ಬೆಂಗಳೂರು:ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್​ ಎದುರಾಳಿಯ ಅಸಮಾಧಾನಿತರಿಗೆ ಬಲೆ ಬೀಸಿದ್ದು, ಎರಡು ಲೆಕ್ಕಾಚಾರದಲ್ಲಿ ಎದುರಾಳಿ ಟಿಕೆಟ್​ ಆಕಾಂಗಳನ್ನು ಸೆಳೆಯುವ ಕಾರ್ಯಕ್ಕೆ ಪದ ಹೈಕಮಾಂಡ್​ ಸ್ಪಷ್ಟ ಸೂಚನೆ ನೀಡಿದೆ.
ಚುನಾವಣೆ ಕಾವು ಹೆಚ್ಚಾದ ವೇಳೆ ಯಾವ ಪಕ್ಕೆ ಹೆಚ್ಚೆಚ್ಚು ಮಂದಿ ಸೇರ್ಪಡೆಯಾಗುತ್ತಾರೋ ಆ ಪದ ಪರ ಟ್ರೆಂಡ್​ ಸೃಷ್ಟಿಯಾಗುತ್ತಿದೆ ಎಂಬ ರಾಜಕೀಯ ವಾದವೊಂದಿದೆ. ಇದಕ್ಕೆ ಪೂರಕವಾಗಿ ಹೆಚ್ಚು ಮಂದಿಯನ್ನು ಸೇರಿಸಿಕೊಳ್ಳಲು ಪಗಳು ಮುಂದಾಗುವುದು ಸಹಜ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ವಿಶೇಷ ಗಮನ ಹರಿಸಿದೆ. ಒಂದು ವರ್ಷದ ಹಿಂದೆಯೇ ಜೆಡಿಎಸ್​ ಬಲ ಕುಗ್ಗಿಸಲು ಆ ಪದ ಶಾಸಕರು, ಅಭ್ಯರ್ಥಿಗಳನ್ನು ಸೆಳೆಯಲು ವಿಶೇಷ ಕಾರ್ಯತಂತ್ರ ರೂಪಿಸಿತ್ತು. ಅದರ ಭಾಗವಾಗಿ ಒಂದಷ್ಟು ಮಂದಿ ಪ ಸೇರಿದ್ದರೆ ಮತ್ತೊಂದಿಷ್ಟು ಮಂದಿ ಪದ ಹೊಸ್ತಿಲ ಬಳಿ ಬಂದು ನಿಂತಿದ್ದಾರೆ. ಈಗ ಮತ್ತೊಂದು ಸುತ್ತಿನಲ್ಲಿ ಆಪರೇಷನ್​ ನಡೆಸಬೇಕೆಂಬ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆಯಾಗಿದೆ.
ಯಾವೆಲ್ಲ ಕ್ಷೇತ್ರದಲ್ಲಿ ಪದ ಕಡೆಯಿಂದ ಪ್ರಬಲ ಅಭ್ಯರ್ಥಿ ಇಲ್ಲವೋ ಅಂತಹ ಕಡೆಗಳಲ್ಲಿ ಜೆಡಿಎಸ್​ ಅಥವಾ ಬಿಜೆಪಿಯ ಅಭ್ಯರ್ಥಿಗಳು ಪ್ರಬಲರಾಗಿದ್ದರೆ ಅವರನ್ನು ಮಾತನಾಡಿಸಿ ಎಂಬ ಸೂಚನೆ ದೆಹಲಿಯಿಂದ ರಾಜ್ಯ ಕಾಂಗ್ರೆಸ್​ಗೆ ಬಂದಿದ್ದು, ಆ ಪ್ರಕಾರ ಮಾತುಕತೆ ನಡೆದಿದೆ. ಮೊದಲ ಸುತ್ತಿನ ಆಪರೇಷನ್​ನಲ್ಲಿ ಯಲ್ಲಾ ಪುರ, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಆಕಾಂಗಳನ್ನು ಕಾಂಗ್ರೆಸ್​ ಬರಮಾಡಿಕೊಂಡಿತು. ಈಗ ಬೆಂಗಳೂರಿನ ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಂದೀಶ್​ ರೆಡ್ಡಿಗೆ ಗಾಳ ಹಾಕಿದ್ದು ಮಾತುಕತೆ ನಡೆಸಿದೆ. ಸಚಿವ ಬೈರತಿ ಬಸವರಾಜ್​ ಕಾಂಗ್ರೆಸ್​ಗೆ ಮರಳುವಂತೆ ಆಹ್ವಾನ ನೀಡಿದ್ದರೂ ಅವರು ಈವರೆಗೆ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ ನಂದೀಶ್​ ರೆಡ್ಡಿಯವರನ್ನು