ಬೆಳಗಾವಿ:ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ಆರಂಭಿಸಿದೆ.
ಸುವರ್ಣ ವಿಧಾನಸೌಧ ಮುಂಭಾಗ ಸೋಮವಾರ ಬೆಳಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ನೇತೃತ್ವದಲ್ಲಿ ಪ್ರತಿಭಟನೆಗೆ ಕಾಂಗ್ರೆಸ್ ಸದಸ್ಯರು, ರಾಷ್ಟ್ರನಾಯಕರ ಭಾವಚಿತ್ರಗಳನ್ನು ಅಸೆಂಬ್ಲಿ ಹಾಲ್​ನಲ್ಲಿ ಅಳವಡಿಸಬೇಕು ಎನ್ನುತ್ತಾ ಮಹನೀಯರ ಭಾವಚಿತ್ರಗಳನ್ನು ಹಿಡಿದು ಧರಣಿ ನಡೆಸುತ್ತಿದ್ದಾರೆ.
ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್​, ನಾರಾಯಣಗುರು, ಜ್ಯೋತಿ ಬಾಪುಲೆ, ವಲ್ಲಭಬಾಯಿ ಪಟೇಲ್, ಕನಕದಾಸ, ನೆಹರೂ, ಬಾಬು ಜಗಜೀವನ್​ರಾಮ್​, ಕುವೆಂಪು, ಶಿಶುನಾಳ ಶರೀಫ, ಬಸವಣ್ಣ, ಕನಕದಾಸ… ಮುಂತಾದ ವಿಚಾರವಂತರು ಹಾಗೂ ರಾಷ್ಟ್ರ ನಾಯಕರುಗಳು ಭಾರತದ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ, ಆದರ್ಶಗಳು ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ. ಅವರುಗಳ ಭಾವಚಿತ್ರಗಳನ್ನು ಅಸೆಂಬ್ಲಿಯಲ್ಲಿ ಅಳವಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸ್ವೀಕರ್ ಜತೆ ಸಾವರ್ಕರ್ ಭಾವಚಿತ್ರ ಸಂಬಂಧಿಸಿದಂತೆ ನಾನು ಮಾತನಾಡಿಲ್ಲ. ಕಾನೂನು ಮತ್ತು ಸಂಸದೀಯ ಸಚಿವರ ಜತೆ ಚರ್ಚೆ ಆಗಿರುವ ಬಗ್ಗೆ ಗೊತ್ತಿಲ್ಲ. ಸಾವರ್ಕರ್ ವಿಚಾರಧಾರೆಗಳು ಚರ್ಚೆ ಆಗಬಾರದು ಎಂದಿಲ್ಲ ಎಂದರು.
ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಕೋವಿಡ್​ಗೆ ತಾಯಿ ಬಲಿ… ಒಂದೊತ್ತಿನ ಊಟಕ್ಕೂ ಬೀದಿಬೀದಿ ಅಲೆಯುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾದ!

ಫಿಫಾ ವಿಶ್ವಕಪ್: ಸೋಲಿನ ಆಘಾತದಿಂದ ಕ್ರೀಡಾಂಗಣದಲ್ಲೇ ಕುಳಿತ ಫೈನಲ್​ ಹೀರೋ ಎಂಬೆಪ್ಪೆಗೆ ಸಮಾಧಾನ ಹೇಳಿದ ಫ್ರೆಂಚ್ ಅಧ್ಯಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
