ಬೆಂಗಳೂರು:ಕರೊನಾ ಛಾಯೆ ನಡುವೆಯೂ ನಾಡಿನ ಜನತೆ ಶಕ್ತಾನುಸಾರ ‘ವರಮಹಾಲಕ್ಷ್ಮೀ’ ಹಬ್ಬ ಆಚರಿಸುತ್ತಿದ್ದು, ‘ಲಕ್ಷ್ಮೀ’ ನಾಮಸ್ಮರಣೆ ಮೇಳೈಸಿದೆ. ಆದರೆ, ಯುವ ಕಾಂಗ್ರೆಸ್​ನ ಕಾರ್ಯಕರ್ತರು ಸಿ.ಪಿ.ಯೋಗೇಶ್ವರ್​ ನಾಯಕ ನಟನಾಗಿ ಅಭಿನಯಿಸಿರುವ ‘ಸೈನಿಕ’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಅರೆ, ಇದೇನಿದು ಕಾಂಗ್ರೆಸ್​ನ ಬದ್ಧವೈರಿಯಂತಿರುವ… ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ವಾಕ್ಸಮರ ಸಾರುತ್ತಿರುವ ಸಿ.ಪಿ.ಯೋಗೇಶ್ವರ್​ ಅವರನ್ನು ಕಂಡರೆ ‘ಕೈ’ ಕಾರ್ಯಕರ್ತರಿಗೆ ಅಷ್ಟೋಂದು ಅಭಿಮಾನವೇ? ಎಂದೆಲ್ಲ ಯೋಚಿಸಬೇಡಿ. ಇದು ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿಪ್ರತಿಮೆ ಬಳಿ ಶುಕ್ರವಾರ ಯೋಗೇಶ್ವರ್ ವಿರುದ್ಧ ಸಿನಿಮಾ ಸ್ಟೈಲ್​ನಲ್ಲಿ ಕುಣಿದು ಕುಪ್ಪಳಿಸುತ್ತ ಆಕ್ರೋಶ ಹೊರಹಾಕಿದ ಪರಿ. ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್​ ಮತ್ತು ಸಿ.ಪಿ.ಯೋಗೇಶ್ವರ್​ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಕೆಟ್​ ಹಿಡಿದು ಸಿನಿಮಾ ಹಾಡಿಗೆ ಡಾನ್ಸ್​ ಮಾಡುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್​ ಆಗಿದೆ.
ಇದನ್ನೂ ಓದಿರಿಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್
ವಿಧಾನ ಪರಿಷತ್​ಗೆ ನಾಮನಿರ್ದೇಶನಗೊಂಡ ಬಳಿಕ ಸಿ.ಪಿ.ಯೋಗೇಶ್ವರ್, ಡಿಕೆಶಿ ಮತ್ತು ಎಚ್​ಡಿಕೆ ಅವರನ್ನು ನಿವೃತ್ತ ಕುದುರೆಗಳು ಎಂದು ಲೇವಡಿ ಮಾಡಿದ್ದರು. ಇದಾದ ಬೆನ್ನಲ್ಲೇ ಮಾಜಿಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಡಿಕೆ ಬ್ರದರ್ಸ್ ತೊಂದರೆ ನೀಡುತ್ತಿದ್ದಾರೆ. ಬಿಜೆಪಿಗೆ ಎಚ್​ಡಿಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಕುಮಾರಸ್ವಾಮಿ ಮತ್ತು ಜೆಡಿಎಸ್​ ಕಾರ್ಯಕರ್ತರು ಬಿಜೆಪಿಗೆ ಬರಲು ಮುಕ್ತ ಅವಕಾಶವಿದೆ ಎನ್ನುವ ಮೂಲಕ ಬಹಿರಂಗವಾಗಿಯೇ ಆಹ್ವಾನಿಸಿದ್ದರು.
ಯೋಗೇಶ್ವರ್​ರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಾರೀ ಸಂಚಲನ ಮೂಡಿಸಿತ್ತು. ಡಿಕೆ ಬ್ರದರ್ಸ್​ ಎಚ್​ಡಿಕೆಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಯೋಗೇಶ್ವರ್ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಪಿವೈ ಮುಖವಾಡಧಾರಿಗಳಾದ ಕಾಂಗ್ರೆಸ್​ ಕಾರ್ಯಕರ್ತರು ಬಕೆಟ್ ಹಿಡಿದುಕೊಂಡು ‘ಬಕೆಟ್ ಯೋಗೇಶ್ವರ್’ ಎಂದು ಘೋಷಣೆ ಕೂಗಿದರು. ಯೋಗೇಶ್ವರ್​ ಅಭಿನಯದ ಸಿನಿಮಾ ಹಾಡಿಗೆ ಬಕೆಟ್​ ಹಿಡಿದುಕೊಂಡೇ ಡ್ಯಾನ್ಸ್​ ಮಾಡಿ ವ್ಯಂಗ್ಯವಾಡಿದರು.
https://www.facebook.com/VVani4U/videos/295354101785658/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