ಮಾತನಾಡಿಸಲಾಗಿದೆ. ನಂದೀಶ್​ ರೆಡ್ಡಿ ಕೂಡ ಬಿಜೆಪಿಯ ಪ್ರಮುಖರಿಗೆ ವಿಚಾರ ಮುಟ್ಟಿಸಿದ್ದು, ತಮಗೆ ಅವಕಾಶ ಕೊಡುವುದನ್ನು ಖಾತ್ರಿ ಮಾಡದೇ ಇದ್ದರೆ ನಾನು ಕಾಂಗ್ರೆಸ್​ ಆಹ್ವಾನದ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಸಂದೇಶ ಕಳಿಸಿದ್ದಾರೆನ್ನಲಾಗಿದೆ. ಹೊಸಕೋಟೆ ವಿಧಾನಸಭಾ ೇತ್ರದ ಬೆಳವಣಿಗೆ ಬಗ್ಗೆ ಕಾಂಗ್ರೆಸ್​, ಬಿಜೆಪಿ ಪರಸ್ಪರ ಕಣ್ಣಿಟ್ಟಿವೆ. ಉಪ ಚುನಾವಣೆಯಲ್ಲಿ ಪೇತರನಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ ಶರತ್​ ಬಚ್ಚೇಗೌಡ ಕಾಂಗ್ರೆಸ್​ ಸಖ್ಯ ತೊರೆದು ಬಿಜೆಪಿಗೆ ಮರಳುವ ಅವಕಾಶವಿದೆ, ಹಾಗೊಂದು ವೇಳೆ ಶರತ್​ ಹೆಜ್ಜೆ ಮುಂದಿಟ್ಟರೆ ಎಂ.ಟಿ.ಬಿ.ನಾಗರಾಜ್​ ಕಾಂಗ್ರೆಸ್​ನತ್ತ ಜಿಗಿಯಲಿದ್ದಾರೆ ಎಂಬ ವಾದವಿದೆ.
ಈ ಇಬ್ಬರೂ ತಮ್ಮ ನಡೆಯನ್ನು ಗೌಪ್ಯವಾಗಿಟ್ಟಿದ್ದಾರೆ. ಇನ್ನು ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸೋಮಶೇಖರ್​ ಅವರ ಬರುವಿಕೆಗಾಗಿ ಕಾಂಗ್ರೆಸ್​ ಕಾಯ್ದಿದೆ. ಪ್ರಸ್ತುತ ಪದ ಟಿಕೆಟ್​ಗೆ ಅರ್ಜಿ ಹಾಕಿದವರ ಪೈಕಿ ಯಾರೊಬ್ಬರೋ ಸೋಮಶೇಖರ್​ಗೆ ಸರಿಸಾಟಿಯಾಗಿ ಕಾಣಿಸುತ್ತಿಲ್ಲ. ಹೀಗಾಗಿ ಮನವೊಲಿಸಬೇಕೆಂಬ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆಯಾಗಿದೆ. ಇನ್ನೊಂದು ಬೆಳವಣಿಗೆಯಲ್ಲಿ ಬಿಜೆಪಿಗೆ ಜಿಗಿದು ಶಾಸಕರಾದ ಕೆಲವರಿಗೆ ಆ ಪದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಗದ ಬಗ್ಗೆ ಬೇಸರವಿದೆ. ಅಂತವರನ್ನು ಬೇಟೆಯಾಡಲೂ ಸಹ ಕಾಂಗ್ರೆಸ್​ ಮುಂದಾಗಿದೆ. ಕಲಬುರಗಿ, ಚಿತ್ರದುರ್ಗ, ಬೆಂಗಳೂರು ನಗರ ಜಿಲ್ಲೆ ಸೇರಿ ಹಳೇ ಮೈಸೂರು ಭಾಗದ ಬಿಜೆಪಿ, ಜೆಡಿಎಸ್​ನ ಶಾಸಕರು, ವಿಧಾನ ಪರಿಷತ್​ ಸದಸ್ಯರು, ಮಾಜಿ ಶಾಸಕರನ್ನು ಮಾತನಾಡಿಸಿದ್ದು, ಮುಂದಿನ ದಿನಗಳಲ್ಲಿ ಅವರ ಅಗತ್ಯತೆ ನೋಡಿಕೊಂಡು ಗಾಳ ಹಾಕಲಿದೆ ಎಂದು ಪದ ಮೂಲಗಳು ತಿಳಿಸಿವೆ. ಹಳೇ ಮೈಸೂರು ಭಾಗದಲ್ಲಿ ಎಚ್​.ಡಿ.ಕುಮಾರಸ್ವಾಮಿ ಬಲ ಕುಗ್ಗಿಸಲೇಬೇಕೆಂಬ ಸ್ಪಷ್ಟ ಲೆಕ್ಕಾಚಾರದಲ್ಲಿ ಕಾರ್ಯಾಚರಣೆ ನಡೆದಿದೆ.
