ಬೆಂಗಳೂರು:ಕರೊನಾ ನಿರ್ವಹಣೆಗೆ ಕಾಂಗ್ರೆಸ್​ ಹಮ್ಮಿಕೊಂಡ “ಆರೋಗ್ಯ ಹಸ್ತ’ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ.
ಜಿಲ್ಲಾ ಕಾಂಗ್ರೆಸ್​, ಬ್ಲಾಕ್​ ಕಾಂಗ್ರೆಸ್​, ಶಾಸಕರು ಅಥವಾ 2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಕಾಂಗ್ರೆಸ್​ ಕರೊನಾ ವಾರಿಯರ್ಸ್​ ಪಟ್ಟಿ ತಯಾರಿಸಲು ಮತ್ತು ಈ ಸಂಬಂಧ ಕಾರ್ಯನಿರ್ವಹಿಸುವ ಸಲುವಾಗಿ ಶಾಸಕ ಅಜಯ್​ ಸಿಂಗ್​ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್​ ವಾರಿಯರ್ಸ್​ಗೆ ವಿಮೆ ನೀಡುವ ಸಂಬಂಧ ಇಬ್ಬರು ಸಂಚಾಲಕರು ಮತ್ತು 17 ಸದಸ್ಯರನ್ನೊಳಗೊಂಡ ಸಮಿತಿ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಶನಿವಾರ ಪ್ರಕಟಿಸಿದರು.
ಇದನ್ನೂ ಓದಿರಿತಾರಕಕ್ಕೇರಿದೆ ‘ಕುದುರೆ’ ವಿಷ್ಯ; ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ ‘ಸತ್ತ ಕುದುರೆ’!
‘ಆರೋಗ್ಯ ಹಸ್ತ’ ಕಾರ್ಯಕ್ರಮವನ್ನು ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಗುರುವಾರ ಉದ್ಘಾಟಿಸಿದ್ದ ಡಿ.ಕೆ ಶಿವಕುಮಾರ್, ‘ಕೆಪಿಸಿಸಿ ವೈದ್ಯರ ಘಟಕವು ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಅಧ್ಯಾಯ ಬರೆದಿದೆ. ಈ ಕಾರ್ಯಕ್ರಮ ಜನರ ಬಳಿಗೆ ಹೋಗಬೇಕು. ಕಾಂಗ್ರೆಸ್ ಕೇವಲ ಅಧಿಕಾರಕ್ಕೆ ಮಾತ್ರವಲ್ಲ, ಕಷ್ಟದಲ್ಲಿರುವ ಜನರ ಸೇವೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಹೇಳಿದ್ದರು.
‘ಪ್ರತಿ ಪಂಚಾಯಿತಿ ಮತ್ತು ವಾರ್ಡ್ ಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಅವರನ್ನು ಕರೊನಾ ಕಾಂಗ್ರೆಸ್ ವಾರಿಯರ್ ಎಂದು ಕಳಿಸಿಕೊಡಲಾಗುತ್ತಿದೆ. ರಾಜ್ಯಾದ್ಯಂತ 15 ಸಾವಿರ ಯುವಕರನ್ನು ಕಾಂಗ್ರೆಸ್ ವಾರಿಯರ್ ಎಂದು ಗುರುತಿಸಲಾಗಿದೆ. ಈ ವಾರಿಯರ್​ಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅವರಿಗೆ ವಿಮೆ ಮಾಡಿಸಲಾಗುತ್ತಿದೆ’ ಎಂದು ವಿವರಿಸಿದ್ದರು.
ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕರು, ಪೌರ ಕಾರ್ಮಿಕರು, ಪೊಲೀಸರು, ಹೋಂ ಗಾರ್ಡ್​ಗಳು, ಪೌರರಕ್ಷಣಾ ದಳ, ಅಗ್ನಿಶಾಮಕ ಸಿಬ್ಬಂದಿ, ಬಂದೀಖಾನೆ, ಸ್ಯಾನಿಟೈಸರ್ ಕಾರ್ಮಿಕರು ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ವಿಮೆ ಪರಿಹಾರ ನೀಡುವುದಾಗಿ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ.
ಇದೀಗ ಕಾಂಗ್ರೆಸ್​ ಹಮ್ಮಿಕೊಂಡಿರುವ “ಆರೋಗ್ಯ ಹಸ್ತ’ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ.
ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
