ಬೆಂಗಳೂರು:ಸಚಿವ ಕೆ.ಎಸ್​.ಈಶ್ವರಪ್ಪ ಅವರ ಮಾತಿನಿಂದ ಉಂಟಾದ ಗದ್ದಲ ಇದೀಗ ಅಹೋರಾತ್ರಿ ಧರಣಿಯವರೆಗೂ ಮುಂದುವರಿದಿದ್ದು, ಕಾಂಗ್ರೆಸ್​ ನಾಯಕರು ವಿಧಾನಸಭೆಯಲ್ಲೇ ಮಲಗಲು ಸಜ್ಜಾಗಿ ಬಂದಿದ್ದಾರೆ.
ಧ್ವಜದ ವಿಚಾರವಾಗಿ ಈಶ್ವರಪ್ಪ ನೀಡಿದ್ದ ಹೇಳಿಕೆ ಸಂಬಂಧ ಹೊತ್ತಿಕೊಂಡ ಸಂಘರ್ಷ ರಾಜೀನಾಮೆಗೆ ಪಟ್ಟು ಹಿಡಿಯುವವಲ್ಲಿಗೆ ತಲುಪಿದ್ದು, ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್​ನವರು ಅಹೋರಾತ್ರಿ ಧರಣಿಗೆ ಸಜ್ಜಾಗಿದ್ದಾರೆ.
ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಈಗಾಗಲೇ ಅವರಿಗೆಲ್ಲ ಸ್ಪೀಕರ್ ಸೂಚನೆಯಂತೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದ್ದು, 120 ಜನರಿಗೆ ಖಾಸಗಿ ಹೋಟೆಲೊಂದರಿಂದ ಭೂರಿಭೋಜನವೇ ಬಂದಿದೆ.
ಕೆಲವು ನಾಯಕರು ಟ್ರ್ಯಾಕ್​ಪ್ಯಾಂಟ್​ ಮುಂತಾದ ರಾತ್ರಿ ಉಡುಪಿನೊಂದಿಗೆ ತಯಾರಾಗಿ ಬಂದಿದ್ದಾರೆ. ಟ್ರ್ಯಾಕ್ ಪ್ಯಾಂಟ್, ಟೀಶರ್ಟ್ ಧರಿಸಿ, ಹೆಗಲ ಮೇಲೆ ಸಫಾರಿ ಟವಲ್ ಹಾಕಿಕೊಂಡು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಈಗಾಗಲೇ ಹಾಜರಾಗಿದ್ದಾರೆ. ಅವರು ಉಳಿದ ಶಾಸಕರಿಗೆಲ್ಲ ಮಲಗಲು ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲಿ ಶಾಸಕರಿಗೆ ಮಲಗಲು ಹಾಸಿಗೆ-ದಿಂಬು ಜೋಡಿಸಿಡಲಾಗುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲ ನಾಯಕರೂ ಸೇರಿಕೊಳ್ಳಲಿದ್ದಾರೆ.
ಸಾಲದ ಕಂತು ಕಟ್ಟದ ಮಗ, ಅಮ್ಮನ ಮೇಲೇ ವಾಹನ ಹತ್ತಿಸಿ ಕೊಂದ!

ಹೆರಿಗೆ ಮಾಡಿಸಲಿಕ್ಕೂ ಲಂಚ ಕೇಳಿದ ವೈದ್ಯ; ದಾಳಿ ವೇಳೆ ಮನೆಯಲ್ಲಿತ್ತು ಕೋಟಿಗೂ ಅಧಿಕ ಹಣ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × three =
Remember me
