ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್(Congress)ಘೋಷಿಸಿದ 5 ಗ್ಯಾರಂಟಿಗಳನ್ನು(5 Guarantees)ಶೀಘ್ರವೇ ಜಾರಿಗೊಳಿಸಬೇಕು ಎಂದು ಈ ಹಿಂದೆ ಬಿಜೆಪಿ(BJP)ನೀಡಿದ್ದ ಹೇಳಿಕೆಗಳಿಗೆ ಇದೀಗ ರಾಜ್ಯ ಕಾಂಗ್ರೆಸ್ ಟ್ವೀಟ್ ಮುಖೇನ ತಿರುಗೇಟು ನೀಡಿದೆ.
ಇದನ್ನೂ ಓದಿ :ರೈಲು ಅಪಘಾತ | ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಒಡಿಶಾಗೆ ಸಂತೋಷ್ ಲಾಡ್
“ಉದ್ಯೋಗ ಖಾತ್ರಿ ಕೊಟ್ಟಾಗ ದೇಶ ದಿವಳಿಯಾಗುತ್ತದೆ ಎಂದಿದ್ದರು. ಅನ್ನಭಾಗ್ಯ ಕೊಟ್ಟಾಗ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ! ಜನರಿಗೆ ನೀಡುವ ಹಣ, ಭೂಮಿಗೆ ಬಿತ್ತುವ ಬೀಜ ವ್ಯರ್ಥವಾಗುವುದಿಲ್ಲ, ಬೆಳೆದು ಮರವಾಗಿ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ” ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ :ಮಾವುಗಳಲ್ಲೇ ಸಿಕ್ಕಾಪಟ್ಟೆ ದುಬಾರಿ ಈ ‘ಮಿಯಾಝಾಕಿ’ ಮಾವು; ಕೆಜಿಗೆ ಬೆಲೆ ಎಷ್ಟಿದೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!
“ಬದಲಾಗುವ ಬಿಜೆಪಿ ವರಸೆಗಳು, ಗ್ಯಾರಂಟಿ ಘೋಷಣೆ ಮಾಡಿದಾಗ, ಹಣ ಹೇಗೆ ಹೊಂದಿಸುತ್ತಾರೆ, ಜಾರಿ ಸಾಧ್ಯವಿಲ್ಲ, ಆರ್ಥಿಕತೆಯ ವಿರೋಧಿ. ಗ್ಯಾರಂಟಿ ಜಾರಿಯಾದಾಗ, ಕಂಡೀಷನ್ ಹಾಕ್ತಿದಾರೆ, ಎಲ್ಲರಿಗೂ ಕಳ್ಳೆಪುರಿ ಹಂಚಿದ ಹಾಗೆ ಹಂಚಬೇಕು! ಯಾವ ನಿಲುವು ತಾಳಬೇಕು, ಹೇಗೆ ವಿರೋಧಿಸಬೇಕು ಎಂದು ಗೊಂದಲದಲ್ಲಿದೆ ಬಿಜೆಪಿ. ಕನಿಷ್ಠ ಸ್ಪಷ್ಟವಾಗಿ ವಿರೋಧಿಸಲಾದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ ಬಿಜೆಪಿಗರೇ” ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್(Tweet)ಮೂಲಕ ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕಿದೆ.
ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ ಮಾಡಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 10 =
Remember me