ಮನವೊಲಿಕೆಗೆ ಸಾಹಸಟಿಕೆಟ್​ಗಾಗಿ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್​ಗೆ ಈಗ ಆಕಾಂಗಳ ಒತ್ತಡದ ಬಿಸಿ ತಾಕಲಾರಂಭವಾಗಿದೆ. ಪರಸ್ಪರ ಪೈಪೋಟಿಯಿಂದ ಅಸಮಾಧಾನ ಭುಗಿಲೇಳುವ ಅಂದಾಜಿನಲ್ಲಿ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲ ಖುದ್ದು ಅಖಾಡಕ್ಕಿಳಿದು ಸರಣಿ ಸಭೆ ನಡೆಸುತ್ತಿದ್ದಾರೆ. ಪದ ಟಿಕೆಟ್​ ಹಂಚಿಕೆ ಸೂತ್ರ ಮತ್ತು ಉಳಿದವರ ಸಹಕಾರ ಯಾವ ರೀತಿ ಅಗತ್ಯ ಇದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಮೂರು ಲೆಕ್ಕಾಚಾರ1ಎದುರಾಳಿ ಅಸಮಾಧಾನಿತರನ್ನು ಸೆಳೆದರೆ ಎದುರಾಳಿಯ ಬಲ ಸಹಜವಾಗಿ ಕುಸಿಯಲಿದೆ.2ಸಮರ್ಥ ಅಭ್ಯರ್ಥಿ ಇಲ್ಲದ ಕಡೆ ಪ್ರಬಲ ಎದುರಾಳಿ ಸೆಳೆದರೆ ೇತ್ರ ಗೆಲ್ಲುವ ಅವಕಾಶ ಹೆಚ್ಚು.3 ವೈಯಕ್ತಿಕವಾಗಿ ಗೆಲ್ಲುವ ಸಾಮರ್ಥ್ಯ ಇರುವವರಿಗೆ ಮಣೆ ಹಾಕಿದರೆ ನಂಬರ್​ ಗೇಮ್​ಗೆ ಸಹಕಾರಿ===============================ಕೈಕಮಾಂಡ್​ಗೆ ಖಾಸಗಿ ವರದಿ
ಬೆಂಗಳೂರು: ಕಾಂಗ್ರೆಸ್​ನ ರಾಜ್ಯದ ಇಬ್ಬರು ಪ್ರಮುಖ ನಾಯಕರು ಪ್ರತ್ಯೇಕವಾಗಿ ಖಾಸಗಿ ಸಂಸ್ಥೆಗಳ ಮೂಲಕ ಮಾಡಿಸಿದ ರಾಜಕೀಯ ವಸ್ತುಸ್ಥಿತಿ ವರದಿಯನ್ನು ಹೈಕಮಾಂಡ್​ಗೆ ಕಳಿಸಿದ್ದು, ದೆಹಲಿ ನಾಯಕರು ಶ್ರೀವೇ ಅವಲೋಕನ ನಡೆಸಲಿದ್ದಾರೆ. ಪ್ರದೇಶವಾರು, ಜಾತಿ ವಾರು, ಎದುರಾಳಿ ಸಾಮರ್ಥ್ಯ, ಪದ ಸ್ವಯಂ ಸಾಮರ್ಥ್ಯ ಹೀಗೆ ವಿವಿಧ ಆಯಾಮದಲ್ಲಿ ವರದಿ ಇದ್ದು, ವಿಜಯವಾಣಿಗೆ ವರದಿಯ ಕೆಲವು ಅಂಶಗಳು ಲಭ್ಯವಾಗಿದೆ.
