ಬೆಂಗಳೂರು:ಯುಗಾದಿ ಹಬ್ಬಕ್ಕೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಕಾಂಗ್ರೆಸ್​ ಪಾಳಯದಲ್ಲಿ ಚುನಾವಣಾ ಚಟುವಟಿಕೆ ಗರಿಗೆದರಿದೆ. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎಂಬ ವಿಚಾರ ಇದೀಗ ಚರ್ಚೆಯಾಗುತ್ತಿದೆ.
ಕೋಲಾರ ಕ್ಷೇತ್ರ ಬೇಡ ವರುಣಾದಲ್ಲಿ ನಿಲ್ಲಿ ಅಂತ ಕಾಂಗ್ರೆಸ್ ಹೈಕಮಾಂಡ್​ ಸಿದ್ದರಾಮಯ್ಯ ಅವರಿಗೆ ಹೇಳಿದೆ. ಅಸಲಿಗೆ ಸಿದ್ದರಾಮಯ್ಯ ಎರಡು ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ಕೋಲಾರ ಹಾಗೂ ವರುಣಾ ಎರಡರಲ್ಲೂ ನಿಲ್ಲುವ ಪ್ಲಾನ್ ಅನ್ನು ಸಿದ್ದರಾಮಯ್ಯ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಯೂಕ್ರೇನ್​-ರಷ್ಯಾ ಯುದ್ಧ: ವ್ಲಾಡಿಮಿರ್​ ಪುತಿನ್​ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದ ಐಸಿಸಿ
ಮಗನ ಹಾಗೂ ತಮ್ಮ‌ ರಾಜಕೀಯ ಭವಿಷ್ಯದ ಹಿನ್ನಲೆ ಎರಡೂ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿದ್ದರು. ಎರಡರಲ್ಲೂ ಗೆದ್ದರೆ ವರುಣಾ ಕ್ಷೇತ್ರವನ್ನು ಯತೀಂದ್ರಗೆ ಬಿಟ್ಟುಕೊಡಲು ಪ್ಲಾನ್ ಮಾಡಿದ್ದರು. ಆದರೆ ಎರಡೂ ಕ್ಷೇತ್ರ ಆಯ್ಕೆಗೆ ಕಾಂಗ್ರೆಸ್​ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಹೈಕಮಾಂಡ್ ಸಲಹೆ ಮೇರೆಗೆ ವರುಣಾದಲ್ಲಿ ಸ್ಪರ್ಧೆ ಮಾಡಿದರೆ ಮಗನ ಭವಿಷ್ಯದ ಆತಂಕ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ ಎಂದು ಹೇಳಲಾಗಿದೆ.(ದಿಗ್ವಿಜಯ ನ್ಯೂಸ್​)
4 ವರ್ಷಗಳ ಬಳಿಕ ಬೆಂಗಳೂರಿನಲ್ಲಿ IPL ಪಂದ್ಯಗಳು: ಟಿಕೆಟ್​ ಖರೀದಿ ಜೋರು, RCB ಅಭಿಮಾನಿಗಳ​ ಆಕ್ರೋಶ

ಮದ್ಯದ ಬಾಟಲಿ ಮೇಲೆ 10 ರೂ. ಹಸುವಿನ ಸೆಸ್​! ಈ ರಾಜ್ಯದ ಎಣ್ಣೆ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆ

ಯೂಕ್ರೇನ್​-ರಷ್ಯಾ ಯುದ್ಧ: ವ್ಲಾಡಿಮಿರ್​ ಪುತಿನ್​ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದ ಐಸಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
