ಬೆಂಗಳೂರು:ಬಿಟ್​ ಕಾಯಿನ್ ಹಗರಣ (Bit Coin Scam) ಕುರಿತು ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್ ವಿರುದ್ಧ ಟ್ವೀಟ್ (Tweet) ಸಮರ ಆರಂಭವಾಗಿದ್ದು, ನಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ ಎಂದು ಕಾಂಗ್ರೆಸ್ (Congress) ಟ್ವೀಟ್​​ ಮಾಡಿದೆ.
ಇದನ್ನೂ ಓದಿ:ಗಂಡನ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ ಗಿಟ್ಟಿಸಿ ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ದ ಮಹಿಳಾಧಿಕಾರಿಯ ಹಳೇ ಹೇಳಿಕೆ ವೈರಲ್​!
“ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ ಬಿಜೆಪಿ ಸರ್ಕಾರ ಪ್ರಕರಣ ಮುಚ್ಚಿಹಾಕಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು. ಹಗರಣವನ್ನು ಮುಚ್ಚಿಹಾಕಲು ಯಶಸ್ವಿಯೂ ಆಗಿತ್ತು, ಈಗ ನಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ. ಅಂದಹಾಗೆನಳೀನ್ ಕುಮಾರ್ ಕಟೀಲ್ (Nalin Kumar Kateel) ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ, ಏಕೆ ಬಿಜೆಪಿ?” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ಪ್ರಚಾರಕ್ಕಾಗಿ ಕೆಜಿಎಫ್​ ಹಾಡು ಬಳಕೆ: ಪ್ರಕರಣ ರದ್ದತಿಗೆ ಹೈಕೋರ್ಟ್​ ನಕಾರ, ರಾಹುಲ್ ಗಾಂಧಿಗೆ ಮತ್ತಷ್ಟು ಸಂಕಷ್ಟ
ಮತ್ತೊಂದು ಟ್ವೀಟ್​​ನಲ್ಲಿ, “ತೊಗರಿ, ಟೊಮೊಟೊ ಮುಂತಾದವುಗಳ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ. ಹಿಂದೆ ತಾವು ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ?, ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ ಪ್ರತಿಭಟನೆ ಯಾವಾಗ?” ಎಂದು ಟ್ವೀಟ್ ಮೂಲಕ ಬಿಜೆಪಿಯನ್ನು ಟೀಕಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fourteen =
Remember me
