ಚಿಕ್ಕಮಗಳೂರು:ದೇವಸ್ಥಾನದ ಹುಂಡಿ ಹಣಕ್ಕೆ ಕೈ ಹಾಕಿರುವ ಕಾಂಗ್ರೆಸ್​ನವರು ಮೋಸ್ಟ್ ಕಮ್ಯುನಲ್‌ & ಕ್ರಿಮಿನಲ್ ಪಕ್ಷ ಎಂದು ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಬಿಜೆಪಿ ಲೋಕಸಭೆ ಕಚೇರಿ ಉದ್ಘಾಟಿಸಿ ಮಾತನಾಡಿದ ಸಿ.ಟಿ. ರವಿ ಕಾಂಗ್ರೆಸ್ ಪಕ್ಷದವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯ ಮಾತ್ರವಲ್ಲದೆ, ಮಸೀದಿ, ಚರ್ಚ್​ ಹುಂಡಿಗೂ ಕೈಹಾಕುತ್ತಿದ್ದರು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್​ ಪಕ್ಷದವರು ನಿಜವಾಗಲೂ ಜಾತ್ಯತೀತರಾ ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ. ತಮ್ಮ ಹೆಸರಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಅನ್ನೋದು ನಿಜವಾದರೆ ಭಕ್ತರ ಹುಂಡಿಗೆ ಕೈ ಹಾಕುತ್ತಿರಲಿಲ್ಲ. ಜಾತ್ಯತೀತರೇ ಆಗಿದ್ದರೆ ಮಸೀದಿ, ಚರ್ಚ್ ಎಲ್ಲದರಲ್ಲೂ 10% ಎಂದು ಹೇಳುತ್ತಿದ್ದರು. ಮಸೀದಿ-ಚರ್ಚ್ ಬಿಟ್ಟು ಕೇವಲ ಮಂದಿರದ ಹಣಕ್ಕೆ ಮಾತ್ರ ಕೈ ಹಾಕಿದ್ದಾರೆ. ಇವರು ಕಮ್ಯುನಲ್‌ ಮತ್ತು ಕ್ರಿಮಿನಲ್‌ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:‘ಕನ್ನಡ್’​ ಎಂದವನಿಗೆ ಫುಲ್ ಕ್ಲಾಸ್​ ತೆಗೆದುಕೊಂಡ ಕೆ.ಎಲ್. ರಾಹುಲ್​; ನೋಡ ನೋಡ ಎಷ್ಟು ಚೆಂದ ಎಂದ ಫ್ಯಾನ್ಸ್
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತ ಚೆನ್ನಾಗಿ ಗೊತ್ತಿದೆ. ಸೋಲೋದಕ್ಕೆ ಏಕೆ ಚುನಾವಣೆಗೆ ನಿಲ್ಲುತ್ತಾರೆ. ಮೊದಲು ಮಕ್ಕಳು-ಮಂತ್ರಿಗಳನ್ನ ನಿಲ್ಲಿಸಲು ಯೋಚನೆ ಮಾಡುತ್ತಿದ್ದರು. ಈಗ ಮಕ್ಕಳು-ಮಂತ್ರಿಗಳು ಹಿಂದೇಟು ಹಾಕುತ್ತಿದ್ದಾರೆ. ನಾವು ರಾಜ್ಯ ಬಿಟ್ಟು ಹೋಗಲ್ಲ ಅಂತಿದ್ದಾರೆ. ಅವರಿಗೆ ಸೋಲುತ್ತೇವೆ ಎಂದು ಗೊತ್ತಾಗಿದೆ.
ರಾಜ್ಯದಲ್ಲಿ ಬರ ಇದೆ, ಬರದಿಂದ ಜನ ಕಂಗಾಲಾಗಿದ್ದಾರೆ, ಕುಡಿಯಲು ನೀರಿಲ್ಲ. ಅವನು ಸಿಎಂ, ಇವನು ಸಿಎಂ ಎಂದು ಹೇಳುವುದನ್ನು ಬಿಟ್ಟು ಜನರಿಗೆ ಕುಡಿಯಲು ನೀರು ಕೊಡಿ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ, ಮೊದಲು ಅದನ್ನ ತಡೆಯಿರಿ. ದನಕರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ. ಮೊದಲು ಆ ಕೆಲಸ ಮಾಡಿ ಎಂದು ಮಾಜಿ ಶಾಸಕ ಸಿ.ಟಿ. ರವಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
