ಬೆಂಗಳೂರು:ದ್ವೇಷದ ಆಧಾರದಲ್ಲಿ ರಾಜಕೀಯ ಮಾಡಬಾರದು. ನಾವು ಬಳಸುವ ಪದಗಳು, ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮಾತಿಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಎಚ್​.ಡಿ.ಕುಮಾರಸ್ವಾಮಿ ನಿನ್ನೆ (ನ.22) ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆ ವೀಕ್ಷಣೆಗೆ ತೆರಳಿದ್ದರು. ವೀಕ್ಷಣೆಯ ನಂತರ ಕಾರು ಹತ್ತುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶಗೊಂಡು ಆಡಿರುವ ಮಾತಿನ ವಿಡಿಯೋ ವೈರಲ್ ಆಗಿತ್ತು.
ರಾಜಕೀಯವನ್ನು ದ್ವೇಷದ ಆಧಾರದಲ್ಲಿ ಮಾಡಬಾರದು, ನಾವು ಬಳಸುವ ಪದಗಳು, ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತವೆ.@hd_kumaraswamyಅವರೇ, ನಿಮ್ಮ ಈ ರೀತಿಯ ಪದಬಳಕೆ ನಿಮಗೂ ಶೋಭೆ ತರುವುದಿಲ್ಲ, ರಾಜಕೀಯದ ಘನತೆಯನ್ನೂ ಉಳಿಸುವುದಿಲ್ಲ.ಪರಸ್ಪರ ಗೌರವ ಇಟ್ಟುಕೊಂಡೇ ರಾಜಕೀಯ ಮಾಡಬಹುದು ಎಂದು ಹಿರಿಯರು ತೋರಿಸಿದ್ದಾರೆ.pic.twitter.com/l4nM5fu4m7— Karnataka Congress (@INCKarnataka)November 23, 2022
ರಾಜಕೀಯವನ್ನು ದ್ವೇಷದ ಆಧಾರದಲ್ಲಿ ಮಾಡಬಾರದು, ನಾವು ಬಳಸುವ ಪದಗಳು, ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತವೆ.@hd_kumaraswamyಅವರೇ, ನಿಮ್ಮ ಈ ರೀತಿಯ ಪದಬಳಕೆ ನಿಮಗೂ ಶೋಭೆ ತರುವುದಿಲ್ಲ, ರಾಜಕೀಯದ ಘನತೆಯನ್ನೂ ಉಳಿಸುವುದಿಲ್ಲ.ಪರಸ್ಪರ ಗೌರವ ಇಟ್ಟುಕೊಂಡೇ ರಾಜಕೀಯ ಮಾಡಬಹುದು ಎಂದು ಹಿರಿಯರು ತೋರಿಸಿದ್ದಾರೆ.pic.twitter.com/l4nM5fu4m7
ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಅವರನ್ನು ಸೂ…ಮಗ ಎಂದು ಎಚ್​.ಡಿ.ಕುಮಾರಸ್ವಾಮಿ ಕರೆದಿದ್ದರು. ಇದೀಗ ಎಚ್​.ಡಿ.ಕುಮಾರಸ್ವಾಮಿ ಆಡಿರುವ ಮಾತಿನ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ರೀತಿಯ ಪದಬಳಕೆ ನಿಮಗೆ ಶೋಭೆ ತರುವುದಿಲ್ಲ. ಜತೆಗೆ ರಾಜಕೀಯ ಘನತೆಯನ್ನೂ ಉಳಿಸುವುದಿಲ್ಲ. ಪರಸ್ಪರ ಗೌರವ ಇಟ್ಟುಕೊಂಡೇ ರಾಜಕೀಯ ಮಾಡಬಹುದು ಎಂಬುವುದನ್ನು ಹಿರಿಯರು ತೋರಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿದೆ.
ತನ್ನ ಆಡಿರುವ ಮಾತು ತಪ್ಪು ಎಂಬುವುದು ಅರಿವಾಗುತ್ತಿದ್ದಂತೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೆ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
VIDEO: ಕುಮಾರಸ್ವಾಮಿ ಬಾಯಲ್ಲಿ ಬಂತು ಕೆಟ್ಟ ಪದ; ಮಾಜಿ ಸಿಎಂ ಬೈದಿದ್ದು ಯಾರಿಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