ಡಿ.ಕೆ.ಶಿವಕುಮಾರ್​ ಮೂಲಕ ಸಲ್ಲಿಕೆಯಾಗಿರುವ ವರದಿಯಲ್ಲಿ ಪವು 118 ಸ್ಥಾನಗಳವರೆಗೂ ಗೆಲ್ಲುವ ಅವಕಾಶ ಇದೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ನೇಮಿಸಿದ ಕಂಪನಿ ನೀಡಿದ ವರದಿಯಲ್ಲಿ ಕಾಂಗ್ರೆಸ್​ಗೆ ಈ ಹಂತದಲ್ಲಿ 107 ಸ್ಥಾನಗಳು ಬರಲಿವೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಜೆಡಿಎಸ್​ ಬಲ ಕುಗ್ಗಿಸದೇ ಇದ್ದರೆ ಕಾಂಗ್ರೆಸ್​ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ, ಈ ಕಾರಣಕ್ಕೆ ಎಚ್​.ಡಿ.ಕುಮಾರಸ್ವಾಮಿಯವರನ್ನು ಚನ್ನಪಟ್ಟಣದಲ್ಲಿ ಕಟ್ಟಿಹಾಕಲೇ ಬೇಕೆಂದು ಖಾಸಗಿ ಸಂಸ್ಥೆ ಸಲಹೆ ನೀಡಿದೆ.
ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್​ ಸ್ಪಷ್ಟ ಮೇಲುಗೈ ಸಾಧಿಸಬೇಕೆಂದರೆ ಪರಿಶಿಷ್ಟ ಜಾತಿ ಪಂಗಡದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಬೇಕು. ಪ್ರಸ್ತುತ ಮುಸ್ಲಿಂ ಹಾಗೂ ಕುರುಬ ಸಮುದಾಯ ಮಾತ್ರ ಪದ ಜತೆ ಬಹುಪಾಲು ಇದ್ದಂತೆ ಕಾಣಿಸುತ್ತಿದೆ. ಇದು ಬೇರೆ ಯಾವುದೇ ಪದ ಮೂಲಕ ಚದುರದಂತೆ ನೋಡಿಕೊಳ್ಳಬೇಕು ಹಾಗೂ ಬಿಜೆಪಿ ಹೆಚ್ಚು ನೆಚ್ಚಿಕೊಂಡಿರುವ ಎಸ್ಸಿ ಮತಗಳು ಆ ಪಕ್ಕೆ ಕ್ರೋಡಿಕರಣವಾಗದಂತೆ ನೋಡಿಕೊಳ್ಳಬೇಕೆಂಬ ವಿಶ್ಲೇಷಣೆ ಯಲ್ಲಿದೆ. ಇತ್ತೀಚಿನ ಚುನಾವಣೆಯಲ್ಲಿ ಮಹಿಳಾ ಮತದಾರರ ಪಾಲ್ಗೊಳ್ಳುವಿಕೆ ಸಾಕಷ್ಟಿದೆ. ಅವರನ್ನು ಕೇಂದ್ರೀಕರಿಸಿ ಪ್ರಯತ್ನ ಹೆಚ್ಚೆಚ್ಚು ಮಾಡಬೇಕು. ಬೆಲೆ ಏರಿಕೆ ಬಗ್ಗೆ ರಾಜ್ಯದ ಉದ್ದಗಲಕ್ಕೂ ಅಸಮಾಧಾನವಿದೆ. ಇದನ್ನು ಲಾಭ ಮಾಡಿ ಕೊಳ್ಳಬೇಕು, ಬಿಜೆಪಿ ವಿರುದ್ಧ ಟೀಕೆ ಮಾಡುವ ಜತೆಗೆ ಭರವಸೆ ತುಂಬವ ಕೆಲಸ ಆಗಬೇಕೆಂಬ ಪ್ರಧಾನ ಸಲಹೆಯೂ ಇದೆ.
