ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನ ಅನಾವರಣ ಮಾಡಿ, ಜನರನ್ನು ಉದ್ಧೇಶಿಸಿ ಮಾತನಾಡಿದ್ದರು. ಈ ವೇಳೆ ಕರ್ನಾಟಕ ಡಬಲ್​ ಇಂಜಿನ್​ ಶಕ್ತಿಯಲ್ಲಿ ನಡೆಯುತ್ತಿದೆ. ಇಡೀ ದೇಶ ಕರೊನಾ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿದ್ದ ಕಾಲದಲ್ಲೂ ಕರ್ನಾಟಕಕ್ಕೆ 4 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ವಿದೇಶಿ ಬಂಡಾವಾಳ ಹೂಡಿಕೆಯಲ್ಲಿ ರಾಜ್ಯ ಮುಂದಿದೆ. ಬಯೋಟೆಕ್ನಾಲಜಿಯಲ್ಲಿ ಕರ್ನಾಟಕದ ಪಾಲು ಶೇ.20ರಷ್ಟಿದೆ ಎಂದು ಕೊಂಡಾಡಿದರು.
ಮೋದಿ ಡಬಲ್ ಎಂಜಿನ್ ಸರ್ಕಾರ ಎಂದು ಉಲ್ಲೇಖಿಸುತ್ತಿದ್ದಂತೆ, ಇತ್ತ ಕಾಂಗ್ರೆಸ್ ಟ್ರಬಲ್ ಎಂಜಿನ್ ಸರ್ಕಾರ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿದೆ. ಟ್ವೀಟ್ ಮೂಲಕ ಪ್ರಧಾನಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ಮೇಲೆ ಕೇಳಿ ಬಂದಿರುವ ಆರೋಪಗಳನ್ನೆಲ್ಲಾ ಪಟ್ಟಿ ಮಾಡಿ ಟ್ವೀಟ್ ಮಾಡಿದೆ. ಇದೀಗ ಕಾಂಗ್ರೆಸ್, ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯವನ್ನು ಕಮರ್ಷಿಯಲ್ ಹಬ್ ಮಾಡುವ ಬದಲು ಕಮ್ಯುನಲ್ ಹಬ್ ಮಾಡಿದೆ. ಇದರ ಬಗ್ಗೆ ನೀವು ಮಾತನಾಡುವಿರಾ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ವೈಫಲ್ಯ ಮರೆಮಾಚಲು ಹಿಜಾಬ್, ಹಲಾಲ್, ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ#TroubleEngineSarkaraಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ@narendramodiಅವರೇ,ಸಿಎಂ@BSBommaiಅವರು ಆಕ್ಷನ್‌ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ.ಅವರಿಗೆ ಬುದ್ದಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ?pic.twitter.com/qaxegtiJQH— Karnataka Congress (@INCKarnataka)November 11, 2022
ವೈಫಲ್ಯ ಮರೆಮಾಚಲು ಹಿಜಾಬ್, ಹಲಾಲ್, ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ#TroubleEngineSarkaraಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ@narendramodiಅವರೇ,ಸಿಎಂ@BSBommaiಅವರು ಆಕ್ಷನ್‌ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ.ಅವರಿಗೆ ಬುದ್ದಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ?pic.twitter.com/qaxegtiJQH
