ಬೆಂಗಳೂರು:ಸಿಎಂ ಬಿ.ಎಸ್​.ಯಡಿಯೂರಪ್ಪ ನಿವಾಸ ಕೃಷ್ಣಾ ಬಳಿ ಕಾಂಗ್ರೆಸ್​ ಕಾರ್ಯಕರ್ತೆಯರ ಹೈಡ್ರಾಮಕ್ಕೆ ಪೊಲೀಸರೇ ಸುಸ್ತಾದ ಘಟನೆ ಇಂದು(ಗುರವಾರ) ಮಧ್ಯಾಹ್ನ 1.30ರಲ್ಲಿ ಸಂಭವಿಸಿದೆ.
ರಮೇಶ್ ಜಾರಕಿಹೊಳಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಎಬ್ಬಿಸಿದ್ದ ಕೋಲಾಹಲ ಇನ್ನೂ ತಣ್ಣಗಾಗಿಲ್ಲ. ಈ ನಡುವೆ ‘ಏಕಪತ್ನಿವ್ರತಸ್ಥ ಸಾಬೀತಿಗೆ ರಾಜ್ಯದ ಎಲ್ಲ ಪಕ್ಷದ ಶಾಸಕರಿಗೂ ಸವಾಲು ಹಾಕುವ ಮೂಲಕ ಸಚಿವ ಡಾ.ಕೆ.ಸುಧಾಕರ್​ ವಿವಾದ ಸೃಷ್ಟಿಸಿದ್ದಾರೆ. ಸುಧಾಕರ್​ರ ಹೇಳಿಕೆ ಖಂಡಿಸಿ ಕಾಂಗ್ರೆಸ್​ ಶಾಸಕಿಯರು ಇಂದು ಬೆಳಗ್ಗೆ ಬೀದಿಗಿಳಿದು ಹೋರಾಟ ನಡೆಸಿದ್ದರು. ಇದಾದ ಬೆನ್ನಲ್ಲೇ ಪಕ್ಷದ ಕಾರ್ಯರ್ತೆಯರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.ಇದನ್ನೂ ಓದಿರಿ‘ಸಿಡಿ ಲೇಡಿ’ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಶಾಸಕಿಯರು!
ಡಾ.ಕೆ.ಸುಧಾಕರ್​ರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಸಿಎಂ ಗೃಹ ಕಚೇರಿ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್​ ಮುಖಂಡರನ್ನ ಪೊಲೀಸರು ತಡೆದಿದ್ದು, ಈ ವೇಳೆ ವಾಗ್ವಾದ ನಡೆಯಿತು. ನೂಕಾಟ-ತಳ್ಳಾಟ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಕೆಳಗೆ ಬಿದ್ದರು. ಸೀರೆ ಬಿಚ್ಚಿ ಹೋಗಿದೆ ಬಿಟ್ಟುಬಿಡಿ ಎಂದು ಕಾರ್ಯಕರ್ತೆಯರು ಕೂಗುತ್ತಿದ್ದಂತೆ ಪೊಲೀಸರು ಕಕ್ಕಾಬಿಕ್ಕಿಯಾದರು. ಅಯ್ಯೋ.. ಅಯ್ಯಯ್ಯೋ ಎಂದು ಕೂಗಿದ ಮಹಿಳಾ ಘಟಕದ ಕಾರ್ಯಕರ್ತೆಯರೆಲ್ಲರೂ ಕೆಳಗೆ ಕೂತುಬಿಟ್ಟರು. ಈ ವೇಳೆ ಪುಷ್ಪಾ ಅಮರನಾಥ್ ರಸ್ತೆಗೆ ಅಡ್ಡಡ್ಡ ಮಲಗಿದರು.
ಕೆಲಕಾಲ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದನ್ನ ಅರಿತ ಪೊಲೀಸರು, ಪುಷ್ಪಾ ಅಮರನಾಥ್ ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದಯೊಯ್ದರು. ಅನುಮತಿ ಪಡೆಯದೆ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಪೊಲೀಸರು ಆಕ್ಷೇಪ ಮಾಡಿದರು. ಏಕಾಏಕಿ ಕೈ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣ ಮತ್ತು ಕಾವೇರಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದೆ.
ಸಿದ್ದರಾಮಯ್ಯ, ಡಿಕೆಶಿ, ರಮೇಶ್​ಕುಮಾರ್​ ಅವರೇ ನನಗೆ ರಕ್ಷಣೆ ಕೊಡಿ ಎಂದ ಸಿಡಿ ಲೇಡಿ!

ನರಹಂತಕ ಹುಲಿಯ ಅಂತ್ಯಸಂಸ್ಕಾರ ಮುಗಿದ ಬಳಿಕ ನಿಟ್ಟುಸಿರುಬಿಟ್ಟ ಜನರಿಗೆ ಬೆಳಂಬೆಳಗ್ಗೆ ಕಾದಿತ್ತು ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
