ಬೆಂಗಳೂರು:ಚುನಾವಣಾ ಕಣ ಇನ್ನಷ್ಟು ರಂಗೇರುತ್ತಿದ್ದು ಆಮ್​ ಆದ್ಮಿ ಪಕ್ಷ ಇಂದು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡಗಡೆ ಮಾಡಿದ್ದಾರೆ. ಅದಲ್ಲದೇ ಇಂದೇ ಅಭ್ಯರ್ಥಿಗಳ  ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದೆ.
ಇಂದು ಸಂಜೆ ದೆಹಲಿಯಲ್ಲಿ ಸಿಇಸಿ ಸಬ್ ಕಮಿಟಿ ಮೀಟಿಂಗ್ ನಡೆಸಲಿದ್ದು ಈ ಸಂದರ್ಭ ಕಾಂಗ್ರೆಸ್​ನ ‌ಮೂರನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಲಾಗುವುದು ಎನ್ನಲಾಗಿದೆ.
ಈ ಬಾರಿ ಕಾಂಗ್ರೆಸ್​ ಹೈಕಮಾಂಡ್ ಸಿಇಸಿ ಬಿಟ್ಟು ಸಬ್‌ ಕಮಿಟಿ ಮಾಡಿದೆ. ಸಿಇಸಿಯಲ್ಲಿ ಸದಸ್ಯರು ಹೆಚ್ಚಾದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ರಾಜ್ಯದ ಇಬ್ಬರು ನಾಯಕರಿಗೆ ಮಾತ್ರ ಸಬ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.
ಸಿಇಸಿ ಕಮಿಟಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್​ಗೆ ಮಾತ್ರ ಸ್ಥಾನ ನೀಡಲಾಗಿದ್ದು ಎಂ.ಬಿ ಪಾಟೀಲ್, ಪರಮೇಶ್ವರ್, ಹರಿಪಸ್ರಾದ್​ರನ್ನು ಕಾಂಗ್ರೆಸ್​ ಹೈಕಮಾಂಡ್ ಕೈ ಬಿಟ್ಟಿದೆ. ಇನ್ನು ಆ ಕಮಿಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ, ವೇಣುಗೋಪಾಲ, ಸುರ್ಜೆವಾಲ, ಮುಕುಲ್ ವಾಸ್ನಿಕ್​ಗೆ ಸ್ಥಾನ ಸಿಕ್ಕಿದೆ.
ಈ ಹೊಸ ಕಮಿಟಿ ಮೂರನೆ ಪಟ್ಟಿಯನ್ನು ತಯಾರಿಸಲಿದ್ದು ಯಾರಿಗೆ ಟಿಕೆಟ್​ ನೀಡಬೇಕು ಎನ್ನುವುದನ್ನು ಕೇವಲ ಏಳು ಜನರು ಮಾತ್ರ ನಿರ್ಧರಿಸಲಿದ್ದಾರೆ. ಮೂರನೆ ಪಟ್ಟಿಯನ್ನು ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ತಯಾರಿಸಲು ಯೋಜಿಸಲಾಗಿದ್ದು ನಾಳೆಯೇ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + five =
Remember me
