣ ಹಾಕುವುದು ಸೇರಿದಂತೆ ರಾಷ್ಟ್ರದ ಜನತೆಗೆ ನೀಡಿದ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಅದಕ್ಕಾಗಿ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಪಕ್ಷದಿಂದ ಒಂದಷ್ಟು ಮಂದಿ ಸೇರಿ ಇಂದು ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣವಾಗಲಿ: ನಟ-ನಿರ್ದೇಶಕ ರಿಷಬ್ ಶೆಟ್ಟಿ
ಈ ಮನಿಯಾರ್ಡರ್​ ಜತೆಗೆ ಪ್ರಧಾನಿಗೆ ಕೆಲವು ಪ್ರಶ್ನೆಗಳನ್ನೂ ಕೇಳಿದ ಪೋಸ್ಟ್ ಇವರು ಕಳುಹಿಸಿಕೊಟ್ಟಿದ್ದಾರೆ. ಜಿಪಿಒ ಕೇಂದ್ರ ಕಚೇರಿ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್, ಮನೋಹರ್, ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಪ್ರಕಾಶ್, ರವಿಶೇಖರ್, ಹೇಮರಾಜು, ಚಂದ್ರಶೇಖರ್, ಅನಿಲ್ ಕುಮಾರ್, ಉಮೇಶ್, ಚಿನ್ನಿ ಪ್ರಕಾಶ್, ಓಬಳೇಶ್ ಮುಂತಾದವರಿದ್ದರು.
1. ಹೊರ ದೇಶದಲ್ಲಿರುವ ಕಪ್ಪು ಹಣ ತರಲಿಲ್ಲ2. ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದರೂ ಯಾರ ಖಾತೆಗೂ 15 ರೂ. ಸಹ ಇದುವರೆಗೂ ಬಂದಿಲ್ಲ3. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರೂ ಇರುವ ಉದ್ಯೋಗವನ್ನೂ ಎಲ್ಲರಿಂದ ಕಸಿಯುತ್ತಿರುವುದೇಕೆ?4. ಉದ್ಯೋಗ ನೀಡಿ ಎಂದರೆ ಪಕೋಡ ಮಾರಿ ಎಂದರು ಬಿಜೆಪಿಯ ಕೇಂದ್ರ ಸರ್ಕಾರದವರು.5. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದರೂ ಭ್ರಷ್ಟ ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡರು.6. ಅಚ್ಛೇ ದಿನ್, ಅಚ್ಛೇ ದಿನ್ ಎಂದು ನಿತ್ಯವೂ ಹೇಳಿ ಪ್ರತಿಯೊಬ್ಬರ ಮೇಲೂ ಸಾಲದ ಹೊರೆಯನ್ನು ಹೊರಿಸಿದರು ನರೇಂದ್ರ ಮೋದಿ.7. ಕೇಂದ್ರ ಸರ್ಕಾರದ ಎಲ್ಲ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ.8. ತೆರಿಗೆ ಹಣವನ್ನು ವಂಚಿಸಿರುವ ಉದ್ಯಮಗಳೊಂದಿಗೆ ಶಾಮಿಲಾಗಿ ಅವರನ್ನು ಹೊರದೇಶಕ್ಕೆ ಕಳುಹಿಸಿದ್ದಾರೆ.9. ದೇಶದ ಅನ್ನದಾತರಿಗೆ ನ್ಯಾಯಯುತ ಕಾಯ್ದೆ ತರದೆ ರೈತ ವಿರೋಧಿ ಮಸೂದೆ ಜಾರಿಗೆ ತಂದಿದ್ದು ಕೇಂದ್ರ ಸರ್ಕಾರದ ಅತಿ ದೊಡ್ಡ ಅಪರಾಧ.10. ನರೇಂದ್ರ ಮೋದಿ ನೀಡಿರುವ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಅವರು ದೇಶಕ್ಕೆ ನೀಡಿದ ಕೊಡುಗೆ ಎಂದರೆ ಅದು ಸುಳ್ಳಿನ ಕೊಡುಗೆಗಳು ಮಾತ್ರ.

ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಮಕ್ಕಳಿಗೆ ಹೊಸ ಪುಸ್ತಕ ಕೊಡಿ: ಸಿಎಂಗೆ ಸಮಾನ ಮನಸ್ಕರ ಒಕ್ಕೂಟದ ಮನವಿ

ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 19 =
Remember me
