ಕರೊನಾ ನಿರ್ವಹಣೆ ವಿಚಾರದಲ್ಲಿ ಆಡಳಿತ-ಪ್ರತಿಪಕ್ಷಗಳ ಕಿತ್ತಾಟ ತಾರಕಕ್ಕೇರಿದ್ದು, ಗುರುವಾರ ಮತ್ತೊಂದು ಸುತ್ತಿನ ಪರಸ್ಪರ ವಾಗ್ದಾಳಿ ನಡೆದಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಕರೆದು ಕರೊನಾ ನಿರ್ವಹಣೆ ವಿಚಾರದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಆರೋಪಿಸಿ ಚಿವುಟಿದ್ದಾರೆ. ಅದಕ್ಕೆ ಪ್ರತಿಯಾಗಿ ತಕ್ಷಣ ಸುದ್ದಿಗೋಷ್ಠಿ ಕರೆದ ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಆರು ಸಚಿವರು ಸಮಜಾಯಿಷಿಯ ಪಂಚ್ ನೀಡಿದ್ದಾರೆ.
ಬೆಂಗಳೂರು:ಕರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರ 4 ತಿಂಗಳಲ್ಲಿ 4,167 ಕೋಟಿ ರೂ. ಖರ್ಚು ಮಾಡಿದೆ. ಅದರಲ್ಲಿ 2 ಸಾವಿರ ಕೋಟಿ ರೂ. ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದ್ದು, ಕೂಡಲೇ ಸರ್ಕಾರ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಹಾಗೂ ಅಧಿವೇಶನ ಕರೆಯಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕರೊನಾ ನಿರ್ವಹಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಸರ್ಕಾರ ಪ್ರತಿ ಪೈಸೆ ಖರ್ಚಿಗೂ ಜನರಿಗೆ ಲೆಕ್ಕ ಕೊಡಬೇಕು ಎಂದರು.
ಡಿಸಿಎಂ, ಆರೋಗ್ಯ ಸಚಿವರು 3 ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ಕರೊನಾ ಉಪಕರಣಗಳ ಖರೀದಿಗೆ 324 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ ಎಂದಿದ್ದಾರೆ. ದುಬಾರಿ ದರಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲ ಸಾಮಗ್ರಿಗಳು ಬರಬೇಕಿದ್ದರೂ ಒಪ್ಪಂದದಿಂದಾಗಿ ಹಣ ಪಾವತಿಸ ಬೇಕಾಗುತ್ತದೆ. ಸಚಿವರು ಆರೋಗ್ಯ ಇಲಾಖೆಯಲ್ಲಿ ಪಾವತಿಸಿದ ಹಣದ ಬಗ್ಗೆ ಮಾತ್ರ ಹೇಳಿದ್ದು, ಪಾವತಿಸಬೇಕಾದ್ದರ ಬಗ್ಗೆ ಬಾಯ್ಬಿಟ್ಟಿಲ್ಲ ಎಂದರು.
ಮುಚ್ಚಿಟ್ಟಿದ್ದು ಏಕೆ?:ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯ ಅರೆಬರೆ ಉತ್ತರ ಬಿಟ್ಟರೆ ಈ ವರೆಗೆ ಬೇರೆ ಇಲಾಖೆಗಳಿಗೆ ಬರೆದ ಪತ್ರಗಳಿಗೆ ಉತ್ತರ ಬಂದಿಲ್ಲ. ಸರ್ಕಾರ ಪ್ರಾಮಾಣಿಕವಾಗಿದ್ದರೆ, ಮುಚ್ಚಿಡುವ ಯತ್ನವೇಕೆೆ? ನಾನು ಮಾಹಿತಿ ಸಂಗ್ರಹಿಸಿದರೆ ಸುಳ್ಳು ಎನ್ನುತ್ತೀರಿ. ಹಾಗಾದರೆ ನೀವೇ ಸತ್ಯ ಬಹಿರಂಗ ಮಾಡಿ ಎಂದು ಆಡಳಿತ ಪಕ್ಷಕ್ಕೆ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ಹೇಳುವುದೊಂದು…
