ಬೆಂಗಳೂರು:ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಗತ್ಯ ಪೂರ್ವಭಾವಿ ಸಿದ್ಧತೆ ನಡೆಸಲು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಸಭೆ ನಡೆಸಲು ನಿರ್ಧರಿಸಿದ್ದು, ಕಡ್ಡಾಯ ಹಾಜರಿರುವಂತೆ ಹಿರಿಯ ಮುಖಂಡರಿಗೆ ತಾಕೀತು ಮಾಡಿದೆ. ಜತೆಗೆ ಆದ್ಯತೆ ಕೊಡಬೇಕಾದ ವಿಚಾರಗಳ ಬಗ್ಗೆ ಸೂಚನೆಗಳನ್ನು ನೀಡಿದೆ.
ಮುಂಬರುವ ವಿಧಾಸನಸಭೆ ಹಾಗೂ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ, ಹೋರಾಟ ನಡೆಸುವ ಉದ್ದೇಶದಲ್ಲಿ ಜೂನ್ 11ರಿಂದ 14ರ ನಡುವೆ ಜಿಲ್ಲಾ ಮಟ್ಟದ ಸಭೆ ನಡೆಸುವಂತೆ ಕೆಪಿಸಿಸಿ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಿದೆ.
ಇದರ ಜತೆಗೆ ಯುವಕರು ಮತ್ತು ಮಹಿಳೆಯರ ಕುರಿತು ಮಾಹಿತಿ ಸಂಗ್ರಹಿಸಲು ತಂಡ ರೂಪಿಸಲು ಸಂದೇಶ ಕಳಿಸಲಾಗಿದೆ. ಮಹಿಳಾ ಸಬಲೀಕರಣದ ಅಂಗವಾಗಿ ‘ನಾ ನಾಯಕಿ’ ಕಾರ್ಯಕ್ರಮ ಆಯೋಜನೆ ಮಾಡಲು ರಾಜ್ಯ ಕಾಂಗ್ರೆಸ್ ಘಟಕ ಬಯಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮಹಿಳಾ ನಾಯಕರೇ ಪ್ರತಿನಿಧಿಸುವ ಸಮಾವೇಶ ನಡೆಸಲು ಯೋಜನೆ ಸಿದ್ಧವಾಗಿದ್ದು, ಇದರ ದಿನಾಂಕ ಕೂಡ ಜಿಲ್ಲಾ ಮಟ್ಟದ ಸಭೆಯಲ್ಲಿ ತೀರ್ವನವಾಗಲಿದೆ.
ಹಾಗೆಯೇ, ಕಳೆದ 20 ವರ್ಷಗಳಿಂದ ಸಕ್ರಿಯವಾಗಿರುವ ಸ್ತ್ರೀ ಶಕ್ತಿ ಸಂಘಗಳು, ಮಹಿಳಾ ವಕೀಲರು, ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ಮತ್ತು ಸ್ವಸಹಾಯ ಸಂಘದ ಮಹಿಳಾ ನಿರ್ದೇಶಕರ ಪಟ್ಟಿ ತಯಾರಿಸುವಂತೆ ಕೆಪಿಸಿಸಿ ತನ್ನ ಅಧೀನ ಘಟಕಗಳಿಗೆ ಸೂಚನೆ ಕಳಿಸಿದೆ.
ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವ ನಿರುದ್ಯೋಗಿಗಳ ಪಟ್ಟಿಯನ್ನು ಅಂಕಿ ಅಂಶಗಳದೊಂದಿಗೆ ತಯಾರಿಸಿ ಸಲ್ಲಿಸಬೇಕು, ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಿರುದ್ಯೋಗಿ ಯುವಕರ ಸರ್ವೆ ಮಾಡಲು ಯುವಕರ ತಂಡಕ್ಕೆ ಜವಾಬ್ದಾರಿ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲಾ ಘಟಕಗಳಿಗೆ ತಿಳಿಸಿದ್ದಾರೆ.
