ಬೆಂಗಳೂರು:ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಘೋಷಣೆ ಬೆನ್ನಲ್ಲೇ, ಕಾಂಗ್ರೆಸ್ ಸಕ್ರಿಯವಾಗಿದೆ. ಈ ಮೂರು ಪಾಲಿಕೆ ‘ಕೈ’ವಶ ಮಾಡಿಕೊಳ್ಳುವ ಹೊಣೆಯನ್ನು ಪಕ್ಷವು ಹಿರಿಯ ನಾಯಕರ ಹೆಗಲಿಗೆ ಹೊರಿಸಿದೆ.
ಪಾಲಿಕೆಗಳ ಎಲ್ಲಾ ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ನಿರ್ಧರಿಸಿದ್ದು, ಅಭ್ಯರ್ಥಿ ಆಯ್ಕೆ, ಚುನಾವಣಾ ಪೂರ್ವ ಸಿದ್ಧತೆಗಾಗಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಶಿವಾನಂದ ಪಾಟೀಲ್, ತನ್ವೀರ್ ಸೇಠ್ ಸದಸ್ಯರಾಗಿರುವ ಸಮಿತಿ ರಚಿಸಲಾಗಿದೆ. ಕಲಬುರಗಿಗೆ ಎಸ್.ಆರ್.ಪಾಟೀಲ್ ಅಧ್ಯಕ್ಷತೆಯ ಜಿ.ಸಿ.ಚಂದ್ರಶೇಖರ್, ಯು.ಟಿ.ಖಾದರ್ ಸದ್ಯರಾಗಿರುವ ಸಮಿತಿ ಮತ್ತು ಬೆಳಗಾವಿಗೆ ಎಂ.ಬಿ.ಪಾಟೀಲ್ ಅಧ್ಯಕ್ಷತೆಯ ಎಲ್.ಹನುಮಂತಪ್ಪ, ನಾಸೀರ್ ಅಹ್ಮದ್ ಸದಸ್ಯರಾಗಿರುವ ಸಮಿತಿ ಕಾರ್ಯನಿರ್ವಹಿಸಲಿದೆ.
ಅದೇ ರೀತಿ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಧ್ರುವನಾರಾಯಣ್ ಅವರು ಒಂದೊಂದು ಪಾಲಿಕೆ ಸಂಯೋಜಕರಾಗಿರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಹುಲ್​ ಗಾಂಧಿ ಇನ್​ಸ್ಟಾಗ್ರಾಂ ವಿಡಿಯೋ: ಫೇಸ್​​ಬುಕ್​ ಅಧಿಕಾರಿಗಳಿಗೆ ಮಕ್ಕಳ ಆಯೋಗದ ಬುಲಾವ್!
ಧ್ವಜಾರೋಹಣಕ್ಕೆ ವಿರೋಧ! ನಿವಾಸಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
