ಬೆಂಗಳೂರು:ಡಿಸಿಎಂ ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸಿರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಕೇಸರಿ ಈ ಧರ್ಮದ, ದೇಶದ ಸಂಕೇತವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಯತ್ನಾಳ್ ಮಾತಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಪೊಲೀಸ್ ಇಲಾಖೆಯನ್ನು ಹಸಿರೀಕರಣ ಮಾಡುವುದಿಲ್ಲ. ಕೇಸರೀಕರಣವೂ ಮಾಡುವುದಿಲ್ಲ. ಬದಲಾಗಿ ಸಂವಿಧಾನೀಕರಣ ಮಾಡುತ್ತೇವೆ ಎಂದು ಹೇಳಿದೆ.
ಇನ್ನು ಮುಂದೆ ಸಂಸ್ಕಾರವಿಲ್ಲದ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಹಿತಕ್ಕಾಗಿ ನಮ್ಮ ಸಲಹೆ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ. ಹಾಗೆಯೇ ನಿಮ್ಮ ಪಕ್ಷದಲ್ಲಿ ಚುನಾವಣಾ ಸೋಲಿನ ಹೊಣೆ ಹೊರುವವರು ಯಾರೆಂಬುದನ್ನು ಮೊದಲು ಹೇಳಿ ಎಂದು ಕಾಂಗ್ರೆಸ್ ಯತ್ನಾಳ್ ಅವರನ್ನು ಪ್ರಶ್ನಿಸಿದೆ.
ಇದನ್ನೂ ಓದಿ:ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡಲ್ಲ: ಡಿಕೆಶಿ
ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡುವುದಿಲ್ಲ. ದೇಶದ ಬಗ್ಗೆ ಗೌರವ ಇದ್ದರೆ ರಾಷ್ಟ್ರ ಧ್ವಜ ಹಾಕಿಕೊಂಡು ಕೆಲಸ ಮಾಡಬೇಕಿತ್ತು. ನಮ್ಮ ಸರ್ಕಾರ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದು ಮಂಗಳವಾರ ವಿಧಾನಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದರು.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರ? ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ. ಪೊಲೀಸರು ಕೇಸರಿಶಾಲು ಹಾಕ್ಕೊಂಡ್ರೆ ತಪ್ಪೇನಿದೆ? ಎಂದು ಕಾಂಗ್ರೆಸ್​​ಗೆ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ:ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ?: ಬಸನಗೌಡ ಪಾಟೀಲ್ ಯತ್ನಾಳ್
ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡಗಳು ಮುಗಿಯುತ್ತವೆ. 2024ಕ್ಕೆ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿ.ಕೆ ಶಿವಕುಮಾರ್​ಗಳು ಬಂದ್ರು ಏನು ಆಗೋದಿಲ್ಲ ಎಂದು ಹೇಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