ಬಿ.ಎಲ್. ಸಂತೋಷ್ ಸ್ವದೇಶಿ, ಸ್ವಾವಲಂಬನೆ ಎಂದು ಭಾಷಣ ಮಾಡುತ್ತಾರೆ. ಅವರದೇ ಸರ್ಕಾರ ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಿದೆ. ದೇಶದ ಸೈನಿಕರು ಸತ್ತರೂ ಇವರು ಅವರಿಂದ ಕಿಟ್ ಖರೀದಿಸುತ್ತಾರೆ. ಇವರು ಹೇಳುವುದೊಂದು, ಮಾಡುವುದೊಂದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಸಿದ್ದರಾಮಯ್ಯ-ಡಿಕೆಶಿ ಪ್ರಶ್ನೆಗಳು
ಸರ್ಕಾರದ ಖರ್ಚುಗಳ ವಿವರ…
ಸಲಕರಣೆಗಳ ಖರೀದಿ: 506 ಕೋಟಿ ರೂ. ತುರ್ತು ಅಗತ್ಯ, ಬಾಧಿತರಿಗೆ ಪರಿಹಾರ: 1,611.11 ಕೋಟಿ ರೂ. ಕರೊನಾ ನಿರ್ವಹಣೆಗೆ ಮಾರ್ಚ್​ನಿಂದ ಈವರೆಗೆ ಒಟ್ಟು ವೆಚ್ಚ: 2,118.27 ಕೋಟಿ ರೂ. (ಜಿಲ್ಲಾ ಆಡಳಿತ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಕಾರಾಗೃಹ, ಬಿಬಿಎಂಪಿ ಖರ್ಚು-ವೆಚ್ಚಗಳು ಒಟ್ಟು ವ್ಯಯವಾದ ಮೊತ್ತ)
ಇಲಾಖೆವಾರು ವಿಂಗಡಣೆ:
ಕರೊನಾ ನಿರ್ವಹಣೆಯಲ್ಲಿ ನಯಾಪೈಸೆಯೂ ದುರ್ಬಳಕೆಯಾಗಿಲ್ಲ. ಪರಿಕರಗಳ ಖರೀದಿಯೂ ಸೇರಿ ಈವರೆಗೆ ಖರ್ಚಾಗಿರುವುದೇ 2,118.27 ಕೋಟಿ ರೂ. ಮಾತ್ರ. ಇನ್ನು 2000 ಕೋಟಿ ರೂ. ಅಕ್ರಮ ಎಲ್ಲಿಂದ? ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪ್ರತಿಪಕ್ಷದ ಆರೋಪದ ಬೆನ್ನಿಗೇ ಸುದ್ದಿಗೋಷ್ಠಿ ಕರೆದ ಡಿಸಿಎಂ ಡಾ. ಅಶ್ವತ್ಥನಾರಾಯಣ್, ಸಚಿವರಾದ ಆರ್. ಅಶೋಕ್, ಬಿ. ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್​ನ ಆರೋಪ ಸುಳ್ಳಿನ ಕಂತೆ ಎಂದು ದಾಖಲೆ ಸಹಿತ ವಾಗ್ದಾಳಿ ನಡೆಸಿದರು. ದೀರ್ಘಾವಧಿ ಆಡಳಿತ ನಡೆಸಿ, ಸಾವಿರಾರು ಹಗರಣಗಳನ್ನೆಸಗಿ ಲೂಟಿ ಹೊಡೆದವರು, ತುರ್ತು ಆರೋಗ್ಯ ಪರಿಸ್ಥಿತಿಗೆ ಸ್ಪಂದಿಸುವ ಬದಲಿಗೆ ಜನರಲ್ಲಿ ವಿಷಬೀಜ ಬಿತ್ತಿ, ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು. ಈಗ ಜನರ ಜೀವ-ಜೀವನ ರಕ್ಷಣೆಯೇ ಮುಖ್ಯ. ಪ್ರತಿಪಕ್ಷಗಳು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಹೋಗೋಣ ಎಂಬುದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಇಚ್ಛೆ. ಆದರೆ ಪ್ರತಿಪಕ್ಷ ಇದನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು. ಆರೋಗ್ಯ ಇಲಾಖೆ ಈಗಾಗಲೇ ಎಲ್ಲ ಲೆಕ್ಕಪತ್ರ ಕೊಟ್ಟ ಬಳಿಕವೂ ಮತ್ತೆ ಸರ್ಕಾರದ ಮೇಲೆ ದಾಖಲೆರಹಿತ ಆಪಾದನೆ ಹೊರಿಸಲಾಗಿದೆ. ಮಾನವೀಯತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಸರ್ಕಾರಕ್ಕೆ ಬೆನ್ನು ತಟ್ಟುವುದು ಬೇಡ, ಬೆನ್ನಿಗೆ ಇರಿಯುವ ಕೆಲಸ ಮಾಡಬಾರದು ಎಂದು ಸಚಿವರು ಕುಟುಕಿದರು.
ಜು.31ರ ವರೆಗೆ ಎಲ್ಲ ಮದ್ಯದಂಗಡಿಗಳು ಓಪನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
