ಬೆಂಗಳೂರು:ಕರೊನಾ ಉಪಕರಣ ಹಾಗೂ ಪರಿಕರ ಖರೀದಿ ಅವ್ಯವಹಾರ ಕುರಿತು ನ್ಯಾಯಾಂಗ ತನಿಖೆಗೆ ಸರ್ಕಾರ ಜಪ್ಪಯ್ಯ ಎನ್ನದ ಕಾರಣ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿತು.
ನಿಯಮ 69ರಡಿ ಕರೊನಾ ನಿಯಂತ್ರಣದಲ್ಲಿ ಸರ್ಕಾರದ ವಿಫಲತೆ, ಪರಿಕರ ಖರೀದಿ ಅವ್ಯವಹಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು, ಹೈಕೋರ್ಟ್​ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದನ್ನು ಸಾರಾಸಗಟು ಅಲ್ಲಗಳೆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಏಳು ತಿಂಗಳಲ್ಲಿ 15 ಇಲಾಖೆಗಳಿಂದ ಒಟ್ಟು 4,200 ಕೋಟಿ ರೂ. ವೆಚ್ಚ ಮಾಡಲಾಗಿದೆ. ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ. ಕಾಂಗ್ರೆಸ್ ಆಪಾದನೆ ಆಧಾರ ರಹಿತ, ಸತ್ಯಕ್ಕೆ ದೂರ ಎಂದು ಪದೇಪದೆ ಹೇಳಿದರಲ್ಲದೆ, ನ್ಯಾಯಾಂಗ ತನಿಖೆ ಅಗತ್ಯವಿಲ್ಲ ಎಂದು ಎರಡೂವರೆ ತಾಸಿನ ಸುದೀರ್ಘ ಉತ್ತರ ನೀಡಿ ಸಮರ್ಥಿಸಿಕೊಂಡರು. ಬೇರೆ ರಾಜ್ಯಗಳಿಗಿಂತ ನಮ್ಮ ಖರೀದಿ ದರ ಕಡಿಮೆ ಇದೆ ಎಂದು ಅನೇಕ ಉದಾಹರಣೆಗಳನ್ನು ನೀಡಿದರು.
ಐಇಸಿ ಕರೊನಾ ಕೇರ್ ವಾರ್!: ನೆಲಮಂಗಲ ಸಮೀಪದ ಐಇಸಿ ಕೇಂದ್ರದಲ್ಲಿ ಕರೊನಾ ಕೇರ್ ಸೆಂಟರ್​ಗೆ ಸಂಬಂಧಿಸಿದಂತೆ ಹಾಸಿಗೆ ಒಂದಕ್ಕೆ 800 ರೂ. ಬಾಡಿಗೆ ನಿಗದಿ ಮಾಡಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ನಾವೆಲ್ಲ ಧ್ವನಿ ಎತ್ತಿದ ಮೇಲೆ ಸಿಎಂ ಬಾಡಿಗೆ ಪಡೆಯುವ ಪ್ರಕ್ರಿಯೆಗೆ ತಡೆವೊಡ್ಡಿದರು. ಇದರಿಂದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರಕ್ಕೆ ಬ್ರೇಕ್ ಬಿತ್ತು ಎಂದು ಪ್ರತಿಪಕ್ಷಗಳ ಸದಸ್ಯರು ಸಭೆಯ ಗಮನ ಸೆಳೆದರು. ಆಗ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ನಾವಿನ್ನೂ ಟೆಂಡರೇ ಕರೆದಿರಲಿಲ್ಲ. ದುಡ್ಡು ಕೊಟ್ಟಿರಲಿಲ್ಲ. ಕೊಟ್ಟದ್ದು 11.90 ಕೋಟಿ ರೂ. ಮಾತ್ರ. ಆದರೆ, 200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ದೊಡ್ಡ ಕೂಗು ಕೇಳಿಬಂತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಪಕ್ಷ ಸದಸ್ಯರು, ಮಾಧ್ಯಮ ಹಾಗೂ ನಾವು ಆ ವಿಷಯದ ಬಗ್ಗೆ ಧ್ವನಿ ಎತ್ತದೆ ಇದ್ದರೆ ದೊಡ್ಡ ಹಗರಣವೇ ನಡೆಯುತ್ತಿತ್ತು ಎಂದು ಕಿಚಾಯಿಸಿದರು.
ಸಿದ್ದರಾಮಯ್ಯ ಸವಾಲು
ಡಾ. ಕೆ. ಸುಧಾಕರ್ ಜವಾಬು
ವಲಸೆ ಕೋಲಾಹಲ
ಲಾಕ್​ಡೌನ್ ಆರಂಭದ ದಿನಗಳಲ್ಲಿ ವಲಸೆ ಕಾರ್ವಿುಕರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ವಿಚಾರವಾಗಿ ವಾಗ್ಯುದ್ಧಕ್ಕಿಳಿದರು. ಸಚಿವ ಸುಧಾಕರ್, ಸರ್ಕಾರ ವಿಶೇಷ ರೈಲು ಮತ್ತು ಬಸ್ ಮೂಲಕ ಕಾರ್ವಿುಕರನ್ನು ಕಳುಹಿಸುವ ವ್ಯವಸ್ಥೆ ಮಾಡಿತು ಎಂಬ ಹೇಳಿಕೆಗೆ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 6 =
Remember me