ರಾಜ್ಯದಲ್ಲಿ ಕೈಗಾರಿಕೆಗಳು ಮುಚ್ಚುತ್ತಿವೆ. ಆದರೆ ಬಿಜೆಪಿಯ ಪ್ರೊಪೆಗಂಡಾದಂತೆ ಕಾರ್ಖಾನೆಗಳು ಎಗ್ಗಿಲ್ಲದೆ ಕೆಲಸ ಮಾಡುತ್ತಿವೆ. ಈವರಗೆ ರಾಜ್ಯದಲ್ಲಿ 800ಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಗಿತಗೊಂಡಿವೆ. ಹಲವು ಉದ್ಯಮಗಳು ಇಂದು ಬೇರೆಡೆ ಸ್ಥಳಾಂತರಗೊಂಡಿವೆ. ಇಂತಹ ಸಮಸ್ಯೆಗಳ ವೈಫಲ್ಯವನ್ನು ಮರೆಮಾಚುವ ಸಲುವಾಗಿ, ಹಿಜಾಬ್, ಹಲಾಲ್, ಆಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಆಡಳಿತವಿದ್ದಾಗ ಕರ್ನಾಟಕ ಅಭಿವೃದ್ಧಿಯಲ್ಲಿ ನಂ.1 ಆಗಿತ್ತು. ಆದರೆ ಬಿಜೆಪಿ ಸರ್ಕಾರದ ಆಡಳಿತ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಈ ಬಗ್ಗೆ ಹಲವರು ಪ್ರಧಾನಿಗೆ ಪತ್ರ ಬರೆದರೂ ಉತ್ತರ ಮಾತ್ರ ಬಂದಿಲ್ಲ. ಬೆಲೆ ಏರಿಕೆ ಜನರ ಚಿಂತೆಗೆ ಕಾರಣವಾಗಿದ್ದು, ರೈತರು ಬಸವಳಿದಿದ್ದಾರೆ. ಬಡವರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆದರೆ ಟ್ರಬಲ್ ಎಂಜಿನ್ ಸರ್ಕಾರ ಮಾತ್ರ ವಿದ್ಯುತ್ ದರ, ಆಸ್ತಿ ತೆರಿಗೆ, ನೀರಿನ ಬಿಲ್‌ಗಳನ್ನು ಏರಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೈಗಾರಿಕೆಗಳು ಮುಚ್ಚುತ್ತಿವೆ ಆದರೆ ಬಿಜೆಪಿಯ ಪ್ರೊಪೆಗಂಡಾ ಕಾರ್ಖಾನೆ ಎಗ್ಗಿಲ್ಲದೆ ಕೆಲಸ ಮಾಡ್ತಿದೆ.ರಾಜ್ಯದಲ್ಲಿ 800ಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಗಿತಗೊಂಡಿವೆ, ಹಲವು ಉದ್ಯಮಗಳು ಸ್ಥಳಾಂತರವಾಗಿವೆ.ಕರ್ನಾಟಕವನ್ನು ಕಮರ್ಷಿಯಲ್ ಹಬ್ ಮಾಡುವ ಬದಲು ಕಮ್ಯುನಲ್ ಹಬ್ ಮಾಡಿದ#TroubleEngineSarkaraದ ಮಾತಾಡುವಿರಾ@narendramodiಅವರೇ?pic.twitter.com/jSLyRzscOO— Karnataka Congress (@INCKarnataka)November 11, 2022
ಕೈಗಾರಿಕೆಗಳು ಮುಚ್ಚುತ್ತಿವೆ ಆದರೆ ಬಿಜೆಪಿಯ ಪ್ರೊಪೆಗಂಡಾ ಕಾರ್ಖಾನೆ ಎಗ್ಗಿಲ್ಲದೆ ಕೆಲಸ ಮಾಡ್ತಿದೆ.ರಾಜ್ಯದಲ್ಲಿ 800ಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಗಿತಗೊಂಡಿವೆ, ಹಲವು ಉದ್ಯಮಗಳು ಸ್ಥಳಾಂತರವಾಗಿವೆ.ಕರ್ನಾಟಕವನ್ನು ಕಮರ್ಷಿಯಲ್ ಹಬ್ ಮಾಡುವ ಬದಲು ಕಮ್ಯುನಲ್ ಹಬ್ ಮಾಡಿದ#TroubleEngineSarkaraದ ಮಾತಾಡುವಿರಾ@narendramodiಅವರೇ?pic.twitter.com/jSLyRzscOO
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
