ಬೆಂಗಳೂರು:ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೂತನ ಯೋಜನೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಪೂರ್ವ ಮತ್ತು ಪಶ್ವಿಮ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಐದುನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಚೊಂಬು ಇಟ್ಟು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷರು ನಾರಾಯಣಸ್ವಾಮಿ, ಮಂಜುಳಾ ನಾಯ್ಡು, ಪದ್ಮಾವತಿ, ಉದಯ್ ಶಂಕರ್, ಧರ್ಮಸೇನಾ ಮತ್ತಿತರರು ಪ್ರತಿಭಟೆನ ನೇತೃತ್ವ ವಹಿಸಿದ್ದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ನಮ್ಮ ಸರ್ಕಾರ ಇದ್ದಾಗ ಅಷ್ಟೇ ಅಲ್ಲ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕೊಟ್ಟಿದ್ದು ಚೋಂಬೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿತ್ತ ಸಚಿವೆ ನಮ್ಮ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಇಲ್ಲಿಂದ ಆಯ್ಕೆಯಾಗಿರೋದಕ್ಕೂ ಅವರಿಗೆ ಕಿಂಚಿತ್ತೂ ಕನಿಕರ ಇಲ್ಲ. ವಿತ್ತ ಸಚಿವೆಯ ಗಂಡನೇ ಕೇಂದ್ರದ ನೀತಿಯನ್ನು ಟೀಕೆ ಮಾಡುತ್ತಾರೆ. ದೇಶ 20ವರ್ಷ ಹಿಂದಕ್ಕೆ ಹೋಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲವನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ. ಪಬ್ಲಿಕ್ ಸೆಕ್ಟರ್ಸ್‌ಗಳನ್ನು ಬಿಜೆಪಿಯವರು ಮಾರಾಟ ಮಾಡುತ್ತಿದ್ದಾರೆ. ಇಂತಹವರಿಗೆ ಯಾಕೆ ಜನ ಮತ ಹಾಕುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಸರ್ಕಾರ ಉಳಿಸಿಕೊಳ್ಳೊದಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಹಿಂದಿನ ಎಲ್ಲ ಪ್ರದಾನಿಗಳು ಸೇರಿ 52ಲಕ್ಷ ಕೋಟಿ ಸಾಲ ಮಾಡಿದ್ದರು. ಇವರು 149ಲಕ್ಷ ಕೋಟಿ ರೂ. ಹೊಸ ಸಾಲ ಮಾಡಿ ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ಹರಿಹಾಯ್ದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಕೇಂದ್ರದ ಜನ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. 350ರೂ. ಸಿಲೆಂಡರ್ ಇದ್ದಾಗ ಅವರು ಬೆಲೆ ಏರಿಕೆ ಎಂದಿದ್ದು ಮಿಸ್ಟರ್ ಮೋದಿ ಈಗ ಬೆಲೆ ಏರಿಕೆಯಾಗಿಲ್ವಾ? ಎಂದು ಪ್ರಶ್ನಿಸಿದರು.
ಕಚ್ಚಾತೈಲದ ಬೆಲೆ ಕುಸಿದರೂ ಪೆಟ್ರೋಲ್ ಡೀಸೆಲ್ ರೇಟ್ ಕಡಿಮೆ ಮಾಡಿಲ್ಲ. ಅತ್ಯಂತ ದುರ್ಬಲ ಪ್ರಧಾನಿ ಮೋದಿ. ಅತ್ಯಂತ ಭ್ರಷ್ಟ ಪ್ರಧಾನಿ ಮೋದಿ. ರಫೆಲ್ ಹಗರಣದ ಮೂಲಕ ಕೊಳ್ಳೆ ಹೊಡದಿದ್ದಾರೆ ಎಂದು ಟೀಕಿಸಿದರು.
