ಬೆಂಗಳೂರು:ಕರೊನಾ ನಿಯಂತ್ರಣ ಹಿನ್ನೆಲೆ ಕರ್ಫ್ಯೂ ಜಾರಿಯಲ್ಲಿದ್ದರೂ ಕೆಪಿಸಿಸಿ ಕಚೇರಿ ಆವರಣದಲ್ಲಿ ಇಂದು(ಸೋಮವಾರ) ಬೆಳಂಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕಿರಿದು ತುಂಬಿದ್ದರು.
ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆ ಅಂಗವಾಗಿ ಕಾಂಗ್ರೆಸ್​ ಸೈಕಲ್​ ಜಾಥಾ ನಡೆಸಿದೆ. ಈ ಜಾಥಾ ನೆಪದಲ್ಲಿ ಕೆಪಿಸಿಸಿ ಕಚೇರಿ ಬಳಿ ಸೇರಿದ್ದ ಜನಜಾತ್ರೆ ಕರೊನಾ ಹಾಟ್​ ಸ್ಪಾಟ್​ನಂತೆ ಕಂಡುಬಂತು. 50ಕ್ಕೂ ಹೆಚ್ಚು ಜನ ಸೇರಬಾರದು ಎಂಬ ನಿಯಮ ಇದ್ದರೂ ಕೆಪಿಸಿಸಿ ಗಾಳಿಗೆ ತೂರಿದ್ದು, ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯನ್ನೂ ತಂದೊಡ್ಡಿತು.
ಇದನ್ನೂ ಓದಿರಿಕಾರು ಬಿಟ್ಟು ಸೈಕಲ್​ನಲ್ಲೇ ಬಂದ ಸಿದ್ದರಾಮಯ್ಯ!
ಜಾಥಗೂ ಮೊದಲೇ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇತ್ತು. ಈಗ ಸೈಕಲ್​ ಜಾಥಾ ನೆಪದಲ್ಲಿ ಸಾವಿರು ಮಂದಿ ಒಮ್ಮೆಲೆ ಹೊರಟಿದ್ದರಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಮತ್ತಷ್ಟು ಹೆಚ್ಚಾಯಿತು.

ಇದಕ್ಕೂ ಮುನ್ನ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಸೈಕಲ್​ ಮೂಲಕವೇ ಹೊರಟರು. ಈ ವೇಳೆ ಜಮೀರ್ ಅಹಮದ್, ಪ್ರಕಾಶ್ ರಾಠೋಡ್ ಸಾಥ್ ನೀಡಿದರು. ಸದಾಶಿವ ನಗರದ ತಮ್ಮ ನಿವಾಸದಿಂದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಗೆ ಸೈಕಲ್​ನಲ್ಲಿ ಬಂದರು.
ಒಟ್ಟಾರೆ ರಸ್ತೆಯುದ್ದಕ್ಕೂ ಜಾಥಾ ನೆಪದಲ್ಲಿ ಕಾಂಗ್ರೆಸ್​ ನಾಯಕರ ಹಾದಿಯಾಗಿ ಕಾರ್ಯಕರ್ತರು ಕೂಡ ದೈಹಿಂಕ ಅಂತರವಿಲ್ಲದೆ, ಕರೊನಾ ನಿಯಮವನ್ನೂ ಪಾಲಿಸದೆ ಸಂಚರಿಸಿದ್ದು ಆತಂಕಕಾರಿ ವಿಷಯ.
ಬೆಂಗಳೂರಿಗಾಗಿ ಸಚಿವರಿಬ್ಬರ ಮುಸುಕಿನ ಗುದ್ದಾಟ? ತಲ್ಲಣ ಮೂಡಿಸಿದೆ ಸುಧಾಕರ್​ರ ‘ಸಂಡೇ ಥಾಟ್ಸ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
