ಬೆಂಗಳೂರು:ಪರಿಶಿಷ್ಟ ಜಾತಿ ಒಳ ಮೀಸಲು, ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಮೀಸಲು ಪ್ರಮಾಣ ಹೆಚ್ಚಳ ಮತ್ತು ಅಸಂವಿಧಾನಿಕವಾಗಿದ್ದ ಮುಸ್ಲಿಮರಿಗೆ ಶೇಕಡ 4 ಮೀಸಲು ರದ್ದು ಮಾಡಿದ ರಾಜ್ಯ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದು, ವಾಸ್ತವಿಕ ನೆಲೆಗಟ್ಟಿನ ದಿಟ್ಟ ನಡೆಯಾಗಿದೆ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಪ್ರಶಂಸಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ವೋಟ್ ಬ್ಯಾಂಕ್ ಛಿದ್ರ, ತುಷ್ಟಿಕರಣ ರಾಜಕಾರಣಕ್ಕೆ ಹೊಡೆತ ಬಿದ್ದಿರುವುದರಿಂದ ಕಾಂಗ್ರೆಸ್ ಅಳಲು ತೋಡಿಕೊಳ್ಳುತ್ತಿದ್ದು, ಈ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಶಕುನಿ ಎಂದು ಟೀಕಿಸಲಾರಂಭಿಸಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಪಿಎಸ್​ಐ ನೇಮಕಾತಿ ಹಗರಣ; ಗರ್ಲ್​ಫ್ರೆಂಡ್ ಸಹಾಯದಿಂದ ತಲೆಮರೆಸಿಕೊಂಡಿದ್ದ PSI ನವೀನ್ ಬಂಧನ
ಪ್ರಶ್ನೆಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಶೇ4 ಮೀಸಲು ವಾಪಸ್ ಕೊಡುತ್ತೇವೆ ಎನ್ನುತ್ತಿದ್ದಾರೆ. ಯಾವ ಸಮುದಾಯಗಳಿಂದ ಕಿತ್ತುಕೊಂಡು ವಾಪಸ್ ಕೊಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಲಿ ಎಂದು ಸವಾಲೆಸೆದರು.
ಇತರೆ ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್​ಗೆ ಏಕಿಷ್ಟು ದ್ವೇಷ, ಆಕ್ರೋಶವೆಂಬುದು ಅರ್ಥವಾಗುತ್ತಿಲ್ಲ. ಅನೇಕ ಹಿಂದುಳಿದ ವರ್ಗಗಳ ನಾಯಕರಿಗೆ ಅಪಮಾನ ಮಾಡಿದ ಐತಿಹಾಸಿಕ ಉದಾಹರಣೆಗಳಿವೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು.
ರಾಹುಲ್​ ಗಾಂಧಿ ಅನರ್ಹತೆ ವಿಚಾರ: ಅಮೆರಿಕ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

“ಜೈ ಶ್ರೀ ರಾಮ್” ಕೂಗಲು ನಿರಾಕರಿಸಿದ ಅನ್ಯಧರ್ಮದವನ ಗಡ್ಡ ಕತ್ತರಿಸಿ ಪರಾರಿಯಾದ ಮುಸುಕುಧಾರಿಗಳು

ಒಂದೇ ಒಂದು ತಪ್ಪಿನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ; ರಾತ್ರಿಯಿಡೀ ಮೊಬೈಲ್ ಚಾರ್ಚ್​ ಇಡುವ ಮುನ್ನ ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