5ಜಿ ಹಗರಣ ನಡೆದಿದೆ. 5ಜಿ ಯಲ್ಲಿನ ಎಸ್ಟಿಮೇಟ್ ರೆವೆನ್ಯೂ 70 ಸಾವಿರ ಕೋಟಿ ರೂ. ಆದರೆ, 12 ಸಾವಿರ ಕೋಟಿ ರೂ. ಮಾತ್ರ ಆದಾಯ ಬಂದಿದೆ ಎನ್ನುತ್ತಿದ್ದಾರೆ. ಸುಮಾರು 50 ಸಾವಿರ ಕೋಟಿ ರೂ. ಇವರ ಅಡ್ಜಸ್ಟ್ ಮೆಂಟ್‌ಮೂಲಕ ಲಾಸ್ ಆಗಿದೆ ಎಂದು ಆರೋಪಿಸಿದರು.2014ರನಂತರ ಮೋದಿ ಅವರು ಕೆಆರ್‌ಎಸ್ ರೀತಿಯ ಯಾವುದಾದರೂ ಒಂದು ನೀರಾವರಿ ಯೋಜನೆ ಜಾರಿ ಮಾಡಿದ್ದಾರಾ? ಮೇಜರ್ ಇಂಡಸ್ಟ್ರಿ ಯಾವುದನ್ನಾದರೂ ಕರ್ನಾಟದಲ್ಲಿ ಇವರು ಮಾಡಿದ್ದಾರಾ? ನೀರಾವರಿಗೆ ಒತ್ತು ಕೊಟ್ಟಿಲ್ಲ, ಇಂಡಸ್ಟ್ರಿಗೆ ಒತ್ತು ಕೊಟ್ಟಿಲ್ಲ. ಹಾಗಾದರೆ ಮೋದಿ ಏನು ಕಡೆದು ಕಟ್ಟೆ ಹಾಕಿದ್ದೀರಿ? ಎಂದು ಕೆಣಕಿದರು.
ವಾಲ್ಮೀಕಿ ಹಗರಣ ಮತ್ತು ಮೂಡಾ ಹಗರಣದ ಬಗ್ಗೆ ಬಿಜೆಪಿ ಎಂಪಿಗಳು ಮಾತನಾಡ್ತಿದ್ದಾರೆ? ಯಾಕೆ ಅವರು ರಾಜ್ಯದ ಕುರಿತಾಗಿ ಮಾತನಾಡುತ್ತಿಲ್ಲ. ಅವರಿಗೆ ರಾಜ್ಯದ ಮೇಲೆ ಬದ್ಧತೆ ಇಲ್ಲ ಎಂದು ದೂರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ಏನು ಮಾಡುತ್ತಿದ್ದಾರೆ. ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದರೂ ನಿಮಗೆ ಏನೂ ಅನಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.
ನಿತೀಶ್, ಚಂದ್ರಬಾಬು ಬಜೆಟ್:
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಕೇಂದ್ರ ಸರ್ಕಾರದ ಬಜೆಟ್ ಎನ್ನುವುದಕ್ಕಿಂತ ಇದನ್ನು ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಬಜೆಟ್ ಎನ್ನಬೇಕು. ಈ ಇಬ್ಬರು ನಾಯಕರಿಗೆ ಹೆದರಿ ಕೇಂದ್ರ ಬಜೆಟ್ ಮಾಡಿದೆ. ರಾಜ್ಯಕ್ಕೆ ಕೊಡಬೇಕಿದ್ದ ಅನುದಾನವನ್ನೂ ಕೇಂದ್ರ ಕೊಟ್ಟಿಲ್ಲ. ನೀರಾವರಿಗೆ ಯಾವುದೇ ಆದ್ಯತೆ ನೀಡಿಲ್ಲ. ಮೋದಿ ಅವರ ಅಚ್ಚೇದಿನ್, ವಿಕಸಿತ ಭಾರತ ಎಂದರೆ ಇದೇನಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿಯ ಯಾವ ಭರವಸೆಗಳೂ ಕಾರ್ಯಗತವಾಗಿಲ್ಲ. ಎಲ್ಲೆಲ್ಲಿ ಬಿಜೆಪಿಗೆ ವಿರುದ್ಧ ಇರುವ ರಾಜ್ಯ ಸರ್ಕಾದ ಇದೆಯೋ ಆ ರಾಜ್ಯಕ್ಕೆ ಅನುದಾನ ಕೊಟ್ಟಿಲ್ಲ. ರಾಜ್ಯದಿಂದ ಐದು ಮಂತ್ರಿಗಳಿದ್ದಾರೆ. ಒಬ್ಬೋಬರು ಒಂದೊಂದು ಯೋಜನೆ ತಂದರು ಸಾಕಾಗುತ್ತಿತ್ತು ಎಂದು ಭಂಡಾರಿ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 3 =
Remember me
