ಬೆಂಗಳೂರು:ಲಾಕ್​ಡೌನ್​ನಿಂದಾಗಿ ರಾಜಕೀಯವೇ ಚದುರಿದಂತಾಗಿದೆ. ಆಡಳಿತ ಪಕ್ಷ ಬಿಜೆಪಿ ಕರೊನಾ ಪರಿಹಾರ ಕಾರ್ಯದಲ್ಲಿ ಪಕ್ಷವನ್ನು ತೊಡಗಿಸಿಕೊಳ್ಳುವಲ್ಲಿ ಯತ್ನಿಸಿದರೆ, ಕಾಂಗ್ರೆಸ್ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಸಾಹಸ ನಡೆಸಿತು. ಇದೀಗ ಕಾಂಗ್ರೆಸ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ಸಂಘಟನೆ ಬಲಗೊಳಿಸಲು ಸರಣಿ ಸಭೆ ನಡೆಸಲು ನಿರ್ಧರಿಸಿದೆ.
2018ರ ವಿಧಾನಸಭೆ ಚುನಾವಣೆ ಸೋಲು, ಮೈತ್ರಿ ಸರ್ಕಾರದ ಪ್ರಹಸನ ಮತ್ತು ಪತನ, ಅಧ್ಯಕ್ಷರ ಬದಲು ಹೀಗೆ ವಿವಿಧ ಕಾರಣದಿಂದ ಪಕ್ಷ ಒಂದಷ್ಟು ಜಝುರಿತವಾಗಿತ್ತು. ಇಷ್ಟರ ನಡುವೆಯೂ ಗುಂಪುಗಾರಿಕೆ ಕೂಡ ನಡೆದಿತ್ತು. ಇದೀಗ ಕೆಪಿಸಿಸಿ ಹೊಸ ಅಧ್ಯಕ್ಷರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ವಿಧಾನಸಭಾ ಕ್ಷೇತ್ರಗಳ ವೀಕ್ಷಕರು, ಮಾಜಿ ಉಸ್ತುವಾರಿ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರವಾರು ನೇಮಕಗೊಂಡ ಸಂಯೋಜಕರು, ಎಲ್ಲ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮಾಜಿ ಸಂಸದರು ಮತ್ತು 2019ರ ಚುನಾವಣೆಯಲ್ಲಿ ಸ್ಪರ್ಧಿಸಿದವರು, ಎನ್​ಎಸ್​ಯುುಐ, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, 2018ಕ್ಕಿಂತ ಹಿಂದಿನ ಮಾಜಿ ಶಾಸಕರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು, ವಿವಿಧ ನಿಗಮ, ಮಂಡಳಿಗಳ ಮಾಜಿ ಅಧ್ಯಕ್ಷ- ಉಪಾಧ್ಯಕ್ಷರು, ಎಲ್ಲ ಘಟಕ-ಕೋಶಗಳ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರನ್ನು ಪ್ರತ್ಯೇಕವಾಗಿ ಆಹ್ವಾನಿಸಿ ಸಭೆ ನಡೆಸಲಾಗುತ್ತಿದೆ. ಮೇ 19ರಿಂದ 23ರವರೆಗೂ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಯುವುದು. ಕೊನೆಯ ದಿನ ಕೆಪಿಸಿಸಿ ಸರ್ವ ಸದಸ್ಯರ ಸಭೆಯನ್ನೂ ಕರೆಯಲಾಗುತ್ತಿದೆ. ಈ ಮೂಲಕ ಎಲ್ಲರನ್ನೂ ಒಟ್ಟಾಗಿ ಒಂದೇ ವೇದಿಕೆಯಡಿ ಕರೆತರುವುದು, ಅವರಿಗೆ ಮುಂದಿನ ರೂಪುರೇಷೆಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ಇಡೀ ಸರಣಿ ಸಭೆಯ ಉದ್ದೇಶವಾಗಿದೆ.
ಇದನ್ನೂ ಓದಿ:ಲಾಕ್‌ಡೌನ್‌ನಿಂದಾಗಿ ಸಾನಿಯಾ-ಮಲಿಕ್ ದೂರ!
ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ಸೋಲು ಹಾಗೂ ಸರ್ಕಾರ ಇಲ್ಲದೇ ಇರುವುದರಿಂದ ಪಕ್ಷದ ಜಿಲ್ಲಾಮಟ್ಟದ ಪ್ರಮುಖರು, ಮುಖಂಡರು ಕ್ರಿಯಾಶೀಲರಾಗಿಲ್ಲ. ಅವರೆಲ್ಲರನ್ನು ಪುನಃ ಪಕ್ಷದ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರೊನಾ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಂಗಳವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೊಷಣೆ ಮಾಡಿರುವ ಪ್ಯಾಕೇಜ್​ಗಳು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗ್ರಾಮ ಪಂಚಾಯಿತಿ ಚುನಾವಣೆ, ವಿವಿಧ ಯೋಜನೆಗಳ ರದ್ದು ಹಾಗೂ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳು, ಮುಂದೆ ಕೈಗೆತ್ತಿಕೊಳ್ಳಬೇಕಾದ ಹೋರಾಟದ ಬಗ್ಗೆಯೂ ಸಭೆ ಚರ್ಚಿಸಲಿದೆ.
ಇದನ್ನೂ ಓದಿ:ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ವಲಸೆ ಕಾರ್ಮಿಕರಿಗೆ ಕೊಟ್ರು ಸಿಹಿ ಸುದ್ದಿ
ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇ 19ರಿಂದ 23ರವರೆಗೆ ಸಭೆ ಕರೆದಿದ್ದಾರೆ. ಸಂಘಟನೆ ಕ್ರಿಯಾಶೀಲವಾಗಿಡಲು ಚಟುವಟಿಕೆ ನಡೆಯಲಿದೆ.
| ಸಲೀಂ ಅಹ್ಮದ್ಕೆಪಿಸಿಸಿ ಕಾರ್ಯಾಧ್ಯಕ್ಷ
ಲಾಕ್​ಡೌನ್​ 4.0: ಹೊಸ ಮಾರ್ಗಸೂಚಿ ಅನ್ವಯ ದೇಶದಲ್ಲಿ ಈ ಎಲ್ಲವೂ ಬಂದ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
