ಬೆಂಗಳೂರು:ಎಐಸಿಸಿ ಅಧ್ಯಕ್ಷರನ್ನ ಆಯ್ಕೆ ಮಾಡಲು ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೆಹಲಿಯ ಐಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಇತ್ತ ಭಾರತ್​ ಜೋಡೋ ಯಾತ್ರೆ ಹಿನ್ನೆಲೆ ಕರ್ನಾಟಕದಲ್ಲಿರುವ ರಾಹುಲ್​ ಗಾಂಧಿ ಅವರು ಬಳ್ಳಾರಿಯಲ್ಲಿ ಮತದಾನ ಮಾಡಿದರು.
#WATCH| Congress MP Rahul Gandhi casts his vote to elect the next party president at Bharat Jodo Yatra campsite in Ballari, Karnataka
(Source: AICC)pic.twitter.com/9Jit8vIpVo
— ANI (@ANI)October 17, 2022

ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಇಂದು(ಸೋಮವಾರ) ದೇಶಾದ್ಯಂತ ಮತದಾನ ಆರಂಭವಾಗಿದೆ. ಭಾರತ್​ ಜೋಡೋ ಯಾತ್ರೆ ಬಳ್ಳಾರಿಯಲ್ಲಿದ್ದು, ಯಾತ್ರಿಗಳ ಅನುಕೂಲಕ್ಕಾಗಿ ಬಳ್ಳಾರಿ ಗಡಿಯ ಸಂಗನಕಲ್ಲು ಬಳಿ ವಿಶೇಷ ಮತಗಟ್ಟೆ ಸ್ಥಾಪಿಸಿದ್ದು, 40 ಮಂದಿಗೆ ಮಾತ್ರ ಮತದಾನ ಮಾಡಲು ಅವಕಾಶ ಕೊಡಲಾಗಿದೆ. ಇಲ್ಲಿಯೇ ರಾಹುಲ್​ ಗಾಂಧಿ ಮತ ಚಲಾಯಿಸಿದರು. ಶಾಸಕ ನಾಗೇಂದ್ರ, ಡಿ.ಕೆ. ಸುರೇಶ್ ಕೂಡ ಬಳ್ಳಾರಿಯಲ್ಲೇ ಹಕ್ಕು ಚಲಾಯಿಸಿದರು.
Congress presidential elections | Party's interim president Sonia Gandhi and General Secretary Priyanka Gandhi Vadra cast their vote at the AICC office in Delhi.pic.twitter.com/N5dJLQFQ7l
— ANI (@ANI)October 17, 2022

ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡ ಬೆಂಗಳೂರಲ್ಲೇ ಮತದಾನ ಮಾಡಿದರು.
Karnataka | Congress presidential election candidate Mallikarjun Kharge casts his vote in Bengalurupic.twitter.com/bfIsEGfVPp
— ANI (@ANI)October 17, 2022

137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನಕ್ಕೇರಲು ಕರ್ನಾಟಕದ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದ ನಾಯಕ ಚುಕ್ಕಾಣಿ ಹಿಡಿಯಲಿದ್ದು, ಖರ್ಗೆ ಮತ್ತು ತರೂರ್​ ಇಬ್ಬರಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದಕ್ಕೆ ಬುಧವಾರ(ಅ.19) ಉತ್ತರ ಸಿಗಲಿದೆ.
ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಮತದಾನ ಆರಂಭ

ಮಂಡ್ಯದ ಕೆರೆ ಕಾಮೇಗೌಡ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
