ಬೆಂಗಳೂರು:ಬಿಜೆಪಿಯ ನಾಯಕರಾದ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಎಂ.ಪಿ. ರೇಣುಕಾಚಾರ್ಯ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ (Tweet) ಮೂಲಕ ವ್ಯಂಗ್ಯವಾಡಿದೆ.
ಇದನ್ನೂ ಓದಿ:ತಂಪು ಪಾನೀಯ ಕುಡಿಯುವವರೇ ಎಚ್ಚರ: ಇದರಲ್ಲಿದೆ ಕ್ಯಾನ್ಸರ್​ಕಾರಕ ಅಂಶ​…
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ (Congress), “ಬಡವರ ಅನ್ನ ಕಿತ್ತುಕೊಂಡಿದ್ದಕ್ಕೆ ಸೋಲಾಗಿದೆ ಎಂದು ಬಿಜೆಪಿಯ ರೇಣುಕಾಚಾರ್ಯ ಪ್ರಾಮಾಣಿಕ ವಿಮರ್ಶೆ ಮಾಡಿಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮದೇ ಪಕ್ಷದ ರೇಣುಕಾಚಾರ್ಯರ ಈ ಮಾತುಗಳನ್ನು ಕೇಳಿ ತಾವು ತಲೆತಗ್ಗಿಸಿ ನಿಲ್ಲಬೇಕಿತ್ತು. ನಿಮಗೆ ಪಾಪಪ್ರಜ್ಞೆ ಕಾಡಬೇಕಿತ್ತು. ಅದು ಬಿಟ್ಟು ನಮ್ಮ ಅನ್ನಭಾಗ್ಯದ ಬಗ್ಗೆ ಕುಹುಕದ ಮಾತಾಡುತ್ತಿದ್ದೀರಿ ಎಂದರೆ ನಿರ್ಲಜ್ಜತನದ ಪರಮಾವಧಿಗೆ ತಲುಪಿದ್ದೀರಿ ಎಂದೇ ಅರ್ಥ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ಹಾವೇರಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ; ಶಾಸಕ ರುದ್ರಪ್ಪ ಲಮಾಣಿಗೆ ಡಿಎಸ್‌ಎಸ್ ಆಗ್ರಹ
ಮತ್ತೊಂದು ಟ್ವೀಟ್​​ನಲ್ಲಿ, “ಮಣಿಪುರ ಹಿಂಸಾಚಾರ ನಡೆದು 2 ತಿಂಗಳಾಗಿದೆ, ಆದ್ರೆ ಪ್ರಧಾನಿ ಮೋದಿ ಹಿಂಸಾಚಾರವನ್ನು ಖಂಡಿಸಲಿಲ್ಲ, ಶಾಂತಿಗಾಗಿ ಮನವಿ ಮಾಡಲಿಲ್ಲ. ಗೃಹ ಸಚಿವರ ಭೇಟಿಯ ನಂತರ ಹಿಂಸಾಚಾರ ಉಲ್ಬಣಗೊಂಡಿದೆ. ಹಿಂಸಾಚಾರವನ್ನು ತಡೆಯಬೇಕಾದವರು ರಾಹುಲ್ ಗಾಂಧಿ ಅವರನ್ನು ತಡೆಯುತ್ತಿದ್ದಾರೆ. ಹತ್ರಾಸ್, ಲಖಿಂಪುರಕ್ಕೆ ಹೋಗುವಾಗಲೂ ರಾಹುಲ್ ಗಾಂಧಿ ಅವರನ್ನು ತಡೆದರು, ಆದರೆ ಅವರು ಎಲ್ಲಿಗೆ ಹೋಗಬೇಕೆಂದು ಹೊರಟರೂ ಅಲ್ಲಿಗೆ ತಲುಪುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮಣಿಪುರಕ್ಕೆ ಶಾಂತಿ ಬೇಕು, ಸಂಘರ್ಷವಲ್ಲ” ಎಂದು ಟ್ವೀಟ್ ಮಾಡಿ ಬಿಜೆಪಿಗೆ ತಿರುಗೇಟು ನೀಡಿದೆ.
ರಾಜ್​​ ಬಿ.ಶೆಟ್ಟಿ ನಟನೆಯ ಟೋಬಿ ಚಿತ್ರದ ಫಸ್ಟ್​ ಲುಕ್​ ರಿಲೀಸ್​; ಪ್ರೇಕ್ಷಕರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
