ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್(Nalin Kumar Kateel)ಅವರು ರಾಜೀನಾಮೆ(Resignation)ಕೊಟ್ಟಿದ್ದಾರೆ ಎಂಬ ವದಂತಿ ಹಬ್ಬುತ್ತಿದ್ದಂತೆ ಇದೀಗ ರಾಜ್ಯ ಕಾಂಗ್ರೆಸ್(State Congress)ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿ ನಾಯಕ ಮತ್ತು ಬಿಜೆಪಿ ಕುರಿತು ಟ್ವೀಟ್ ಮುಖೇನ ಲೇವಡಿ ಮಾಡಿದೆ.
ಇದನ್ನೂ ಓದಿ:ಪರರ ಪ್ರಾಣ ತೆಗೆಯಲು ಯೋಜನೆ ರೂಪಿಸಿ, ತನ್ನ ಪ್ರಾಣವನ್ನೇ ಕಳೆದುಕೊಂಡ..
ಈ ಬಗ್ಗೆ ಟ್ವೀಟ್(Tweet)ಮಾಡಿರುವ ಕಾಂಗ್ರೆಸ್, “ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಉಲ್ಟಾ ಹೊಡೆದಿದ್ದಾರಂತೆ. ನಾವು ಸರ್ಕಾರ ರಚಿಸಿದ್ದೂ ಆಯ್ತು, ನಮ್ಮ 5 ಗ್ಯಾರಂಟಿಗಳಲ್ಲಿ 2 ಗ್ಯಾರಂಟಿ ಜಾರಿ ಮಾಡಿದ್ದೂ ಆಯ್ತು. ಆದ್ರೆ, ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಅಧ್ಯಕ್ಷ ಹುದ್ದೆಯ ಗ್ಯಾರಂಟಿ ಇಲ್ಲ” ಎಂದು ಟ್ವೀಟ್ ಮಾಡಿದೆ.
“ಬಿಜೆಪಿ ಅವರಿಗೆ ವಿರೋಧ ಪಕ್ಷದ ನಾಯಕ ಸಿಗುವ ಗ್ಯಾರಂಟಿಯೂ ಇಲ್ಲ. ಹೀಗಿರುವಾಗ ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಅಲ್ಲವೇ ಬಿಜೆಪಿ?” ಎಂದು ಪ್ರಶಾರ್ಥಕ ಚಿಹ್ನೆ ಬಳಸುವ ಮೂಲಕ ಟ್ವೀಟ್ ಮಾಡಿ ಲೇವಡಿ ಮಾಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