ಅಂದಹಾಗೆ ಜಿಲ್ಲಾ ಮಟ್ಟದ ಚುನಾವಣೆ ಹಾಗೂ ಸಂಘಟನಾ ತಯಾರಿ ಸಭೆಯಲ್ಲಿ ಯಾರೆಲ್ಲ ಹಾಜರಿರಬೇಕು ಹಾಗೂ ಏನೆಲ್ಲ ವಿಚಾರ ಚರ್ಚೆ ನಡೆಸಬೇಕೆಂದೂ ಸಹ ಕೆಪಿಸಿಸಿ ಸ್ಪಷ್ಟಮಾಡಿದೆ. ಮುಂಬರುವ ಚುನಾವಣೆಗಳಿಗೆ ಎಲ್ಲ ಹಂತದ ಚುನಾವಣೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬೇಕೆಂದು ತಿಳಿಸಿದೆ. ಅಂದರೆ, ಎಐಸಿಸಿ ನಿರ್ದೇಶನದಂತೆ ತಳ ಮಟ್ಟದಲ್ಲೂ 50 ವರ್ಷದೊಳಗಿನವರಿಗೆ ಶೇ.50 ಪ್ರಾಧಾನ್ಯತೆ ಕೊಡಬೇಕು, ಹಿರಿಯರು ಸ್ವಯಂ ಪ್ರೇರಿತವಾಗಿ ಹಿಂದೆ ಸರಿಯಬೇಕೆಂಬ ವಿಚಾರ ಕೂಡ ಜಿಲ್ಲಾ ಮಟ್ಟದ ನಾಯಕರಿಗೆ ತಿಳಿಸಿ ಅನುಷ್ಠಾನಕ್ಕೆ ಸೂಚನೆ ಕೊಡಲಾಗುತ್ತದೆ.
ಇನ್ನೊಂದು ತೀರ್ವನವಾಗಿ ಬೂತ್, ಪಂಚಾಯತ್, ವಾರ್ಡ್, ಬ್ಲಾಕ್, ಜಿಲ್ಲಾ ಸಮಿತಿ ಪೂರ್ಣ ರಚನೆ ಮಾಡುವ ಕುರಿತು ಹಾಗೂ ಸರ್ಕಾರದ ವಿರುದ್ಧ ಜಿಲ್ಲಾ ವ್ಯಾಪ್ತಿಯಲ್ಲಿ ಹೋರಾಟ ಮಾಡುವ ಬಗ್ಗೆ ಈ ಸಭೆಗಳಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಈ ಸಭೆಗಳಲ್ಲಿ ಶೇ.30ರಿಂದ 40ಮತ್ತು 50 ವಯಸ್ಸಿಗಿಂತ ಕಡಿಮೆ ಇರುವವರು ಇರಬೇಕೆಂಬ ಬಯಸಲಾಗಿದ್ದು, ಹಾಗೆಯೇ, ಪಕ್ಷದ ಮಾಜಿ ಸಂಸದರು, ಶಾಸಕರು, ಈ ಹಿಂದೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಜಿಲ್ಲೆಯ ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷರು, ಕೆಪಿಸಿಸ ಉಸ್ತುವಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಇರಲೇ ಬೇಕೆಂದು ಸೂಚನೆ ನೀಡಲಾಗಿದೆ.
ರಾಜಸ್ತಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ಚರ್ಚೆಯಾದ ವಿಚಾರ, ಕೈಗೊಂಡ ನಿರ್ಣಯ ಅನುಷ್ಠಾನ ಸಂಬಂಧ ರಾಜ್ಯ ಮಟ್ಟದ ಸಭೆ ಇತ್ತೀಚೆಗಷ್ಟೇ ಮುಕ್ತಾಯವಾಗಿತ್ತು. ಇದೇ ರೀತಿ ಸಮಾವೇಶವನ್ನು ಜಿಲ್ಲಾ ಮಟ್ಟದಲ್ಲೂ ನಡೆಸಬೇಕು, ಎಐಸಿಸಿ ನಿರ್ಣಯವನ್ನು ಜಿಲ್ಲಾ ಮಟ್ಟದ ನಾಯಕರಿಗೂ ತಿಳಿಸಿ ಅನುಷ್ಠಾನ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ.
ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + thirteen =
Remember me