ಮುಂದೇನು?:ಪದ ಪ್ರಧಾನ ಸರ್ವೆ ತಂಡ ೇತ್ರವಾರು ಮಾಹಿತಿ ಕಲೆ ಹಾಕುತ್ತಿದೆ. ಇದರ ಮೊದಲ ವರದಿ ಇಷ್ಟರಲ್ಲೇ ಬರಲಿದೆ. ಮುಂದೆ ೇತ್ರವಾರು ಹಿಡಿತಕ್ಕೆ ಪಡೆಯಲು ಪ್ರತ್ಯೇಕ ಕಾರ್ಯತಂತ್ರ ರೂಪಿಸುವ ಕೆಲಸ ನಡೆಯಲಿದೆ. ೆಬ್ರವರಿ 2ರಂದು ಅಭ್ಯರ್ಥಿ ಆಯ್ಕೆ ಸಂಬಂಧ ಪ್ರಮುಖ ಸಭೆ ನಡೆಯುತ್ತದೆ. 65 ೇತ್ರದಲ್ಲಿ ಹಾಲಿ ಶಾಸಕರು ಸೇರಿದಂತೆ ಅಷ್ಟೇ ಸಂಖ್ಯೆಯ ಇತರ ೇತ್ರಕ್ಕೆ ಒಬ್ಬ ಆಕಾಂ ಇದ್ದ ಅವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯೂ ಇದೆ. ಹೆಚ್ಚು ಪೈಪೋಟಿ ಇರುವ ಕಡೆ ಸರ್ವೆ ವರದಿಯಲ್ಲಿ ಯಾರ ಹೆಸರಿಗೆ ಹೆಚ್ಚು ಮಾನ್ಯತೆ ಸಿಗುತ್ತದೋ ಅವರನ್ನು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್​ ಮೊದಲ ವಾರದಲ್ಲಿ ನಡೆಯುವುದು.
ಎರಡನೇ ಹಂತದ ಪ್ರವಾಸಡಿ.ಕೆ.ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ನಡೆಸುತ್ತಿರುವ ಜಿಲ್ಲಾ ಪ್ರವಾಸ ತಕ್ಕ ಮಟ್ಟಿಗೆ ಮುಗಿಯುವ ಹಂತಕ್ಕೆ ಬಂದಿದೆ. ೆಬ್ರವರಿ ಮೊದಲ ವಾರದಲ್ಲಿ ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ವಿಧಾನಸಭಾವಾರು ಪ್ರವಾಸ ಆರಂಭಿಸುವರು. ಡಿ.ಕೆ.ಶಿವಕುಮಾರ್​ ಕೋಲಾರದ ಕುರುಡುಮಲೆಯಿಂದ ಹೊರಟರೆ, ಸಿದ್ದರಾಮಯ್ಯ ಕೂಡಲಸಂಗಮದಿಂದ ಪ್ರವಾಸ ಪ್ರಾರಂಭಿಸಲಿದ್ದಾರೆ.
ಜನರ ಕೊರತೆ ಬಗ್ಗೆ ಕಳವಳಪ್ರಜಾಧ್ವನಿ ಯಾತ್ರೆ ಕೋಲಾರ, ತುಮಕೂರು ಭಾಗದಲ್ಲಿ ಸಂಚರಿಸಿದಾಗ ಜನರ ಕೊರತೆಯುಂಟಾಗಿ ಖಾಲಿ ಖುರ್ಚಿ ಪ್ರದರ್ಶನವಾಗಿರುವುದು ಪ್ರಮುಖ ನಾಯಕರನ್ನು ಚಿಂತೇಗೀಡು ಮಾಡಿದೆ. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಹೇಳಿಕೊಂಡಿರುವ ಕೋಲಾರದ ಸಭೆಗೆ ಮುನ್ನ ನಡೆದ ಬೆಳವಣಿಗೆಗಳು, ಜನರ ಕೊರತೆ ಬಗ್ಗೆ ಪದ ವೇದಿಕೆಯಲ್ಲಿ ವ್ಯಾಪಕ ಚರ್ಚೆಯಾಗಿದೆ. ಸ್ಥಳಿಯ ನಾಯಕರಲ್ಲಿನ ಹೊಂದಾಣಿಕೆ ವ್ಯತ್ಯಾಸಗಳು, ಪ್ರತಿಷ್ಠೆಯ ಬಗ್ಗೆ ಹಿರಿಯ ನಾಯಕರು ಸಿಡಿಮಿಡಿಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
