ಶಿವಮೊಗ್ಗ:ಹಿಜಾಬ್ ಪರವಾಗಿ ಪಿಎಫ್​ಐ, ಎಸ್​ಡಿಪಿಐ ಪ್ರೇರಿತ ಪ್ರತಿಭಟನೆಗಳಾದರೆ ಕಾಂಗ್ರೆಸ್​ನವರು ಮಾತನಾಡುವುದೇ ಇಲ್ಲ. ಸಮಾಜವನ್ನು ವಿಭಜನೆ ಗೊಳಿಸುವ ಶಕ್ತಿಗಳಿಗೆ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ನಗರದಲ್ಲಿ ಮಂಗಳವಾರ ಶಿವಮೊಗ್ಗ ವಿಭಾಗ ಮಟ್ಟದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಚ್ಚಿದರೆ ಅದನ್ನು ಖಂಡಿಸುವ ಶಕ್ತಿಯೂ ಆ ಪಕ್ಷದ ನಾಯಕರಿಗಿಲ್ಲ. ಇನ್ನು ರಾಜ್ಯ ಹಾಗೂ ದೇಶ ಉಳಿಸುವ ಶಕ್ತಿ ಆ ಪಕ್ಷದ ನಾಯಕರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್​ನವರು ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಕಾಂಗ್ರೆಸ್​ನವರು ಸತ್ಯ ಹರಿಶ್ಚಂದ್ರನ ವಂಶದವರೇ? ಎಂದ ಸಿಎಂ, ಭ್ರಷ್ಟಾಚಾರವನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್. ದಿಂಬು, ಹಾಸಿಗೆ ಎಲ್ಲದರಲ್ಲೂ ಅವರು ಭಷ್ಟಾಚಾರ ಎಸಗಿದ್ದಾರೆ. ಐದು ವರ್ಷಗಳ ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಗೆ ಬಂದ ಭಾಗ್ಯಗಳೆಲ್ಲವೂ ಜನರ ಪಾಲಿಗೆ ದೌಭಾರ್ಗಗಳಾದವು. ಮುಂದಿನ ಚುನಾವಣೆ ವೇಳೆ ಜನರ ಎದುರು ಕಾಂಗ್ರೆಸ್​ನವರು ಬಂದಾಗ ಎಲ್ಲವನ್ನೂ ಬಹಿರಂಗಗೊಳಿಸುತ್ತೇವೆ ಎಂದು ಸವಾಲೆಸೆದರು. ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ನಿರ್ಮಲ್​ಕುಮಾರ್ ಸುರಾನಾ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರಿಗೆ ನಿಗಮ-ಮಂಡಳಿ ಬೇಡ:ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಉತ್ತರಪ್ರದೇಶ, ಗುಜರಾತ್ ಮಾದರಿಯನ್ನು ಇಲ್ಲಿ ಅಳವಡಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು. ಇದಕ್ಕೆ ತಮ್ಮ ಭಾಷಣದ ವೇಳೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸವದಿ ಅಭಿಪ್ರಾಯ ಕ್ರಾಂತಿಕಾರಿಯಾಗಿದೆ. ಉನ್ನತ ಮಟ್ಟದಲ್ಲಿ ಈ ಬಗ್ಗೆ ಸಮಾಲೋಚಿಸಿ ತೀರ್ವನಿಸೋಣ ಎಂದರು.
ಬೆಂಗಳೂರು:ಸಂಪುಟ ವಿಸ್ತರಣೆ, ಪುನಾರಚನೆ ವಿಚಾರವಾಗಿ ವರಿಷ್ಠರು ಹೇಳಿದಾಗ ನವದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆರ್.ಟಿ.ನಗರ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಅವರು, ವರಿಷ್ಠರು ಯಾವಾಗ ಬನ್ನಿ ಎಂದು ಹೇಳುತ್ತಾರೋ ಆಗ ದೆಹಲಿಗೆ ಹೋಗುತ್ತೇನೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವರಿಷ್ಠರಿಗೆ ಬಿಟ್ಟದ್ದು. ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರದ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದರು. ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಮಾಡುತ್ತೇನೆ. ಮಂಗಳವಾರ ಚಿಕ್ಕಮಗಳೂರು, ಶಿವಮೊಗ್ಗ, ಬುಧವಾರ ಕಲಬುರಗಿ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.
ನಾನು ಅಸಮರ್ಥನಲ್ಲ:ಕೆಲವರು ನಾನು ಅಸಮರ್ಥ ಗೃಹ ಸಚಿವ ಎನ್ನುತ್ತಿದ್ದಾರೆ. ಡಾ.ರಾಜ್​ಕುಮಾರ್ ನಿಧನರಾದಾಗ ಅವರ ಕುಟುಂಬದವರಿಗೂ ಸರಿಯಾಗಿ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಪುನೀತ್ ರಾಜ್​ಕುಮಾರ್ ನಿಧನರಾದಾಗ 25 ಲಕ್ಷ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ನಾವು ವ್ಯವಸ್ಥೆ ಮಾಡಿದೆವು. ನಮ್ಮದು ಅಸಮರ್ಥ ಸರ್ಕಾರವಾಗಿದ್ದರೆ, ನಾನು ಅಸಮರ್ಥ ಗೃಹ ಸಚಿವನಾಗಿದ್ದರೆ ಇದು ಸಾಧ್ಯವಾಗುತ್ತಿತ್ತೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೇ ಗೃಹ ಮಂತ್ರಿಯಂತೆ ಕಾರ್ಯನಿರ್ವಹಿಸಿದ್ದರು. ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸಗೊಳಿಸಿದರೆ ಮಾತನಾಡುವ ಕಾಂಗ್ರೆಸ್ ನಾಯಕರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದವರ ಬಗ್ಗೆ ತುಟಿ ಬಿಚ್ಚುವುದಿಲ್ಲ ಎಂದರು.
ಚಲಿಸುತ್ತಿದ್ದ ಬೈಕ್​ ಮೇಲೇ ಬಿದ್ದ ಮರ, ಸವಾರ ಸ್ಥಳದಲ್ಲೇ ಸಾವು; ಬೈಕ್​ಗಳು ಜಖಂ, ಕಾರು ಭಾರಿ ಅಪಾಯದಿಂದ ಪಾರು!

ಇಪ್ಪತ್ತರ ಯುವತಿಯ ಹುಡುಕಾಟದಲ್ಲಿ ‘ರಾಮಾ ರಾಮಾ ರೇ’ ಸತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + three =
Remember me
