ಬೆಂಗಳೂರು:ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಕೊಡಬೇಕೆಂದು ಒತ್ತಡ ಸೃಷ್ಟಿಸುವಲ್ಲಿ ಸಫಲವಾದ ಕಾಂಗ್ರೆಸ್ ಶನಿವಾರದಿಂದಲೇ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಹೋರಾಟ ಹಮ್ಮಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಪ್ರಮುಖ ನಾಯಕರ ನೇತೃತ್ವದಲ್ಲಿ ಒಂಬತ್ತು ತಂಡ ರಚನೆಯಾಗಿದ್ದು, ಅವರೆಲ್ಲರೂ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಹೋರಾಟದಲ್ಲಿ ನೇತೃತ್ವ ವಹಿಸುವರು. ಏಪ್ರಿಲ್ 20ರವರೆಗೂ ಒಂದೊಂದು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುವುದು. ಬೆಲೆ ಏರಿಕೆ ಮತ್ತು 40 ಪರ್ಸೆಂಟ್ ಕಮೀಷನ್ ವಿಚಾರವನ್ನು ಮುಂದಿಕೊಟ್ಟುಕೊಂಡು ನಡೆಸುವ ಪ್ರತಿಭಟನೆಯಲ್ಲಿ ಕೆ.ಎಸ್. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಿಸಬೇಕೆಂದೂ ಸಹ ಆಗ್ರಹಿಸಲಾಗುತ್ತದೆ. ಗುರುವಾರ ರಾತ್ರಿ ವಿಧಾನಸೌಧ ಪೂರ್ವ ದ್ವಾರದ ಕಾರಿಡಾರ್​ನಲ್ಲೇ ಕಳೆದ ಕಾಂಗ್ರೆಸ್ ನಾಯಕರು ಶುಕ್ರವಾರ ಮಧ್ಯಾಹ್ನದವರೆಗೂ ಪ್ರತಿಭಟನೆ ಮುಂದುವರಿಸಿದ್ದರು.
ಕೊನೆಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದರಲ್ಲದೇ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿ ಅವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯ ಮಾತನಾಡಿ, ಇದೊಂದು ಅಮಾನವೀಯ ಅಪರಾಧ, ಇಂತಹಾ ಅಪರಾಧ ಪ್ರಕರಣಗಳಲ್ಲಿ ಎಫ್​ಐಆರ್ ಆದ ಕೂಡಲೇ ಅಪರಾಧಿಯನ್ನು ಬಂಧಿಸಬೇಕು. ಈಶ್ವರಪ್ಪ ಸಾಮಾನ್ಯ ಮನುಷ್ಯ ಅಲ್ಲ, ಸಾಕ್ಷ್ಯ ನಾಶ ಮಾಡುವ, ಪ್ರತ್ಯಕ್ಷ ಸಾಕ್ಷಿಗಳಿಗೆ ಬೆದರಿಸುವ ಸಾಧ್ಯತೆಗಳು ಕೂಡ ಇವೆ. ಅವರನ್ನು ಬಂಧಿಸಲೇಬೇಕು ಎಂದರು.
ರಮೇಶ್ ಜಾರಕಿಹೊಳಿ ಏನೂ ಬೇಕಾದರೂ ಮಾಡಿಕೊಳ್ಳಲಿ. ಎದುರಿಸಲು ನಾನು ರೆಡಿ. ಏನೂ ಬೇಕಾದರೂ ಬಿಚ್ಚಿ ತೋರಿಸಲಿ. ಅವರು ಏನೇನು ಬಿಚ್ಚಿದರು ಅಂತ ಜನ ಈಗಾಗಲೆ ನೋಡಿದ್ದಾರೆ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಮುಖ್ಯಮಂತ್ರಿಯಿಂದ ಅಪರಾಧ:ಕಳಂಕಿತ ಸಚಿವರ ರಕ್ಷಣೆಗೆ ನಿಂತು ಸಿಎಂ ಬೊಮ್ಮಾಯಿ ಅವರು ಬಹುದೊಡ್ಡ ಅಪರಾಧ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ತನಿಖೆಗೆ ಮುನ್ನವೇ ಮುಖ್ಯಮಂತ್ರಿಗಳು ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಈ ಪ್ರಕರಣದ ನ್ಯಾಯಯುತ ತನಿಖೆ ನಡೆಸಲು ಹೇಗೆ ಸಾಧ್ಯ? ಸಚಿವರ ರಕ್ಷಣೆಗಾಗಿ ಮುಖ್ಯಮಂತ್ರಿಗಳು ಕೊಟ್ಟಿರುವ ಹೇಳಿಕೆ ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲವೇ? ಬೊಮ್ಮಾಯಿ ಅವರು ಗೃಹಮಂತ್ರಿ ಆಗಿದ್ದವರು. ಈ ರೀತಿ ಹೇಳಿಕೆ ಕೊಡಬಾರದು ಎಂಬುದು ಅವರಿಗೆ ಗೊತ್ತಿಲ್ಲವೇ? ಅವರೇ ಪ್ರಕರಣದಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ. ಆ ಮೂಲಕ ಆರೋಪಿಗಿಂತಲೂ ಬಹುದೊಡ್ಡ ಅಪರಾಧ ಮಾಡುತ್ತಿದ್ದಾರೆ ಎಂದರು.
ಕಾರ್ಯಕಾರಿಣಿಗೂ ಬಿಸಿ:ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುವ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ ಕಾಂಗ್ರೆಸ್​ನಿಂದ ದೊಡ್ಡ ಹೋರಾಟ ಸಂಘಟಿಸಲು ಯೋಜನೆ ರೂಪುಗೊಂಡಿದೆ. ಎಚ್.ಕೆ ಪಾಟೀಲ್ ಅವರು ಅಲ್ಲಿ ಹೋರಾಟ ಮುನ್ನಡೆಸಲಿದ್ದಾರೆ.
ಪಿಎಸ್​ಐ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದರೂ ಗೃಹ ಸಚಿವರು ತನಿಖೆ ನಡೆಸುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದು, ಈ ವಿಷಯದಲ್ಲಿ ತನಿಖೆ ನಡೆದರೆ ಇನ್ನೆರೆಡು ವಿಕೆಟ್ ಪತನ ಆಗುತ್ತದೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 545 ಪಿಎಸ್​ಐ ಹುದ್ದೆಗಳಿಗೆ 70 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ. ಪರೀಕ್ಷೆ ಬಳಿಕ ಸಾಕಷ್ಟು ದೂರುಗಳು ಬಂದವು. ಅಭ್ಯರ್ಥಿಗಳೆಲ್ಲ ಗೃಹ ಸಚಿವರ ಬಳಿಯೇ ತೆರಳಿ ದೂರು ಕೊಟ್ಟರು. ಆದರೂ ಕ್ರಮಕೈಗೊಳ್ಳಲಿಲ್ಲ ಎಂದು ಟೀಕಿಸಿದರು. ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ, ಪರೀಕ್ಷೆ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು, ಒಎಂಆರ್ ಶೀಟ್ ಕಾಣೆಯಾಗಿತ್ತು, 70 ಲಕ್ಷ ಲಂಚ ಪಡೆಯಲಾಗಿದೆ ಎಂಬ ಆರೋಪವೂ ಕೇಳಿಬಂತು. ಗೃಹ ಸಚಿವರು ಏನೂ ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆಂದು ಆರೋಪಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
