ಬೆಂಗಳೂರು:ಜೆಡಿಎಸ್​ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಎಂದು ಟೀಕಿಸುತ್ತಿದ್ದ ಬಿಜೆಪಿ, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ ಎಂದು ರಾಜ್ಯ ಕಾಂಗ್ರೆಸ್​ ಲೇವಡಿಯಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ರಾಜ್ಯ ಕಾಂಗ್ರೆಸ್​ ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ ಜಾತ್ಯಾತೀತತೆಯನ್ನು ವಿಸರ್ಜಿಸಲು ಹೊರಟಿದ್ದಾರೆ ಎಂದು ಟೀಕಿಸಿದೆ.
ಬಿಜೆಪಿ ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ..!ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ.ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ?!
ಇದನ್ನೂ ಓದಿ:ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಡಬೇಕೆನ್ನುವುದು ಜನರ ಬಯಕೆ: ಬಸವರಾಜ ಬೊಮ್ಮಾಯಿ
ಜನತಾದಳ ಎಂಬ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು. ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ ಜಾತ್ಯಾತೀತತೆಯನ್ನು ವಿಸರ್ಜಿಸಲು ಹೊರಟಿದ್ದಾರೆ. ಇತ್ತ ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಟೀಕಿಸುತ್ತಿತ್ತು, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ.
ಬಿಜೆಪಿ ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ. ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ ಎಂದು ರಾಜ್ಯ ಕಾಂಗ್ರೆಸ್​ ಘಟಕೆ ಬಿಜೆಪಿ-ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
