ಬೆಂಗಳೂರು :ಲಸಿಕೆ ಹಾಕಿಸಿಕೊಳ್ಳೋ ನೆಪದಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದ ಕಾಂಗ್ರೆಸ್​ ನಾಯಕರೊಬ್ಬರನ್ನು ತಡೆದ ನಗರ ಪೊಲೀಸರಿಗೆ ಫುಲ್ ಹೈಡ್ರಾಮಾ ನೋಡುವ ಅವಕಾಶ ಸಿಕ್ಕಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಮಿಟಿ (ಕೆಪಿಸಿಸಿ) ಸಂಚಾಲಕರಾದ ಬಾಲಾಜಿ ಲಾಕ್​ಡೌನ್​ ರೂಲ್ಸ್​ ಬ್ರೇಕ್ ಮಾಡಿ ಸಿಕ್ಕಿಬಿದ್ದಿದ್ದಾರೆ.
ಆಡಿ ಕ್ಯೂ7 ಕಾರಿನಲ್ಲಿ ಬೇಕಾ ಬಿಟ್ಟಿ ಸಂಚಾರ ಮಾಡುತ್ತಿದ್ದ ಬಾಲಾಜಿ ಅವರನ್ನು ಸಿಟಿ ಮಾರ್ಕೆಟ್​ ಸಮೀಪ ಪೊಲೀಸರು ತಡೆದಾಗ, ಮೊದಲಿಗೆ “ನಾನೊಬ್ಬ ಕರೋನ ವಾರಿಯರ್” ಎಂದು ಅವರು ಹೇಳಿದ್ದಾರೆ. ಆಮೇಲೆ, “ವ್ಯಾಕ್ಸಿನ್ ಹಾಕಿಸೋದಕ್ಕೆ ಹೋಗ್ತಾ ಇದೀನಿ. 10 ಜನ ಇದ್ದಾರೆ, ಅವರಿಗೆ ವ್ಯಾಕ್ಸಿನ್ ಕೊಡಿಸೋಕೆ ಹೋಗ್ತಾ ಇದೀನಿ” ಎಂದಿದ್ದಾರೆ.
ಇದನ್ನೂ ಓದಿ:‘ನಾನು ಉಪೇಂದ್ರ, ಮುಖ್ಯಮಂತ್ರಿ ಆಗ್ಬೇಕು, ನೀವು ಗೆಲ್ಲಿಸ್ತೀರಾ? ಎಲ್ಲಾ ಕೆಲ್ಸ ಪಾರದರ್ಶಕತೆಯಿಂದ ಮಾಡ್ತೇನೆ’
ಬಳಿಕ “ನಾನು ನನ್ನ ಸ್ನೇಹಿತನಿಗೆ ವ್ಯಾಕ್ಸಿನ್ ಹಾಕಿಸೋಕೆ ಹೊರಟಿರುವೆ” ಎಂದು ಮಾತು ಬದಲಿಸಿದ ಬಾಲಾಜಿ, ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ಯಾವುದೇ ದಾಖಲಾತಿಯಿಲ್ಲದೆ, ಬೇಕಾಬಿಟ್ಟಿ ಓಡಾಡೋಕೆ ಸುಳ್ಳು ಹೇಳುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಬಾಲಾಜಿ ಜೊತೆಯಿದ್ದ ವ್ಯಕ್ತಿ ಫುಲ್ ಆ್ಯಕ್ಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. “ನಾನು ಕರೋನ ಪೇಷೆಂಟ್. ನನ್ನ ಬಳಿ ಬರಬೇಡಿ. ವಿಡಿಯೋ ಚಿತ್ರಿಕರಣ ಮಾಡ್ಬೇಡಿ” ಎಂದು ಹೈ ಡ್ರಾಮಾ ಮಾಡಿದರು ಎನ್ನಲಾಗಿದೆ.
‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !

17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

ರೇಷನ್​ ನಿರಾಕರಿಸಿದರೆ 1967 ಸಹಾಯವಾಣಿಗೆ ದೂರು ನೀಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nineteen =
Remember me
